(iphone 16 launch) ವಿಶ್ವದಲ್ಲಿಯೇ ಪ್ರತಿಯೊಬ್ಬರ ಅಚ್ಚುಮೆಚ್ಚಿನ ಟೆಕ್ ಕಂಪನಿ ಆಪಲ್ ಬ್ರಾಂಡ್ ನ iPhone 16ನೇ ಸೀರೀಸ್ ಮೊಬೈಲ್ ಅನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಲಿದ್ದು, ಹೊಸ ಸಿರಿಸ್ ಈ ಮೊಬೈಲ್ ನ ಅಧಿಕೃತ ಫೀಚರ್ಸ್ ಗಳೇನು? ಯಾವ ದಿನಾಂಕದಂದು ಬಿಡುಗಡೆಯಾಗಲಿದೆ? ಎಂಬ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ..
iPhone 16 ಯಾವಾಗ ಬಿಡುಗಡೆಯಾಗಲಿದೆ?
ಆಪಲ್ ಕಂಪನಿಯ ಹೊಸ ಸೀರೀಸ್ ನ iPhone 16 ಮೊಬೈಲ್ ಅನ್ನು ಅಧಿಕೃತವಾಗಿ ಸೆಪ್ಟೆಂಬರ್ 9ನೇ ತಾರೀಕಿನಂದು ಬಿಡುಗಡೆ ಮಾಡಲಾಗುವುದೆಂದು ವರದಿ ನೀಡಿದೆ. ಈ ಮೊಬೈಲ್ನಲ್ಲಿ ಗ್ರಾಹಕರಿಗಾಗಿ ಅನೇಕ ಅದ್ಭುತ ಫ್ಯೂಚರ್ಸಗಳನ್ನು ಸೇರಿಸಲಾಗಿದೆ ಎಂದು ಹೇಳಲಾಗಿದೆ.
iPhone 16 ಸೀರೀಸ್ ನ ವಿವಿಧ ನಾಲ್ಕು ಮಾದರಿಗಳು :
ಆಪಲ್ ಕಂಪನಿಯು ಐಫೋನ್ 16ನೇ ಸರಣಿಯ ಮೊಬೈಲ್ಗಳನ್ನು ನಾಲ್ಕು ಮಾದರಿಗಳಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದ್ದು, ಅವುಗಳ ಹೆಸರು ಈ ಕೇಳಗಿನಂತಿದೆ.
* iPhone 16
* iPhone 16 Plus
* iPhone 16 Pro
* iPhone 16 Pro Max
ಏನೆಲ್ಲಾ ವಿಶೇಷತೆಗಳು ಈ ಸರಣಿಯ ಮೊಬೈಲ್ ಗಳಲ್ಲಿದೆ?
iPhone 16 ಸರಣಿಯ ಆಪಲ್ ಮೊಬೈಲ್ ನಲ್ಲಿ ಅನೇಕ ಇಂಟೆಲಿಜೆನ್ಸ್ ವೈಶಿಷ್ಟಗಳು ಲಭ್ಯವಿದ್ದು, ಅನೇಕ ಹೊಸ ಅಪ್ಡೇಟ್ ಸಾಫ್ಟ್ವೇರ್ ಗಳೊಂದಿಗೆ ಉತ್ತಮ ಗುಣಮಟ್ಟದ ಕಾರ್ಯಕ್ಷಮತೆಯನ್ನು ಇದು ಹೊಂದಿದೆ. ಇದನ್ನು ಹೊರತುಪಡಿಸಿ ಇದು ಸ್ವಲ್ಪ ದೊಡ್ಡ ಗಾತ್ರದ ಡಿಸ್ಪ್ಲೇ ಬಂದಿದೆ ಹಾಗೂ ಕ್ಯಾಮರಾ ರಚನೆಯಲ್ಲಿ ಕೆಲವು ವಿನ್ಯಾಸ ಬದಲಾವಣೆಗಳನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ.
ಇದು iOS 18 ನ ಮಾದರಿ ಹೊಂದಿದ್ದು, ಅನೇಕ ಉತ್ತಮ ವೈಶಿಷ್ಟಗಳನ್ನು ಕೂಡ ಹೊಂದಿದೆ. ಬಳಕೆದಾರರ ಪ್ರೈವಸಿ ಮೆಂಟೇನ್ ಮಾಡಲು, ಸ್ಲೋ ಚಾರ್ಜಿಂಗ್ ನ ಸಮಸ್ಯೆ ಹಾಗೂ ಪಾಸ್ವರ್ಡ್ ಸೇರಿದಂತೆ ಇತರೆ ಸಮಸ್ಯೆಗಳನ್ನು ಪರಿಹರಿಸುವ ಹೊಸ ಅಪ್ಡೇಟ್ಗಳನ್ನು ಈ ಸರಣಿಯು ಹೊಂದಿದೆ ಎಂದು ನಿರೀಕ್ಷಿಸಲಾಗಿದ್ದು, ಗ್ರಾಹಕರ ಬೇಡಿಕೆ ಹೆಚ್ಚಾಗಿದೆ.
ಇತರೆ ವಿಶೇಷತೆಗಳು:
* 3,577 mAh ನಿಂದ 4,441 mAh ನ ಶಕ್ತಿಶಾಲಿ ಬ್ಯಾಟರಿಯನ್ನು ಹೊಂದಿರುವ ಸಾಧ್ಯತೆಗಳಿವೆ.
* 6.1 ಇಂಚಿನ OLED Display ಹೊಂದಿರಬಹುದು.
ಐಫೋನ್ 16ನೇ ಸರಣಿಯ ಬಿಡುಗಡೆ ಸಮಾರಂಭವನ್ನು ನೀವು ಆಪಲ್ ಕಂಪನಿಯ ಅಧಿಕೃತ ಯುಟ್ಯೂಬ್ ಚಾನೆಲ್ ನಲ್ಲಿ ಸೆಪ್ಟೆಂಬರ್ 9ನೇ ತಾರೀಕಿನಂದು ರಾತ್ರಿ 10:30ಗೆ ಲೈವ್ ವೀಕ್ಷಿಸಬಹುದು.