ತೂಕ ಇಳಿಕೆಯಷ್ಟೇ ಅಲ್ಲ, ಮೆದುಳು ಹಾಗು ಖಿನ್ನತೆಗೂ ಬೆಳ್ಳಂಬೆಳಗ್ಗೆ ಬ್ಲ್ಯಾಕ್ ಕಾಫಿ ಕುಡಿಯಿರಿ

ಪ್ರತಿದಿನ ಬ್ಲಾಕ್ ಕಾಫಿ ಕುಡಿಯುವುದರಿಂದ ಇದು ಚಯಾಪಚಯವನ್ನು ವೇಗಗೊಳಿಸುವುದರ ಜೊತೆಗೆ ಹಸಿವನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಬಹುದು. ಕೇಚವಲ ತೂಕ ಇಳಿಕೆ ಮಾತ್ರವಲ್ಲ ಇನ್ನೂ ಅನೇಕ ಕಾಯಿಲೆಗಳಿಗೆ ಬ್ಲಾಕ್​ ಕಾಫಿ ಸೇವನೆ…

ಪ್ರತಿದಿನ ಬ್ಲಾಕ್ ಕಾಫಿ ಕುಡಿಯುವುದರಿಂದ ಇದು ಚಯಾಪಚಯವನ್ನು ವೇಗಗೊಳಿಸುವುದರ ಜೊತೆಗೆ ಹಸಿವನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಬಹುದು. ಕೇಚವಲ ತೂಕ ಇಳಿಕೆ ಮಾತ್ರವಲ್ಲ ಇನ್ನೂ ಅನೇಕ ಕಾಯಿಲೆಗಳಿಗೆ ಬ್ಲಾಕ್​ ಕಾಫಿ ಸೇವನೆ ಒಳ್ಳೆಯದು. ಕಾಫಿ ಮನಸ್ಥಿತಿಯನ್ನು ಸುಧಾರಿಸಿ ಅರಿವಿನ ಕಾರ್ಯವನ್ನು ಚುರುಕುಗೊಳಿಸುತ್ತದೆ.

ಆದರೆ, ಸಾಮಾನ್ಯ ಕಾಫಿಗಿಂತಲೂ ಬ್ಲಾಕ್ ಕಾಫಿ ಆರೋಗ್ಯಕ್ಕೆ ವರದಾನವಾಗಿದ್ದು, ನಿತ್ಯ ಬ್ಲಾಕ್ ಕಾಫಿ ಕುಡಿಯುವುದರಿಂಡ್ ತೂಕ ಇಳಿಕೆ, ಮಧುಮೇಹ ನಿಯಂತ್ರಣ ಸೇರಿದಂತೆ ಹಲವು ಪ್ರಯೋಜನಗಳನ್ನು ಪಡೆಯಬಹುದು. ಬ್ಲಾಕ್ ಕಾಫಿ ಕುಡಿಯುವುದರಿಂದ ಇದು ನರವೈಜ್ಞಾನಿಕ ವ್ಯವಸ್ಥೆಯನ್ನು ಉತ್ತೇಜಿಸಿ ನೊರ್‌ಪೈನ್ಫ್ರಿನ್ ಮತ್ತು ಡೋಪಮೈನ್‌ನಂತಹ “ಸಂತೋಷದ ರಾಸಾಯನಿಕಗಳ” ನ್ನು ಬಿಡುಗಡೆ ಮಾಡುತ್ತದೆ. ಇದರಿಂದ ಮನಸ್ಸು ಸಂತೋಷವಾಗಿರುತ್ತದೆ. ಬ್ಲಾಕ್ ಕಾಫಿ ಕುಡಿಯುವ ಅಭ್ಯಾಸ ಇರುವವರಲ್ಲಿ ಮಧುಮೇಹದ ಅಪಾಯ ಬಹಳ ಕಡಿಮೆ ಎಂದು ಕೆಲವು ಅಧ್ಯಯನಗಳಿಂದ ತಿಳಿದುಬಂದಿದೆ.

ಪ್ರತಿದಿನ ಬ್ಲಾಕ್ ಕಾಫಿ ಕುಡಿಯುವುದರಿಂದ ಇದು ಆಲ್ಝೈಮರ್ಸ್, ಬುದ್ಧಿಮಾಂದ್ಯತೆಯಂತಹ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಅಷ್ಟೇ ಅಲ್ಲ, ಮೆಮೋರಿ ಪವರ್ ಅನ್ನು ಹೆಚ್ಚಿಸುತ್ತದೆ. ಮೊದಲೇ ತಿಳಿಸಿದಂತೆ ಬ್ಲಾಕ್ ಕಾಫಿ ಮೆದುಳಿನಲ್ಲಿ ಸಿರೊಟೋನಿನ್ ಮತ್ತು ಡೋಪಮೈನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಒಂಟಿತನ, ಖಿನ್ನತೆಯಂತಹ ಸಮಸ್ಯೆಗಳನ್ನು ಶಮಗೊಳಿಸಬಹುದು ಎಂದು ಹೇಳಲಾಗುತ್ತದೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.