ಫೇಮಸ್ ಯೂಟ್ಯೂಬರ್ ಡಾ.ಬ್ರೋ ಜೊತೆ ಕೆಲಸ ಮಾಡೋ ಬಿಗ್ ಆಫರ್; ಅರ್ಹತೆ ಏನಿರಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ

(Dr Bro) ನಮಸ್ಕಾರ ದೇವ್ರು ಅಂತಾ ಮಾತು ಶುರು ಮಾಡಿ ಸಾಮಾಜಿಕ ಜಾಲತಾಣಗಳ ಮೂಲಕ ಕರ್ನಾಟಕದ್ಯಾಂತ ಎಲ್ಲರಿಗೂ ಚಿರಪರಿಚಿತರಾಗಿರುವ ಫೇಮಸ್ ಯೂಟ್ಯೂಬರ್ ಡಾ.ಬ್ರೋ (ಗಗನ್ ಶ್ರೀನಿವಾಸ್) ಕನ್ನಡಿಗರಿಗೆ ಬಿಗ್ ಆಫರ್ ವೊಂದನ್ನ ಕೊಟ್ಟಿದ್ದಾರೆ. ಹೌದು,…

Dr.Bro vijayaprabhanews

(Dr Bro) ನಮಸ್ಕಾರ ದೇವ್ರು ಅಂತಾ ಮಾತು ಶುರು ಮಾಡಿ ಸಾಮಾಜಿಕ ಜಾಲತಾಣಗಳ ಮೂಲಕ ಕರ್ನಾಟಕದ್ಯಾಂತ ಎಲ್ಲರಿಗೂ ಚಿರಪರಿಚಿತರಾಗಿರುವ ಫೇಮಸ್ ಯೂಟ್ಯೂಬರ್ ಡಾ.ಬ್ರೋ (ಗಗನ್ ಶ್ರೀನಿವಾಸ್) ಕನ್ನಡಿಗರಿಗೆ ಬಿಗ್ ಆಫರ್ ವೊಂದನ್ನ ಕೊಟ್ಟಿದ್ದಾರೆ.

ಹೌದು, ಇತ್ತೀಚೆಗಷ್ಟೇ ಬೆಂಗಳೂರಿನ ವಿಜಯನಗರದಲ್ಲಿ (Dr Bro) GO ಪ್ರವಾಸ ಎಂಬ ಹೊಸ ಕಂಪನಿ ತೆರೆದಿರುವ ಡಾ. ಬ್ರೋ ಈಗ ತಮ್ಮ ಜೊತೆ ಕೆಲಸ ಮಾಡುವ ಅವಕಾಶವನ್ನು ನೀಡ್ತಿದ್ದಾರೆ. ಹೌದು, ಈ ಕಂಪನಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲು ಡಾ. ಬ್ರೋ ಮುಂದಾಗಿದ್ದಾರೆ. ಈ ಹುದ್ದೆಗಳಿಗೆ ಅಪ್ಲೈ ಮಾಡಲು ಯಾವೆಲ್ಲಾ ಅರ್ಹತೆ ಇರಬೇಕು. ಏನೆಲ್ಲಾ ವಿದ್ಯಾಭ್ಯಾಸ ಇರಬೇಕು ಎಂಬುದನ್ನು ಇಲ್ಲಿ ಓದಿ.

ಹುದ್ದೆಯ ವಿವರ:
* ಇಂಟರ್‌ನ್ಯಾಷನಲ್ ಆಪರೇಷನ್ ಎಕ್ಸಿಕ್ಯೂಟಿವ್
* ಡೊಮೆಸ್ಟಿಕ್ ಆಪರೇಷನ್ ಎಕ್ಸಿಕ್ಯೂಟಿವ್
* ವೀಸಾ ಎಕ್ಸ್ಪರ್ಟ್ಸ್
* ಟಿಕೆಟಿಂಗ್

Vijayaprabha Mobile App free

ಅರ್ಹತೆ ಏನಿರಬೇಕು?:
* ಇಂಟರ್‌ನ್ಯಾಷನಲ್ ಆಪರೇಷನ್ ಎಕ್ಸಿಕ್ಯೂಟಿವ್:
ಹಾಲಿಡೇ ಪ್ಯಾಕೇಜ್‌ ನಲ್ಲಿ ಕೆಲಸ ಮಾಡಿ ಅನುಭವ ಇರಬೇಕು.

ಡೊಮೆಸ್ಟಿಕ್ ಆಪರೇಷನ್ ಎಕ್ಸಿಕ್ಯೂಟಿವ್:
ಹಾಲಿಡೇ ಪ್ಯಾಕೇಜ್‌ ನಲ್ಲಿ ಕೆಲಸ ಮಾಡಿ ಅನುಭವ ಇರಬೇಕು

ವೀಸಾ ಎಕ್ಸ್ಪರ್ಟ್ಸ್:
ಏಷ್ಯಾ ದೇಶಗಳಿಗೆ ವೀಸಾ ನೀಡುವ ತಜ್ಞರು(ಅನುಭವ ಇದ್ದರೆ ಮೊದಲ ಆದ್ಯತೆ)

ಟಿಕೆಟಿಂಗ್:
ಡೊಮೆಸ್ಟಿಕ್/ ಇಂಟರ್‌ ನ್ಯಾಷನಲ್ /ಆನ್‌ ಲೈನ್/ಆಫ್‌ ಲೈನ್ (ಅನುಭವ ಇರುವವರಿಗೆ ಪ್ರಾಶಸ್ಯ್ತ)

ವಿದ್ಯಾರ್ಹತೆ:
ಈ ಎಲ್ಲಾ ಹುದ್ದೆಗಳಿಗೆ ಅಪ್ಲೈ ಮಾಡುವ ಅಭ್ಯರ್ಥಿಗಳು ಟೂರಿಸಂ ಕೋರ್ಸ್ನಲ್ಲಿ ದ್ವಿತೀಯ ಪಿಯುಸಿ/ ಪದವಿ ಪೂರ್ಣಗೊಳಿಸಿರಬೇಕು.

ಸೂಚನೆ:
ಅಭ್ಯರ್ಥಿಗಳಿಗೆ ಕಡ್ಡಾಯವಾಗಿ ಕನ್ನಡ, ಇಂಗ್ಲಿಷ್, ಹಿಂದಿ ಭಾಷೆ ಗೊತ್ತಿರಬೇಕು.

ಅರ್ಜಿ ಸಲ್ಲಿಸುವುದು ಹೇಗೆ?;
ಅಭ್ಯರ್ಥಿಗಳು ಈ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅಪ್ಲೈ ಮಾಡಬೇಕು. GO ಪ್ರವಾಸ ವೆಬ್‌ಸೈಟ್‌ಗೆ ಭೇಟಿ ನೀಡಿ ಅಲ್ಲಿ ಅಪ್ಲಿಕೇಶನ್ ಹಾಕಬೇಕು.

ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ ನೋಡಿ:
https://gopravasa.com/

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.