ಮಂಡ್ಯ: ಪತ್ನಿ ಜೊತೆ ಆಕ್ರಮ ಸಂಬಂಧ ಆರೋಪ ಹಿನ್ನಲೆ ಪತಿಯು ಗುಂಡು ಹಾರಿಸಿ ಯುವಕನ ಹತ್ಯೆಗೆ ಯತ್ನಸಿರುವ ಘಟನೆ ಪಾಂಡವಪುರ ತಾಲ್ಲೂಕಿನ ಶಂಭೂವಿನಹಳ್ಳಿ ಗ್ರಾಮದಲ್ಲಿ ಬೆಳ್ಳಂಬೆಳ್ಳಗೆ ನಡೆದಿದೆ.
ಮಂಜು(26) ಗುಂಡೇಟಿಗೆ ಒಳಗಾದ ಯುವಕನಾಗಿದ್ದು, ಶಿವರಾಜು(37) ಗುಂಡು ಹಾರಿಸಿರುವ ಆರೋಪಿಯಾಗಿದ್ದಾನೆ. ಶಿವರಾಜು ಮುಂಬೈನ ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದು, ವಾರದ ಹಿಂದೆ ಗ್ರಾಮಕ್ಕೆ ಬಂದಿದ್ದ. ಲಾರಿ ಡ್ರೈವರ್ ಕೆಲಸ ಮಾಡುತ್ತಿದ್ದ ಮಂಜು ಜೊತೆಗೆ ತನ್ನ ಪತ್ನಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆಂದು ಅನುಮಾನದಲ್ಲಿ ಶಿವರಾಜು ಇಂದು ಫೈರಿಂಗ್ ಮಾಡಿದ್ದಾನೆ.
ಸದ್ಯ ಗಾಯಗೊಂಡ ಮಂಜುಗೆ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪಾಂಡವಪುರ ಪೊಲೀಸರು ಆರೋಪಿ ಶಿವರಾಜ್‌ನನ್ನು ಬಂಧಿಸಿದ್ದಾರೆ.