ಹಲಸಿನ ಹಣ್ಣಿನಲ್ಲಿ(Jack fruit) ವಿಟಮಿನ್(Vitamins) ಅಂಶಗಳಾದ, ಖನಿಜಾಂಶಗಳು, ಕಾರ್ಬೋಹೈಡ್ರೇಟ್ ಅಂಶಗಳು, ಎಲೆಕ್ಟ್ರೋಲೈಟ್ ಅಂಶಗಳು, ಪೊಟಾಷ್ಯಿಯಂ ಹಾಗೂ ನಾರಿನಾಂಶಗಳು(Minerals, carbohydrates, electrolytes, potassium and fiber) ಯಥೇಚ್ಛವಾಗಿ ಸಿಗುವುದರಿಂದ, ಇದೊಂದು ಆರೋಗ್ಯಕಾರಿ ಹಣ್ಣು(Healthy fruit) ಎನ್ನುವು ದರಲ್ಲಿ ಎರಡು ಮಾತಿಲ್ಲ. ಅಧಿಕ ರಕ್ತದೊತ್ತಡ(BP) ಸಮಸ್ಯೆಯಿಂದ ಬಳಲುತ್ತಿರು ವವರು, ಹಲಸಿನ ಹಣ್ಣುನ್ನು ಮಿತವಾಗಿ ಸೇವನೆ ಮಾಡುತ್ತಾ ಬಂದರೆ, ಈ ಕಾಯಿಲೆಯನ್ನು ನಿಯಂತ್ರ ಣದಲ್ಲಿ ಇಟ್ಟುಕೊಳ್ಳಬಹುದು. ಪ್ರಮುಖವಾಗಿ ಈ ಹಣ್ಣಿನಲ್ಲಿ ಪೊಟಾಷ್ಯಿಯಂ ಅಂಶ ಅಧಿಕವಾಗಿ ಕಂಡುಬರುವುದರಿಂದ, ಈ ಕಾಯಿಲೆಯನ್ನು ನಿಯಂತ್ರಣದಲ್ಲಿಡಲು ನೆರವಾಗುತ್ತದೆ.
ಮೊದಲೇ ಹೇಳಿದ ಹಾಗೆ ಈ ಹಣ್ಣಿನಲ್ಲಿ ನಾರಿನಾಂಶ, ಯಥೇಚ್ಛವಾಗಿ ಕಂಡು ಬರುವುದರಿಂದ, ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಪಟ್ಟ ಸಮಸ್ಯೆಗಳನ್ನು ನಿವಾರಿಸು ವಲ್ಲಿ, ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ನಿಯಮಿತವಾಗಿ ಈ ಹಣ್ಣನ್ನು ಸೇವನೆ ಮಾಡುವು ದರಿಂದ, ಜೀರ್ಣ ಪ್ರಕ್ರಿಯೆಗಳು ಸರಿಯಾಗಿ ನಡೆದು, ಅಜೀರ್ಣತೆ, ಮಲಬದ್ಧತೆ ಸಮಸ್ಯೆ ಕ್ರಮೇಣವಾಗಿ ದೂರ ವಾಗುತ್ತಾ ಹೋಗುತ್ತದೆ. ಹಲಸಿನ ಹಣ್ಣಿನಲ್ಲಿ ಆಂಟಿಆಕ್ಸಿಡೆಂಟ್ ಹಾಗು ಫ್ಲೇವ ನಾಯ್ಡ್ ಅಂಶಗಳು ಕೂಡ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ. ಅದರಲ್ಲೂ ಆಂಟಿಆಕ್ಸಿಡೆಂಟ್ ಅಂಶಗಳು ದೇಹದ ಲ್ಲಿರುವ ಕಂಡು ಬರುವ ಫ್ರೀ ರಾಡಿಕಲ್ ಗಳ ವಿರುದ್ಧ ರಕ್ಷಣಾತ್ಮ ಕವಾಗಿ ಕೆಲಸ ಮಾಡುತ್ತವೆ. ಇದರಿಂದ ಕ್ಯಾನ್ಸರ್ ಕಣಗಳು ನಮ್ಮ ದೇಹದಲ್ಲಿ ಉತ್ಪತ್ತಿ ಆಗುವುದನ್ನು ತಡೆಯಲು ನೆರವಾಗುತ್ತದೆ. ಕ್ಯಾನ್ಸರ್ ಮಾರಕ, ಆದರೆ ಶ್ವಾಸಕೋಶದ ಕ್ಯಾನ್ಸರ್ ಅದಕ್ಕಿಂತ ಡೇಂಜರ್! ರಕ್ತಹೀನತೆಯ ಸಮಸ್ಯೆಯು ಕಂಡುಬಂದರೆ, ಆಗ ನಾಲ್ಕು ಹಜ್ಜೆ ನಡೆದರೂ ಸಾಕು ತುಂಬಾನೇ ಸುಸ್ತು, ಬಳಲಿಕೆ ಆಗುವ ಅನು ಭವ ಉಂಟಾಗುತ್ತದೆ.ಇದಕ್ಕೆ ಪ್ರಮುಖ ಕಾರಣ, ಆರೋಗ್ಯದಲ್ಲಿ ಕಂಡು ಬರುವ ಕಬ್ಬಿಣಾಂಶದ ಕೊರತೆ. ಹಾಗಾಗಿ ಕಬ್ಬಿಣದ ಅಂಶವನ್ನು ಹೆಚ್ಚು ಒಳಗೊಂಡ ಆಹಾರ ಪದಾರ್ಥಗಳ ಮೇಲೆ ಗಮನ ಹರಿಸಬೇಕು. ಇದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದರೆ ಹಲಸಿನ ಹಣ್ಣು. ಹೌದು ಈ ಹಣ್ಣಿನಲ್ಲಿ, ಆರೋಗ್ಯಕ್ಕೆ ಬೇಕಾಗುವ ಎಲ್ಲಾ ಬಗೆಯ ಪೌಷ್ಠಿಕ ಸತ್ವಗಳು ಯತೇಚ್ಛವಾಗಿ ಕಂಡು ಬರುತ್ತದೆ. ಉದಾಹರಣೆಗೆ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ, ವಿಟಮಿನ್ ಕೆ ಮತ್ತು ನಯಾಸಿನ್ ಅಂಶದ ಜೊತೆಗೆ ತಾಮ್ರ ಮತ್ತು ಫೋಲೆಟ್ ಅಂಶಗಳು ಕೂಡ ಹೆಚ್ಚಾಗಿ ಇರುತ್ತವೆ. ಇದು ದೇಹದಲ್ಲಿ ಕಬ್ಬಿಣದ ಅಂಶದ ಕೊರತೆ ಯನ್ನು ನೀಗಿಸಿ, ಕೆಂಪು ರಕ್ತ ಕಣಗಳನ್ನು ಹೆಚ್ಚಿಸುತ್ತದೆ.ರಕ್ತಹೀನತೆ ಸಮಸ್ಯೆಗೆ ಈ ಆಹಾರಗಳನ್ನು ಹೆಚ್ಚಾಗಿ ಸೇವಿಸಿ.