ಮಳೆಯಲ್ಲಿ ನೆನೆಯುವುದು ಯಾರಿಗೆ ಇಷ್ಟಾ ಇಲ್ಲ ಹೇಳಿ ಮಳೆಯಲ್ಲಿ ನೆನೆಯುವುದು ಆಟ ಆಡುವುದು ಎಲ್ಲರಿಗೂ ಇಷ್ಟವಾಗುತ್ತೆ ಆದರೆ ಅದೊಂದು ಒಂದು ರೀತಿಯಲ್ಲಿ ಚಂದ ಅನಿಸಿದರೆ ಅದರ ಜೊತೆಗೆ ಮಳೆಯಲ್ಲಿ ನೆನೆದ ನಂತರ ಬಟ್ಟೆಯನ್ನು ಬದಲಿಸುವುದು ಮತ್ತು ಒಣಗಿಸುವುದ ಅಷ್ಟೇ ಮುಖ್ಯ ಯಾಕೆಂದರೆ ಒದ್ದೆ ಬಟ್ಟೆ ಧರಿಸಿಕೊಳ್ಳುವುದು ತುಂಬಾ ಅಪಾಯವನ್ನು ಉಂಟು ಮಾಡುತ್ತದೆ.
ಮಳೆಗಾಲದಲ್ಲಿ ಯಾವಾಗಂದರೆ ಅವಾಗೆಲ್ಲ ಮಳೆ, ಸುತ್ತಲಿನ ವಾತಾವರಣ ತಣ್ಣಗೆ ಇರುವುದರಿಂದ ಬಟ್ಟೆಗಳು ಬೇಗ ಒಣಗುವುದಿಲ್ಲ ಮತ್ತು ಬಟ್ಟೆಗಳಿಗೆ ಫಂಗಸ್ ಬರುವುದು ಇದೆಲ್ಲ ತುಂಬಾ ಅಪಾಯವನ್ನು ಉಂಟು ಮಾಡುತ್ತವೆ.
ಕೆಲವೊಮ್ಮೆ ಅರ್ಜೆಂಟ್ ಅಲ್ಲಿ ಇರಬೇಕಾದರೆ ಹಸಿಯಾದ ಬಟ್ಟೆಗಳನ್ನು ಹಾಕಿಕೊಂಡು ಹೋಗುತ್ತೇವೆ ಮತ್ತು ಇವುಗಳಿಂದ ತುಂಬಾ ಸಮಸ್ಯೆಗಳು ಉಂಟಾಗುತ್ತವೆ ಮತ್ತು ಇದರ ಜೊತೆಗೆ ಹಲವಾರು ರೋಗಗಳನ್ನು ಇದು ತಂದು ಕೊಡುತ್ತದೆ. ಇದರಿಂದ ಯಾವ ರೀತಿಯ ತೊಂದರೆಗಳು ಉಂಟಾಗುತ್ತವೆ ಎನ್ನುವು ಕುರಿತು ಇಲ್ಲಿದೆ ಮಾಹಿತಿ..!
ಮಳೆಯಲ್ಲಿ ನೆನೆದು ಬಂಡ ನಂತರ ಅಥವಾ ಹಸಿಯಾದ ಬಟ್ಟೆಗಳನ್ನು ಧರಿಸಿ ಇರುವುದರಿಂದ ನಮ್ಮ ದೇಹದಲ್ಲಿನ ತೇವಾಂಶ ಹಾಗೆ ಉಳಿಯುತ್ತದೆ ಮತ್ತು ದೇಹದ ಮೇಲೆ ತೇವಾಂಶ ಹಾಗೇ ಉಳಿಯೋದ್ರಿಂದ ಸೋಂಕು ಮತ್ತು ರೋಗದ ಅಪಾಯ ಹೆಚ್ಚುತ್ತದೆ, ತೇವಾಂಶವು ಬ್ಯಾಕ್ಟೀರಿಯಾ ಮತ್ತು ಇತರ ರೋಗಗಳನ್ನು ಹೆಚ್ಚಿಸುತ್ತೆ. ಮಳೆಗಾಲದಲ್ಲಿ ಒದ್ದೆಯಾದ ಬಟ್ಟೆಗಳನ್ನು ಧರಿಸುವುದರಿಂದ ರೋಗನಿರೋಧಕ ಶಕ್ತಿ ದುರ್ಬಲವಾಗುವ ಸಾಧ್ಯತೆ ಇದೆ, ಒದ್ದೆಯಾದ ಒಳ ಉಡುಪುಗಳನ್ನ ಧರಿಸುವುದರಿಂದ ಯೋನಿ ಕಿರಿಕಿರಿ, ಕೆಂಪಾಗುವಿಕೆ ಅಥವಾ ದದ್ದುಗಳಿಗೆ ಕಾರಣವಾಗಬಹುದು, ಯೋನಿ ಪ್ರದೇಶದಲ್ಲಿರುವ ತೇವಾಂಶವು ನಿಮ್ಮ ಪಿಎಚ್ ಸಮತೋಲನವನ್ನು ತೊಂದರೆಗೊಳಿಸುತ್ತದೆ. ಇದರಿಂದ ಇನ್ ಫೆಕ್ಷನ್ ಆಗುವ ಸಾಧ್ಯತೆ ಹೆಚ್ಚು.
ಒದ್ದೆಯಾದ ಬಟ್ಟೆಯಿಂದ ಶೀತ, ನೆಗಡಿಯಿಂದ ತಾಪಮಾನ ಕಡಿಮೆಯಾಗಿ ರೋಗಗಳಿಗೆ ಆಸ್ಪದ ಕೊಟ್ಟಂತಾಗುತ್ತದೆ. ಶೀತ ಕೆಮ್ಮಿನಂತಹ ಸೋಂಕುಗಳು ಕಾಡಬಹುದು. ತೇವಾಂಶದಿಂದ ಚೆಸ್ಟ್ ಇನ್’ಫೆಕ್ಷನ್ ಆಗುತ್ತದೆ ಮತ್ತು ಉಸಿರಾಟದ ಸಮಸ್ಯೆಗಳನ್ನು ಉಂಟುಮಾಡುತ್ತದೆ .
ಒದ್ದೆಯಾದ ಬಟ್ಟೆ ಧರಿಸೋದ್ರಿಂದ ಶೀತ, ನೆಗಡಿ ಹೆಚ್ಚಾಗುವ ಸಾಧ್ಯತೆ ಇದೆ. ಏಕೆಂದರೆ ಒದ್ದೆ ಬಟ್ಟೆಯಿಂದಾಗಿ ದೇಹವು ತನ್ನ ನೈಸರ್ಗಿಕ ತಾಪಮಾನವನ್ನು ಕಳೆದುಕೊಳ್ಳುತ್ತದೆ, ಇದರಿಂದಾಗಿ ರೋಗಗಳಿಗೆ ಹೆಚ್ಚು ಒಳಗಾಗುವ ಸಾಧ್ಯತೆ ಇದೆ. ವಿಶೇಷವಾಗಿ ಈ ಬದಲಾಗುತ್ತಿರುವ ಸೀಸನ್ ನಲ್ಲಿ, ಶೀತ ಕೆಮ್ಮಿನಂತಹ ಸೋಂಕುಗಳು ನಿಮ್ಮನ್ನು ಸುಲಭವಾಗಿ ಕಾಡಬಹುದು. ಇಷ್ಟೇ ಅಲ್ಲದೆ ಒದ್ದೆಯಾದ ಬಟ್ಟೆಗಳನ್ನು ದೀರ್ಘಕಾಲದವರೆಗೆ ಧರಿಸುವುದರಿಂದ ರಾಶಸ್, ದದ್ದುಗಳು, ಕಿರಿಕಿರಿ, ತುರಿಕೆ, ಉಬ್ಬುಗಳು ಮುಂತಾದ ಚರ್ಮದ ಸೋಂಕುಗಳಿಗೆ ಕಾರಣವಾಗುತ್ತದೆ.