ಅಂಗಾಂಗ ದಾನ ಮಾಡುವ ಘೋಷಣೆ ಮಾಡಿದ ಬಾಲಿವುಡ್ ನ ಖ್ಯಾತ ಜೋಡಿ ಜೆನಿಲಿಯಾ-ರಿತೇಷ್

ಮುಂಬೈ: ಬಾಲಿವುಡ್ ನ ಖ್ಯಾತ ಜೋಡಿ ಜೆನಿಲಿಯಾ ಡಿಸೋಜಾ ಹಾಗು ರಿತೇಷ್ ದೇಶ್ ಮುಖ್ ಅವರು ಅಂಗಾಂಗ ದಾನ ಮಾಡುವುದಾಗಿ ಘೋಷಿಸಿದ್ದಾರೆ. ಜೆನಿಲಿಯಾ ಡಿಸೋಜಾ ಹಾಗೂ ರಿತೇಷ್ ದೇಶ್ ಮುಖ್ ಜೋಡಿ ಅಂಗಾಂಗ ದಾನ ಘೋಷಣೆ ಮಾಡಿದ…

ಮುಂಬೈ: ಬಾಲಿವುಡ್ ನ ಖ್ಯಾತ ಜೋಡಿ ಜೆನಿಲಿಯಾ ಡಿಸೋಜಾ ಹಾಗು ರಿತೇಷ್ ದೇಶ್ ಮುಖ್ ಅವರು ಅಂಗಾಂಗ ದಾನ ಮಾಡುವುದಾಗಿ ಘೋಷಿಸಿದ್ದಾರೆ.

ಜೆನಿಲಿಯಾ ಡಿಸೋಜಾ ಹಾಗೂ ರಿತೇಷ್ ದೇಶ್ ಮುಖ್ ಜೋಡಿ ಅಂಗಾಂಗ ದಾನ ಘೋಷಣೆ ಮಾಡಿದ ಬಗ್ಗೆ ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ ದಂಪತಿಗೆ ಧನ್ಯವಾದ ತಿಳಿಸಿದೆ. ಜೊತೆಗೆ ರಿತೇಷ್ ಅವರ ವಿಡಿಯೋವನ್ನು ಈ ಸಂಸ್ಥೆ ಹಂಚಿಕೊಂಡಿದ್ದು, “ರಿತೇಷ್ ಹಾಗೂ ಜೆನಿಲಿಯಾ ದಂಪತಿಗೆ ಧನ್ಯವಾದಗಳು. ಅವರು ಅಂಗಾಂಗ ದಾನ ಮಾಡುವ ಪ್ರತಿಜ್ಞೆ ಮಾಡಿದ್ದಾರೆ. ಇವರ ನಿರ್ಧಾರ ಅನೇಕರಿಗೆ ಸ್ಫೂರ್ತಿದಾಯಕವಾಗಲಿ” ಎಂದು ಬರೆಯಲಾಗಿದೆ.” ಎಂದು ತಿಳಿಸಿದೆ.

ಈ ಮೊದಲು ರಿತೇಷ್ ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ‘ನಾನು ಹಾಗೂ ಜೆನಿಲಿಯಾ ನಮ್ಮ ಅಂಗಾಂಗ ದಾನ ಮಾಡುವ ಪ್ರತಿಜ್ಞೆ ಮಾಡಿದ್ದೇವೆ’ ಎಂದು ರಿತೇಷ್ ಹೇಳಿದ್ದರು. ಈ ವಿಡಿಯೋನ ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ ಹಂಚಿಕೊಂಡಿದೆ.

Vijayaprabha Mobile App free

ಬಾಲಿವುಡ್ ನ ಖ್ಯಾತ ಸೆಲೆಬ್ರಿಟಿ ಜೋಡಿಗಳಲ್ಲಿ ಒಂದಾದ ಜೆನಿಲಿಯಾ ಡಿಸೋಜಾ ಹಾಗೂ ರಿತೇಷ್ ದೇಶ್ ಮುಖ್ ಕೂಡ ಒಬ್ಬರು. ಇಬ್ಬರೂ ಪ್ರೀತಿಸಿ ಮದುವೆ ಆಗಿದ್ದು, ಇದೀಗ ದಂಪತಿಗಳಿಬ್ಬರೂ ಅಂಗಾಂಗ ದಾನ ಮಾಡುವ ಘೋಷಣೆ ಮಾಡಿದ್ದಾರೆ.

 

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.