ಕ್ವೆಟ್ಟಾ: ನೈಋತ್ಯ ಪಾಕಿಸ್ತಾನದ ಬಂದೂಕುಧಾರಿಗಳು 20 ಗಣಿಗಾರರನ್ನು ಹತ್ಯೆಗೈದಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗುರುವಾರ ತಡರಾತ್ರಿ ದುಕಿ ಜಿಲ್ಲೆಯ ಕಲ್ಲಿದ್ದಲು ಗಣಿಯಲ್ಲಿನ ವಸತಿಗೃಹಗಳಿಗೆ ಬಂದೂಕುಧಾರಿಗಳು ನುಗ್ಗಿ, ಜನರನ್ನು ಸುತ್ತುವರಿದು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹಮಾಯುನ್ ಖಾನ್ ನಾಸಿರ್ ತಿಳಿಸಿದ್ದಾರೆ.
ಹೆಚ್ಚಿನ ಪುರುಷರು ಬಲೂಚಿಸ್ತಾನದ ಪಶ್ತೂನ್ ಮಾತನಾಡುವ ಪ್ರದೇಶಗಳಿಂದ ಬಂದವರು. ಸತ್ತವರಲ್ಲಿ ಮೂವರು ಮತ್ತು ಗಾಯಗೊಂಡವರಲ್ಲಿ ನಾಲ್ವರು ಅಫ್ಘಾನಿಸ್ತಾನದವರು. ಯಾವುದೇ ಗುಂಪು ಈ ದಾಳಿಯ ತಕ್ಷಣದ ಹೊಣೆಗಾರಿಕೆಯನ್ನು ಹೊತ್ತುಕೊಂಡಿಲ್ಲ. ಆದರೆ ಕಾನೂನುಬಾಹಿರ ಬಲೂಚ್ ಲಿಬರೇಶನ್ ಆರ್ಮಿ ಮೇಲೆ ಸಂಶಯ ವ್ತಕ್ತವಾಗಿದೆ. ಇದು ಸಾಮಾನ್ಯವಾಗಿ ನಾಗರಿಕರು ಮತ್ತು ಭದ್ರತಾ ಪಡೆಗಳನ್ನು ಗುರಿಯಾಗಿಸುವುದರಿಂದ ಈ ಗುಂಪಿನ ಕುರಿತು ತನಿಖೆ ಮುಂದುವರಿದಿದೆ.