ನಿಮ್ಮ ಖಾತೆಗೆ ಗೃಹಲಕ್ಷ್ಮಿ ಹಣ ಬಂದಿಲ್ವ? ಹೀಗೆ ಮಾಡಿ..!

Gruhalakshmi yojana: ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಜಮೆ ಆಗದಿದ್ದರೆ, ತಪ್ಪದೆ ಇದನ್ನು ಮಾಡಿಸಬೇಕು. ಜೂನ್‌ ತಿಂಗಳ ಗೃಹಲಕ್ಷ್ಮಿ ಹಣವನ್ನು ಮಹಿಳೆಯರ ಖಾತೆಗೆ ಜಮಾ ಮಾಡಿದ್ದು, ಹಣ ಬಾರದೇ…

Gruhalakshmi yojana vijayaprabha news

Gruhalakshmi yojana: ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಜಮೆ ಆಗದಿದ್ದರೆ, ತಪ್ಪದೆ ಇದನ್ನು ಮಾಡಿಸಬೇಕು.

ಜೂನ್‌ ತಿಂಗಳ ಗೃಹಲಕ್ಷ್ಮಿ ಹಣವನ್ನು ಮಹಿಳೆಯರ ಖಾತೆಗೆ ಜಮಾ ಮಾಡಿದ್ದು, ಹಣ ಬಾರದೇ ಇರುವವರು ತಪ್ಪದೇ ಎನ್‌ ಪಿಸಿಐ ಸಕ್ರಿಯವಾಗಿದೆಯೇ ಎಂಬುದನ್ನು ಚೆಕ್‌ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಇಲ್ಲಿಯವರೆಗೂ ಗೃಹಲಕ್ಷ್ಮೀ ಹಣ ಜಮಾ ಆಗದೇ ಇದ್ದವರು ಎನ್‌ ಪಿ ಸಿ ಐ ಮ್ಯಾಪಿಂಗ್ ಸಕ್ರಿಯವಾಗಿದೆಯೇ ಎಂಬುದನ್ನು ಸಾರ್ವಜನಿಕರು ಪರಿಶೀಲಿಸಿಕೊಳ್ಳಬೇಕು.

ಇದನ್ನು ಓದಿ: ಸಣ್ಣ ನಗರ ವಸತಿಗಾಗಿ ಬಡ್ಡಿ ಸಹಾಯಧನ ಯೋಜನೆ ಬಗ್ಗೆ ಗೊತ್ತೇ?

Vijayaprabha Mobile App free

ಖಾತೆಗೆ ಬಾರದ ಗೃಹಲಕ್ಷ್ಮೀ ಹಣ: ಸರ್ಕಾರದ ವಿರುದ್ದ ಗೃಹಲಕ್ಷ್ಮಿಯರು ಕಿಡಿ!

ಗೃಹಲಕ್ಷ್ಮೀ ಯೋಜನೆಯ ಹಣ ಲೋಕಸಭಾ ಚುನಾವಣೆಯ ನಂತರ ಬಂದಿಲ್ಲ ಎಂದು ಕೋಲಾರದಲ್ಲಿ ಮಹಿಳೆಯರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಸಿದ್ದರಾಮಯ್ಯ ಸರ್ಕಾರ ಹಣ ಕೊಡ್ತೀವಿ ಎಂದು ನಿಲ್ಲಿಸಿದ್ದಾರೆ. ಈಗ ನಮಗೆ ಕೂಲಿ ಮಾಡೊದು ತಪ್ಪಿಲ್ಲ ಎಂದು ಒಂದೆಡೆ ಮಹಿಳೆಯರು ಆಕ್ರೋಶ ಹೊರಹಾಕಿದರೆ, ಇನ್ನೊಂದೆಡೆ ವಿಧವಾ ಪ್ರೋತ್ಸಾಹ ಧನ, ಹಿರಿಯ ನಾಗರೀಕರ ಪಿಂಚಣಿ ಹಣವೂ ಜಮಾ ಮಾಡಿಲ್ಲ ಎಂದು ವೃದ್ದರು ಸರ್ಕಾರದ ವಿರುದ್ಧ ಹಿಡಿ ಶಾಪ ಹಾಕಿದ್ದಾರೆ. ಕೋಲಾರ ಜಿಲ್ಲೆಯ ಕೆಲೆವಡೆ ಕಳೆದ 4 ತಿಂಗಳಿಂದ ಗೃಹಲಕ್ಷ್ಮಿ ಹಣ ಜಮೆ ಆಗಿಲ್ಲ ಎಂದು ತಿಳಿದುಬಂದಿದೆ.

ಇದನ್ನು ಓದಿ: ಗೃಹಲಕ್ಷ್ಮೀ ಯೋಜನೆ: ಇಂದೇ ಜಮೆ ಆಗಲಿದೆ ಬಾಕಿ ಮೊತ್ತ..!?

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.