ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯಲ್ಲಿ ಎಚ್.ಡಿ. ಕುಮಾರಸ್ವಾಮಿಗೆ ಸ್ಥಾನ

ನವದೆಹಲಿ: ಕೇಂದ್ರ ಸರ್ಕಾರವು ಎಂಟು ಸಂಪುಟ ಸಮಿತಿಗಳನ್ನು ಪುನರ್​ರಚನೆ ಮಾಡಿದ್ದು, ಆರ್ಥಿಕ ವ್ಯವಹಾರಗಳ ಎಲ್ಲಾ ಪ್ರಮುಖ ಸಂಪುಟ ಸಮಿತಿ ಹಾಗೂ ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿಗಳಲ್ಲಿ ಎನ್​ಡಿಎ ಮಿತ್ರಪಕ್ಷಗಳ ಸದಸ್ಯರಿಗೆ ಅವಕಾಶ ಕಲ್ಪಿಸಿದೆ. ಅದರಂತೆ…

ನವದೆಹಲಿ: ಕೇಂದ್ರ ಸರ್ಕಾರವು ಎಂಟು ಸಂಪುಟ ಸಮಿತಿಗಳನ್ನು ಪುನರ್​ರಚನೆ ಮಾಡಿದ್ದು, ಆರ್ಥಿಕ ವ್ಯವಹಾರಗಳ ಎಲ್ಲಾ ಪ್ರಮುಖ ಸಂಪುಟ ಸಮಿತಿ ಹಾಗೂ ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿಗಳಲ್ಲಿ ಎನ್​ಡಿಎ ಮಿತ್ರಪಕ್ಷಗಳ ಸದಸ್ಯರಿಗೆ ಅವಕಾಶ ಕಲ್ಪಿಸಿದೆ.

ಅದರಂತೆ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯಲ್ಲಿ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಸ್ಥಾನ ಪಡೆದಿದ್ದಾರೆ. ಸಮಿತಿಯಲ್ಲಿ ರಕ್ಷಣಾ ಸಚಿವ ರಾಜನಾಥ ಸಿಂಗ್, ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಿದೇಶಾಂಗ ಸಚಿವ ಜೈ ಶಂಕರ್, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ವಾಣಿಜ್ಯ ಸಚಿವ ಪಿಯೂಶ್ ಗೋಯಲ್, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಪಂಚಾಯತ್ ರಾಜ್ ಮತ್ತು ಮೀನುಗಾರಿಕೆ ಸಚಿವ ರಾಜೀವ್ ರಂಜನ್ ಸಿಂಗ್ ಇದ್ದಾರೆ. ಭದ್ರತಾ ಸಂಪುಟ ಸಮಿತಿ, ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ, ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ,ರಾಜಕೀಯ ವ್ಯವಹಾರಗಳ ಸಮಿತಿ,ಹೂಡಿಕೆ ಮತ್ತು ಪ್ರಗತಿ ಸಮಿತಿ, ಕೌಶಲ, ಉದ್ಯೋಗ ಹಾಗೂ ಜೀವನೋಪಾಯ ಸಂಪುಟ ಸಮಿತಿಯ ಪುನರ್​ರಚನೆಯಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.