ಉದ್ಯೋಗ ಹುಡುಕುತ್ತಿರೋರಿಗೆ ಗುಡ್ನ್ಯೂಸ್ ಸಿಕ್ಕಿದ್ದು, ಸರ್ಕಾರಿ ಕೆಲಸಕ್ಕೆ ಈ ಕಂಪನಿಯಲ್ಲಿ ಈಗಲೇ ಅಪ್ಲೇ ಮಾಡಿ.
ಪಂಜಾಬ್ ಆಂಡ್ ಸಿಂಧ್ ಬ್ಯಾಂಕ್ನಲ್ಲಿರುವ ವಿವಿಧ ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ಎಲ್ಲ ಹುದ್ದೆಗಳು ಉತ್ತಮವಾದ ತಿಂಗಳ ಸಂಬಳ ಹೊಂದಿದ್ದರು ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಕೂಡಲೇ ಆನ್ಲೈನ್ ಮೂಲಕ ಅರ್ಜಿಗಳನ್ನು ಹಾಕಬಹುದು. ಬ್ಯಾಂಕ್ನಲ್ಲಿ ಕೆಲಸ ಮಾಡಬೇಕು ಎಂದು ಇಷ್ಟ ಇರುವ ಅಭ್ಯರ್ಥಿಗಳಿಗೆ ಇದು ಒಂದು ಅವಕಾಶವಾಗಿದೆ.
ಅಲ್ಲದೇ ಪಂಜಾಬ್ ಆ್ಯಂಡ್ ಸಿಂದ್ ಬ್ಯಾಂಕ್ ಪ್ರತಿಷ್ಠ ಬ್ಯಾಂಕ್ ಆಗಿದ್ದು ಹೆಚ್ಚಿನ ಗ್ರಾಹಕರನ್ನು ಹೊಂದಿದೆ. ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅಪ್ಲೇ ಮಾಡಬಹುದು. ಇನ್ನು ಈ ಹುದ್ದೆಗಳಿಗೆ ಸಂಬಂಧಿಸಿದ ಶುಲ್ಕ, ವಿದ್ಯಾರ್ಹತೆ, ವಯಸ್ಸು, ವಯೋಮಿತಿ, ಅನುಭವ ಇತ್ಯಾದಿಗಳನ್ನು ಈ ಕೆಳಗೆ ವಿವರಿಸಲಾಗಿದೆ.
ಮ್ಯಾನೇಜರ್, ಸೀನಿಯರ್ ಮ್ಯಾನೇಜರ್, ಮ್ಯಾನೇಜರ್- ಖಜಾನೆ, ಮುಖ್ಯ ವ್ಯವಸ್ಥಾಪಕ ಮತ್ತು ಇತರ ಹುದ್ದೆಗಳಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ.
ತಿಂಗಳ ಸಂಬಳ- ಹುದ್ದೆಗೆ ತಕ್ಕಂತೆ ಸಂಬಳ ಬೇರೆ ಬೇರೆಯಾಗಿದೆ. 48 ಸಾವಿರ ರೂಪಾಯಿಗಳಿಂದ 1 ಲಕ್ಷ ರೂ.ಗಳವರೆಗೆ ಸಂಬಳ ಇರುತ್ತದೆ. ಪೋಸ್ಟ್ ಹೆಸರು: ತಜ್ಞ ಅಧಿಕಾರಿಗಳು (Specialist Officers)
ಒಟ್ಟು ಹುದ್ದೆಗಳು- 213 (ಇವೆಲ್ಲ ಸರ್ಕಾರದ ಉದ್ಯೋಗಗಳು ಆಗಿವೆ)
ಉದ್ಯೋಗ ಹಾಗೂ ವಿದ್ಯಾರ್ಹತೆ: ಇನ್ಫಾರ್ಮ್ನೇಷನ್ ಟೆಕ್ನಾಲಜಿ ಆಫೀಸರ್- ಕಂಪ್ಯೂಟರ್ ಸೈನ್ಸ್/ಐಟಿ/ಇಸಿಇ/ಎಂಸಿಇ ರಾಜಭಾಷಾ ಆಫೀಸರ್- ಹಿಂದಿ-ಇಂಗ್ಲಿಷ್ನಲ್ಲಿ ಸ್ನಾತಕೋತ್ತರ ಪದವಿ ವುಮೆನ್ ರಿಸರ್ಚ್ ಆಫೀಸರ್-ಪದವಿ, ಡೊಪ್ಲೋಮಾ, ಸಾಫ್ಟ್ವೇರ್ ಡೆವಲಪ್ಮೆಂಟ್ ಆಫೀಸರ್- ಕಂಪ್ಯೂಟರ್ ಸೈನ್ಸ್/ಐಟಿ/ಇಸಿಇ/ಎಂಸಿಇ ಸೈಬರ್ ಸೆಕ್ಯುರಿಟಿ ಆಫೀಸರ್- ಬಿಇ, ಬಿಟೆಕ್, ಕಂಪ್ಯೂಟರ್ ಸೈನ್ಸ್/ಐಟಿ/ಇಸಿಇ/ಎಂಸಿಇ ಮ್ಯಾನೇಜರ್-ಕ್ರೆಡಿಟ್- ಎಂಬಿಎ ಆಗಿರಬೇಕು ಮ್ಯಾನೇಜರ್-ಅಕೌಂಟ್- ಐಸಿಎಐ ಮ್ಯಾನೇಜರ್- ಇನ್ಫಾರ್ಮ್ನೇಷನ್ ಟೆಕ್ನಾಲಜಿ- ಬಿಇ, ಬಿಟೆಕ್, ಕಂಪ್ಯೂಟರ್ ಸೈನ್ಸ್/ಐಟಿ/ಇಸಿಇ/ಎಂಸಿಇ
ವಯಸ್ಸಿನ ಮಿತಿ: SMGS-iv= 28 ರಿಂದ 40 MMGS-iii- 25 ರಿಂದ 38 SMGS-ii- 25 ರಿಂದ 35 JMGS-i- 20 ರಿಂದ 32
ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಪಿಡಬ್ಲ್ಯುಡಿ- 100 ರೂ.ಗಳು.
ಜನೆರಲ್, ಒಬಿಸಿ, ಇಡಬ್ಲ್ಯುಎಸ್- 850 ರೂ.ಗಳು