ಎಲ್ಲೆಡೆ ʼಕಲ್ಕಿʼಯದ್ದೇ ಹವಾ; ಮೊದಲ ದಿನವೇ 200 ಕೋಟಿ ರೂ. ಗಳಿಸುತ್ತಾ ಪ್ರಭಾಸ್‌-ದೀಪಿಕಾ ಜೋಡಿ?

ಮುಂಬೈ: ಸದ್ಯ ಎಲ್ಲೆಡೆ ʼಕಲ್ಕಿʼಯದ್ದೇ ಹವಾ. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿರುವ ತೆಲುಗು ಚಿತ್ರ ʼಕಲ್ಕಿ 2898 ಎಡಿʼ (Kalki 2898 AD) ಸೃಷ್ಟಿಸಿರುವ ಮ್ಯಾಜಿಕ್ಕೇ ಅಂತಹದ್ದು. ಈ ವರ್ಷದ ಅತ್ಯಂತ ದುಬಾರಿ ಚಿತ್ರ ಎನ್ನುವ ಖ್ಯಾತಿಯೂ…

ಮುಂಬೈ: ಸದ್ಯ ಎಲ್ಲೆಡೆ ʼಕಲ್ಕಿʼಯದ್ದೇ ಹವಾ. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿರುವ ತೆಲುಗು ಚಿತ್ರ ʼಕಲ್ಕಿ 2898 ಎಡಿʼ (Kalki 2898 AD) ಸೃಷ್ಟಿಸಿರುವ ಮ್ಯಾಜಿಕ್ಕೇ ಅಂತಹದ್ದು. ಈ ವರ್ಷದ ಅತ್ಯಂತ ದುಬಾರಿ ಚಿತ್ರ ಎನ್ನುವ ಖ್ಯಾತಿಯೂ ಈ ಸಿನಿಮಾಕ್ಕಿದೆ. ಟಾಲಿವುಟ್‌ ಸ್ಟಾರ್‌ ಪ್ರಭಾಸ್‌, ಬಾಲಿವುಡ್‌ ಬ್ಯೂಟಿ ದೀಪಿಕಾ ಪಡುಕೋಣೆ (Prabhas-Deepika Padukone) ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿರುವ ಈ ಸೈನ್ಸ್‌ ಫಿಕ್ಷನ್‌ ಸಿನಿಮಾ ಬಿಡುಗಡೆಗೆ ಕ್ಷಣ ಗಣನೆ ಆರಂಭವಾಗಿದೆ. ಘಟಾನುಘಟಿ ಕಲಾವಿದರಾದ ಬಾಲಿವುಡ್‌ನ ಅಮಿತಾಭ್‌ ಬಚ್ಚನ್‌ (Amitabh Bachchan) ಮತ್ತು ಕಮಲ್‌ ಹಾಸನ್‌ (Kamal Haasan) ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರ ಜೂನ್‌ 27ರಂದು ವಿಶ್ವಾದ್ಯಂತ ತೆರೆ ಕಾಣಲಿದೆ. ಈಗಾಗಲೇ ಟಿಕೆಟ್‌ ಬುಕ್ಕಿಂಗ್‌ ಆರಂಭವಾಗಿದ್ದು, ಅಭೂತಪೂರ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿ ಚಿತ್ರ ಮೊದಲ ದಿನವೇ ವಿಶ್ವಾದ್ಯಂತ ಬಾಕ್ಸ್‌ ಆಫೀಸ್‌ನಲ್ಲಿ ಸುಮಾರು 200 ಕೋಟಿ ರೂ. ಗಳಿಸಲಿದೆ ಎನ್ನುವ ಮಾತು ಕೇಳಿ ಬಂದಿದೆ.

ಟಾಲಿವುಡ್‌ನ ಪ್ರತಿಭಾವಂತ ನಿರ್ದೇಶಕ ನಾಗ್‌ ಅಶ್ವಿನ್‌ ಆ್ಯಕ್ಷನ್‌ ಕಟ್‌ ಹೇಳಿರುವ ʼಕಲ್ಕಿʼ ಚಿತ್ರದ ಅಡ್ವಾನ್ಸ್‌ ಬುಕ್ಕಿಂಗ್‌ ಶರವೇಗದಲ್ಲಿ ಸಾಗುತ್ತಿದೆ. ವಿಶೇಷ ಎಂದರೆ ʼಕಲ್ಕಿʼ ಎಲ್ಲ 210 ಐಮ್ಯಾಕ್ಸ್‌ (IMAX) ತೆರೆಗಳಲ್ಲಿ ಬಿಡುಗಡೆಯಾಗಲಿರುವ ಮೊದಲ ಭಾರತೀಯ ಸಿನಿಮಾ ಎನಿಸಿಕೊಳ್ಳಲಿದೆ. ಈ ತೆರೆಗಳಲ್ಲಿ ಹಿಂದಿ, ತಮಿಳು ಮತ್ತು ತೆಲುಗುಗಳಲ್ಲಿ ʼಕಲ್ಕಿʼಯ 2ಡಿ ಮತ್ತು 3ಡಿ ಆವೃತ್ತಿ ರಿಲೀಸ್‌ ಆಗಲಿದೆ.

ʼಬಾಹುಬಲಿ 2ʼ ಮತ್ತು ʼಆರ್‌ಆರ್‌ಆರ್‌ʼ ಚಿತ್ರಗಳ ಬಳಿಕ ಜಾಗತಿಕವಾಗಿ ಮೊದಲ ದಿನವೇ 200 ಕೋಟಿ ರೂ. ಗಳಿಸುವ ಮೂರನೇ ಭಾರತೀಯ ಚಿತ್ರ ʼಕಲ್ಕಿ 2898 ಎಡಿʼ ಆಗಲಿದೆ ಎಂದು ಮೂಲಗಳು ಅಂದಾಜಿಸಿವೆ. ʼʼಕಲ್ಕಿʼ ಭಾರತದಲ್ಲಿ ಮೊದಲ ದಿನವೇ 120-140 ಕೋಟಿ ರೂ. ಗಳಿಸಲಿದೆ. ತೆಲುಗು ರಾಜ್ಯಗಳಾದ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲೇ ಸುಮಾರು 90-100 ಕೋಟಿ ಕಲೆಕ್ಷನ್‌ ಆಗುವ ನಿರೀಕ್ಷೆ ಇದೆ. ಉತ್ತರ ಭಾರತದಲ್ಲಿ 20 ಕೋಟಿ ರೂ., ಕರ್ನಾಟಕ, ತಮಿಳುನಾಡು ಮತ್ತು ಕೇರಳದಲ್ಲಿ 15+ ಕೋಟಿ ರೂ. ಗಳಿಸುವ ಸಾಧ್ಯತೆ ಇದೆʼʼ ಎಂದು ವರದಿಯೊಂದು ಭವಿಷ್ಯ ನುಡಿದಿದೆ.

Vijayaprabha Mobile App free

ಟಿಕೆಟ್‌ ವಿತರಣೆಯ ಆ್ಯಪ್‌ ಬುಕ್‌ಮೈ ಶೋ ಮೊದಲ 1 ಗಂಟೆಯಲ್ಲಿ ತೆಲಂಗಾಣವೊಂದರಲ್ಲೇ 36,000 ಟಿಕೆಟ್‌ಗಳನ್ನು ಮಾರಾಟ ಮಾಡಿದೆ. ಟಿಕೆಟ್‌ ಓಪನಿಂಗ್‌ ಆದ ಒಂದು ದಿನದಲ್ಲೇ ದೇಶಾದ್ಯಂತ 1 ಲಕ್ಷ ಟಿಕೆಟ್‌ ಮಾರಾಟವಾಗಿದೆ. ಅದಾಗ್ಯೂ ಇನ್ನು ಕೆಲವು ಮಲ್ಟಿಫ್ಲೆಕ್ಸ್‌ ಟಿಕೆಟ್‌ ವಿತರಣೆ ಆರಂಭಿಸಿಲ್ಲ. ಹೀಗಾದಲ್ಲಿ ಟಿಕೆಟ್‌ ಮಾರಾಟದ ಸಂಖ್ಯೆ ದುಪ್ಪಟ್ಟಾಗಲಿದೆ. ಇತ್ತ ಉತ್ತರ ಅಮೆರಿಕದಲ್ಲಿ ಈಗಾಗಲೇ 1,25,000 ಟಿಕೆಟ್‌ ಮಾರಾಟವಾಗಿದೆ. ಈ ಮೂಲಕ ಪ್ರಭಾಸ್‌ ನಟನೆಯ ʼಸಲಾರ್‌ʼನ ದಾಖಲೆಯನ್ನು ಮುರಿದಿದೆ.

ವೈಜಯಂತಿ ಮೂವೀಸ್‌ ಈ ʼಕಲ್ಕಿʼ ಚಿತ್ರವನ್ನು ಸುಮಾರು 600 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದೆ. ದಿಶಾ ಪಠಾಣಿ, ಶೋಭನಾ ಮತ್ತಿತರರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಸಿನಿಮಾ ತೆಲುಗು, ಕನ್ನಡ, ತಮಿಳು, ಹಿಂದಿ, ಮಲಯಾಳಂನಲ್ಲಿ ತೆರೆ ಕಾಣಲಿದೆ. ವಿಶೇಷ ಎಂದರೆ ನಾಯಕಿ ದೀಪಿಕಾ ಪಡುಕೋಣೆ ಹಿಂದಿ ಮತ್ತು ಕನ್ನಡದಲ್ಲಿ ತಮ್ಮ ಪಾತ್ರಕ್ಕೆ ತಾವೇ ಡಬ್‌ ಮಾಡಿದ್ದಾರೆ.

 

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.