ಜಗತ್ತಿನ ಅತಿದೊಡ್ಡ ಅಭಿವೃದ್ಧಿಶೀಲ ಆರ್ಥಿಕತೆ ಭಾರತ: ಐಎಂಎಫ್ ವರದಿ ಶ್ಲಾಘನೆ

ನವದೆಹಲಿ: ಭಾರತವು ಜಗತ್ತಿನ ಅತಿದೊಡ್ಡ ಅಭಿವೃದ್ಧಿಶೀಲ ಆರ್ಥಿಕತೆಯಾಗಿ ಮುಂದುವರೆದಿದ್ದು, ದೇಶದ ಸ್ಥೂಲ ಅರ್ಥಶಾಸ್ತ್ರೀಯ ಸಂಗತಿಗಳು ಗಟ್ಟಿಯಾಗಿವೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಶ್ಲಾಘಿಸಿದೆ. 2024-25ನೇ ಸಾಲಿನಲ್ಲಿ ಭಾರತದ ಸಮಗ್ರ ರಾಷ್ಟ್ರೀಯ ಉತ್ಪನ್ನ (ಜಿಡಿಪಿ)…

ನವದೆಹಲಿ: ಭಾರತವು ಜಗತ್ತಿನ ಅತಿದೊಡ್ಡ ಅಭಿವೃದ್ಧಿಶೀಲ ಆರ್ಥಿಕತೆಯಾಗಿ ಮುಂದುವರೆದಿದ್ದು, ದೇಶದ ಸ್ಥೂಲ ಅರ್ಥಶಾಸ್ತ್ರೀಯ ಸಂಗತಿಗಳು ಗಟ್ಟಿಯಾಗಿವೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಶ್ಲಾಘಿಸಿದೆ.

2024-25ನೇ ಸಾಲಿನಲ್ಲಿ ಭಾರತದ ಸಮಗ್ರ ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಶೇ.7ರ ದರದಲ್ಲಿ ಬೆಳೆಯಲಿದೆ. ಒಳ್ಳೆಯ ಮಳೆಯಾಗಿರುವುದರಿಂದ ಕೃಷಿ ಉತ್ಪಾದನೆಯೂ ಚೆನ್ನಾಗಿರಲಿದೆ. ದೇಶವು ಈಗಲೂ ಜಗತ್ತಿನ ಅತಿದೊಡ್ಡ ಅಭಿವೃದ್ಧಿಶೀಲ ಆರ್ಥಿಕತೆಯಾಗಿದೆ ಎಂದು ಐಎಂಎಫ್‌ನ ಏಷ್ಯಾ ಪೆಸಿಫಿಕ್‌ ನಿರ್ದೇಶಕ ಕೃಷ್ಣ ಶ್ರೀನಿವಾಸನ್‌ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಮೂರು ಕ್ಷೇತ್ರಗಳಲ್ಲಿ ಭಾರತ ಸುಧಾರಣೆ ಮಾಡಿಕೊಂಡರೆ ಇನ್ನಷ್ಟು ವೇಗವಾಗಿ ಬೆಳೆಯಲಿದೆ. ಮೊದಲನೆಯದಾಗಿ, ಇನ್ನಷ್ಟು ಉದ್ಯೋಗಗಳನ್ನು ಸೃಷ್ಟಿಸಬೇಕು. ಎರಡನೆಯದಾಗಿ, ವ್ಯಾಪಾರಕ್ಕೆ ಸಂಬಂಧಿಸಿದಂತೆ ಇರುವ ಕೆಲ ನಿರ್ಬಂಧಗಳನ್ನು ತೆರವುಗೊಳಿಸಬೇಕು. ಮೂರನೆಯದಾಗಿ, ಮೂಲಸೌಕರ್ಯ ಹಾಗೂ ಡಿಜಿಟಲ್‌ ಸೌಕರ್ಯಗಳನ್ನು ಹೆಚ್ಚಿಸಬೇಕು ಎಂದೂ ಅವರು ತಿಳಿಸಿದ್ದಾರೆ.

Vijayaprabha Mobile App free

ಈ ವರ್ಷವಷ್ಟೇ ದೇಶ ಚುನಾವಣೆಯನ್ನು ಎದುರಿಸಿದ್ದರೂ ಆರ್ಥಿಕ ವ್ಯವಹಾರಗಳು ಸುಸ್ಥಿತಿಯಲ್ಲಿವೆ. ವಿದೇಶಿ ಮೀಸಲು ಚೆನ್ನಾಗಿದೆ. ಸ್ಥೂಲ ಅರ್ಥಶಾಸ್ತ್ರೀಯ ಸಂಗತಿಗಳು ಉತ್ತಮವಾಗಿವೆ. ಹೀಗಾಗಿ ದೇಶ ಚೆನ್ನಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದು ಹೇಳಿದ್ದಾರೆ.

ಭಾರತಕ್ಕೆ ಇನ್ನೂ ಸಾಕಷ್ಟು ಕ್ಷೇತ್ರಗಳಲ್ಲಿ ಸುಧಾರಣೆಗಳನ್ನು ಮಾಡಿಕೊಳ್ಳಲು ಅವಕಾಶಗಳಿವೆ. ಉದ್ಯೋಗಿಗಳ ಕೌಶಲ್ಯಾಭಿವೃದ್ಧಿ ಹೆಚ್ಚಿಸಬೇಕಿದೆ. ಸಾಮಾಜಿಕ ಭದ್ರತಾ ಉಪಕ್ರಮಗಳು ಸುಧಾರಿಸಬೇಕಿದೆ. ಸರ್ಕಾರಿ ವ್ಯವಹಾರಗಳಲ್ಲಿನ ವಿಳಂಬ ನೀತಿ ನಿವಾರಣೆಯಾಗಬೇಕಿದೆ ಎಂದೂ ಅವರು ತಿಳಿಸಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.