ಆಯುಷ್ಮಾನ್ ಭಾರತ್ ಯೋಜನೆಯಡಿ ಆರೋಗ್ಯ ವಿಮೆ(Health insurance) ಒದಗಿಸಲು ಕೇಂದ್ರ ಸರಕಾರ ಹಿರಿಯ ನಾಗರಿಕಗೆ ಸಿಹಿ ಸುದ್ದಿ ನೀಡಿದ್ದು, ಈ ಯೋಜನೆಯಡಿ ಇನ್ನು ಮುಂದೆ ಉಚಿತವಾಗಿ 5 ಲಕ್ಷದ ವರೆಗೆ ಹಿರಿಯ ನಾಗರಿಕರು ಚಿಕಿತ್ಸೆ ಪಡೆಯಲು ಅವಕಾಶ ನೀಡಲಾಗಿದ್ದು, ಈ ಕುರಿತು ಸಂಪೂರ್ಣ ಮಾಹಿತಿಯನ್ನು ಅಂಕಣದಲ್ಲಿ ವಿವರಿಸಲಾಗಿದೆ.
ಆಯುಷ್ಮಾನ್ ಭಾರತ್ ಯೋಜನೆಯಡಿ ಈ ಹಿಂದೆ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳಿಗೆ ಮಾತ್ರ ಈ ಯೋಜನೆಯಡಿ 5.00 ಲಕ್ಷದ ವರೆಗೆ ಉಚಿತ ಆರೋಗ್ಯ ವಿಮೆ ಸೌಲಭ್ಯ ಪಡೆಯಲು ಅವಕಾವಿತ್ತು ಅದರೆ ಕೇಂದ್ರ ಸರಕಾರದ ಹೊಸ ನಿಯಮದ ಅನ್ವಯ ದೇಶದಲ್ಲಿ 70 ವರ್ಷ ಮೇಲ್ಪಟ ಎಲ್ಲಾ ನಾಗರಿಕರಿಗೆ ಈ ಯೋಜನೆಯಡಿ 5.00 ಲಕ್ಷದ ವರೆಗೆ ಉಚಿತ ಆರೋಗ್ಯ ವಿಮೆ ಪಡೆಯಲು ಅವಕಾಶ ನೀಡಲಾಗಿದೆ.
70 ವರ್ಷ ಮೇಲ್ಪಟ ಎಲ್ಲಾ ನಾಗರಿಕರಿಗೆ 5.00 ಲಕ್ಷದ ವರೆಗೆ ಉಚಿತ ಆರೋಗ್ಯ ವಿಮೆ:
ದೇಶದಲ್ಲಿ ವಾಸಿಸುವ ಎಲ್ಲಾ 70 ವರ್ಷ ಮೇಲ್ಪಟ ನಾಗರಿಕರಿಗೆ ಇನ್ನು ಮುಂದೆ ಆಯುಷ್ಮಾನ್ ಭಾರತ್ ಯೋಜನೆಯಡಿ ಉಚಿತವಾಗಿ 5.00 ಲಕ್ಷದ ವರೆಗೆ ಆರೋಗ್ಯ ಸೇವೆಗಳನ್ನು ಪಡೆಯಬಹುದಾಗಿದೆ.
ನಿಮ್ಮ ಹತ್ತಿರದ/ನಿಮ್ಮ ಜಿಲ್ಲೆಯಲ್ಲಿ ಯಾವೆಲ್ಲ ಆಸ್ಪತ್ರೆಯಲ್ಲಿ(Hospitals)ಈ ಯೋಜನೆಯಡಿ ಚಿಕಿತ್ಸೆ ಪಡೆಯಬಹುದು ಎಂದು ನಿಮ್ಮ ಮೊಬೈಲ್ ನಲ್ಲಿ ತಿಳಿಯುವ ವಿಧಾನ:
ನಾಗರಿಕರು ಕೇಂದ್ರದ ಅಧಿಕೃತ ಆಯುಷ್ಮಾನ್ ಭಾರತ್ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಈ ಕೆಳಗೆ ವಿವರಿಸಿರುವ ವಿಧಾನವನ್ನು ಅನುಸರಿಸಿ ನಿಮ್ಮ ಮೊಬೈಲ್ ನಲ್ಲೇ ನಿಮ್ಮ ಹತ್ತಿರದ/ನಿಮ್ಮ ಜಿಲ್ಲೆಯಲ್ಲಿ ಯಾವೆಲ್ಲ ಆಸ್ಪತ್ರೆಯಲ್ಲಿ(Hospitals)ಈ ಯೋಜನೆಯಡಿ ಚಿಕಿತ್ಸೆ ಪಡೆಯಬಹುದು ಎಂದು ಚೆಕ್ ಮಾಡಿಕೊಳ್ಳಬಹುದು.
Step-1: ಮೊದಲಿಗೆ ಈ Click here ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.
Step-2: ಇದಾದ ಬಳಿಕ ಈ ಪೇಜ್ ನಲ್ಲಿ ನಿಮ್ಮ ರಾಜ್ಯ(State ),ಜಿಲ್ಲೆ(District ), Hospital Type, Speciality, Hospital Name/ಆಸ್ಪತ್ರೆ ಹೆಸರು, Empanelment Type ಆಯ್ಕೆ ಮಾಡಿಕೊಂಡು ಕೆಳಗೆ ಕಾಣುವ ಕ್ಯಾಪ್ಚ್ ಕೋಡ್ ಅನ್ನು ನಮೂದಿಸಿ “Search” ಬಟನ್ ಮೇಲೆ ಕ್ಲಿಕ್ ಮಾಡಿದರೆ ಆಸ್ಪತ್ರೆ ಪಟ್ಟಿ ತೋರಿಸುತ್ತದೆ.
PMJAY website-ಅಧಿಕೃತ ವೆಬ್ಸೈಟ್: click here
Ayushman card application-ಅರ್ಜಿ ಸಲ್ಲಿಸುವ ಮಾಹಿತಿ ವಿವರ:
ಅರ್ಹ ಅರ್ಜಿದಾರರು ಅಗತ್ಯ ದಾಖಲಾತಿಗಳೊಂದಿಗೆ ನಿಮ್ಮ ಹಳ್ಳಿಯ ಗ್ರಾಮ ಒನ್, ಕರ್ನಾಟಕ ಒನ್,ಬೆಂಗಳೂರು ಒನ್, CSC ಕೇಂದ್ರವನ್ನು ನೇರವಾಗಿ ಭೇಟಿ ಮಾಡಿ ಆಯುಷ್ಮಾನ್ ಭಾರತ್ ಕಾರ್ಡ್ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ಈ ಯೋಜನೆಯ ಅಧಿಕೃತ ವೆಬ್ಸೈಟ್ https://nha.gov.in/index ಅಥವಾ PMJAY MOBILE APP ಡೌನ್ಲೋಡ್ ಮಾಡಿಕೊಂಡು ಸ್ವಯಂ ಅರ್ಜಿದಾರರೇ ತಮ್ಮ ಮೊಬೈಲ್ ಮೂಲಕ ನೋಂದಾಯಿಸಿಕೊಂಡು PDF ಕಾರ್ಡ ಡೌನ್ಲೋಡ್ ಮಾಡಿಕೊಳ್ಳಬಹುದು.
Documents- ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
ಆಯುಷ್ಮಾನ್ ಭಾರತ್ ಯೋಜನೆಯಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಶ್ಯವಿರುವ ದಾಖಲೆಗಳ ಮಾಹಿತಿ ಈ ಕೆಳಗಿನಂತಿದೆ:
1) ಅರ್ಜಿದಾರರ ಆಧಾರ್ ಕಾರ್ಡ.
2) ರೇಷನ್ ಕಾರ್ಡ ಪ್ರತಿ.
3) ಬ್ಯಾಂಕ್ ಪಾಸ್ ಬುಕ್.
4) ಪೋಟೋ
5) ಮೊಬೈಲ್ ನಂಬರ್.
Ayushman card benefits-ಈ ಯೋಜನೆಯಡಿ ಯಾವೆಲ್ಲ ಚಿಕಿತ್ಸೆಗಳನ್ನು ಪಡೆಯಬಹುದು:
ಬಡ ಕುಟುಂಬ ವರ್ಗದ ಅಂದರೆ ಬಿಪಿಎಲ್(BPL card) ಕಾರ್ಡ್ ಇರುವವರು ಒಂದು ವರ್ಷಕ್ಕೆ 5 ಲಕ್ಷದವರೆಗೆ ಉಚಿತ ಚಿಕಿತ್ಸೆ ಪಡೆಯಬಹುದು ಹಾಗೆಯೇ ಎಪಿಎಲ್/APL card ಕುಟುಂಬಕ್ಕೆ 1.5 ಲಕ್ಷದವರೆಗೂ ಸಹಪಾವತಿ ಆಧಾರದ ಮೇಲೆ ಒಟ್ಟು 1650 ವಿವಿಧ ಬಗೆಯ ಚಿಕಿತ್ಸೆಗಳಿಗೆ ಎಲ್ಲಾ ಸರ್ಕಾರಿ ಹಾಗೂ ನೋಂದಾಯಿತ ಖಾಸಗಿ(ayushman card benefits hospital list) ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ.
ತುರ್ತು ಸಂದರ್ಭಗಳಲ್ಲಿ 171 ಚಿಕಿತ್ಸಾ ವಿಧಾನಗಳಿಗೆ ರೋಗಿಯು ನೇರವಾಗಿ ಚಿಕಿತ್ಸೆ ಪಡೆಯಬಹುದು.
Ayushman yojana Helpline- ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಕ್ಯೆಗಳು 14555 ಅಥವಾ 1800 425 8330 ಗೆ ಕರೆ ಮಾಡಿ.