Health insurance | ಆರೋಗ್ಯ ವಿಮೆ ಮಾಡಿಸುವ ಮುನ್ನ ನಿಮಗೆ ಗೊತ್ತಿರಲೇಬೇಕಾದ ವಿಷಯಗಳು

Health insurance | ವಿಮೆ ಮಾಡಿಸುವ ಮೊದಲು ಬ್ರಾಂಡ್‌ನ ಖ್ಯಾತಿ ಪರಿಶೀಲಿಸುವುದು ಬಹಳ ಮುಖ್ಯ. ಇನ್ನೂರೆನ್ಸ್‌ ಪೂರೈಕೆದಾರರನ್ನು ಆಯ್ಕೆಮಾಡುವ ಮೊದಲು ಆನ್‌ಲೈನ್‌ನಲ್ಲಿ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಕಂಪನಿಯ ರೇಟಿಂಗ್‌ಗಳನ್ನು ಪರಿಶೀಲಿಸುವುದು ಅತ್ಯಗತ್ಯವಾಗಿದೆ. IRDAI ಅನುಮೋದನೆ…

health insurance vijayaprabha news

Health insurance | ವಿಮೆ ಮಾಡಿಸುವ ಮೊದಲು ಬ್ರಾಂಡ್‌ನ ಖ್ಯಾತಿ ಪರಿಶೀಲಿಸುವುದು ಬಹಳ ಮುಖ್ಯ. ಇನ್ನೂರೆನ್ಸ್‌ ಪೂರೈಕೆದಾರರನ್ನು ಆಯ್ಕೆಮಾಡುವ ಮೊದಲು ಆನ್‌ಲೈನ್‌ನಲ್ಲಿ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಕಂಪನಿಯ ರೇಟಿಂಗ್‌ಗಳನ್ನು ಪರಿಶೀಲಿಸುವುದು ಅತ್ಯಗತ್ಯವಾಗಿದೆ.

IRDAI ಅನುಮೋದನೆ

ಇನ್ನೂರೆನ್ಸ್ ರೆಗ್ಯುಲೆಟರಿ ಮತ್ತು ಡೆವಲಪ್ಟೆಂಟ್ ಅಥಾರಿಟಿಯು ಸರ್ಕಾರಿ ಘಟಕವಾಗಿದ್ದು, ಇದು ಭಾರತದಲ್ಲಿನ ಇನ್ನೂರೆನ್ಸ್ ಕಂಪನಿಗಳ ನಿಯಂತ್ರಣದ ಉಸ್ತುವಾರಿಯನ್ನು ಹೊಂದಿದೆ. ಇನ್ನೂರೆನ್ಸ್ ಅನ್ನು ಪಡೆದುಕೊಳ್ಳುವಾಗ IRDAI ಅನುಮೋದಿತ ಕಂಪನಿಗಳನ್ನು ಆಯ್ಕೆ ಮಾಡಬೇಕು.

ಕ್ರೈಮ್ ಸೆಟಲ್ಕೆಂಟ್ ಅನುಪಾತ

ಕಂಪನಿಯನ್ನು ಆಯ್ಕೆ ಮಾಡುವ ಮುನ್ನ ಅದರ ಕ್ರೈಮ್ ಸೆಟಲೈಂಟ್ ಅನುಪಾತ ಪರಿಶೀಲಿಸಬೇಕು. ಕಂಪನಿಯು ಎಷ್ಟು ಶೀಘ್ರವಾಗಿ ಮತ್ತು ಸಮರ್ಪಕವಾಗಿ ಕ್ರೈಮ್‌ಗಳನ್ನು ಪರಿಹರಿಸುತ್ತದೆ, ಇತ್ಯರ್ಥಗೊಳಿಸುವ ಶೇಕಡಾವಾರು ಕ್ರೈಮ್‌ಗಳ ಕುರಿತು ಸರಿಯಾದ ಮಾಹಿತಿ ತಿಳಿದಿರಬೇಕು.

Vijayaprabha Mobile App free

ನೆಟ್‌ವರ್ಕ್ ಆಸ್ಪತ್ರೆಗಳು

ಇನ್ನೂರೆನ್ಸ್ ಕಂಪನಿಯನ್ನು ಆಯ್ಕೆ ಮಾಡುವ ಮೊದಲು ಗರಿಷ್ಠ ಸಂಖ್ಯೆಯ ನೆಟ್ ವರ್ಕ್‌ ಔಟ್‌ಲೆಟ್‌ಗಳನ್ನು ಹೊಂದಿರುವ ಕಂಪನಿಗಳನ್ನು ನೋಡಿ. ಕಂಪನಿಯ ನೆಟ್ ವರ್ಕ್ ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳಲ್ಲಿ ಇನ್ನೂರೆನ್ಸ್ ಪ್ರೈಮ್ ಸಲ್ಲಿಸದೆ ಕ್ಯಾಶ್‌ಲೆಸ್‌ ಚಿಕಿತ್ಸೆಯನ್ನು ಪಡೆಯಬಹುದು.

ತೊಂದರೆ-ಮುಕ್ತ ಕ್ರೈಮ್‌ಗಳ ಪ್ರಕ್ರಿಯೆ

ನಿಮ್ಮ ವಿಮಾದಾರರು ಸರಳವಾದ ಮತ್ತು ತೊಂದರೆ-ಮುಕ್ತ ಕ್ರೈಮ್‌ಗಳ ವಿಧಾನವನ್ನು ಅನುಸರಿಸುತ್ತಾರೆ ಎ೦ಬುದನ್ನು ಖಚಿತಪಡಿಸಿಕೊಳ್ಳಬೇಕು. ಏಕೆಂದರೆ ಇದು ಮೆಡಿಕಲ್‌ ಎಮರ್ಜೆನ್ಸಿಗಳಲ್ಲಿ ಹೆಚ್ಚು ಸಮಯವನ್ನು ತೆಗೆದುಕೊಳ್ಳುವುದಿಲ್ಲ ಅಥವಾ ಗೊ೦ದಲಕ್ಕೀಡು ಮಾಡುವುದಿಲ್ಲ.

ಪಾಲಿಸಿ ವಿನಾಯಿತಿಗಳು

ಆರೋಗ್ಯ ವಿಮಾ ಪಾಲಿಸಿಗಳು ನಿರ್ದಿಷ್ಟ ಚಿಕಿತ್ಸೆಗಳು ಅಥವಾ ಕಾಯಿಲೆಗಳ ವ್ಯಾಪ್ತಿಗೆ ಬರುವುದಿಲ್ಲ. ಸೌಂದರ್ಯವರ್ಧಕ ಚಿಕಿತ್ಸೆ ಅಥವಾ ಅಪಾಯಕಾರಿ ಚಟುವಟಿಕೆಗಳಿಂದ ಉಂಟಾಗುವ ಗಾಯಗಳ ಚಿಕಿತ್ಸೆಗಳನ್ನು ಪಾಲಿಸಿಯಿ೦ದ ಹೊರಗಿಡಲಾಗುತ್ತದೆ.

ಷರತ್ತುಗಳನ್ನು ಅರ್ಥ ಮಾಡಿಕೊಳ್ಳಿ

ಕಂಪೆನಿಗಳಿಗೆ ಅನುಗುಣವಾಗಿ ಷರತ್ತುಗಳಲ್ಲಿ ವ್ಯತ್ಯಾಸಗಳಿರುತ್ತವೆ. ಇವುಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಕೆಲವು ವಿಮಾ ಪಾಲಿಸಿಗಳು ನಿರ್ದಿಷ್ಟ ಚಿಕಿತ್ಸೆಗಳಂತಹ ಕೆಲವು ಪ್ರಯೋಜನಗಳ ಮೇಲೆ ಉಪ-ಮಿತಿಗಳನ್ನು ಹೊಂದಿರುತ್ತವೆ. ಇವುಗಳನ್ನು ಗಮನಿಸುವುದು ಮುಖ್ಯ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.