ಗೃಹಿಣಿಯರೇ ಗಮನಿಸಿ: ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಈ ಕೆಲಸ ಮಾಡಿ

(Gruha Lakshmi:) ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ 2000 ಹಣ ಅರ್ಹ ಮಹಿಳೆಯರ ಖಾತೆಗೆ ಜಮಾ ಆಗಿದೆ. ಆದರೆ, ಇನ್ನು ಕೂಡ ಹಣ ಜಮಾ ಆಗದೇ ಇರುವ ಮಹಿಳೆಯರು…

(Gruha Lakshmi:) ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ 2000 ಹಣ ಅರ್ಹ ಮಹಿಳೆಯರ ಖಾತೆಗೆ ಜಮಾ ಆಗಿದೆ. ಆದರೆ, ಇನ್ನು ಕೂಡ ಹಣ ಜಮಾ ಆಗದೇ ಇರುವ ಮಹಿಳೆಯರು ಕಡ್ಡಾಯವಾಗಿ ಈ ಕೆಲಸ ಮಾಡಬೇಕು. ಹಾಗಾದರೆ ಏನು ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಹಣ ಬಾರದಿದ್ದರೆ ಯಜಮಾನಿಯರು ತಪ್ಪದೇ ಈ ಕೆಲಸ ಮಾಡಿ:
* ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಕೊಂಡಿರುವ ಮಹಿಳೆಯರು ತಪ್ಪದೇ ತಮ್ಮ ಖಾತೆಗೆ ಇ-ಕೆವೈಸಿ ಮಾಡಿಸಬೇಕು.
* ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆಯಬೇಕಾದರೆ ರೇಷನ್ ಕಾರ್ಡ್ ನಲ್ಲಿ ಇರುವ ಪ್ರತಿಯೊಬ್ಬ ಸದಸ್ಯರೂ ಕೂಡ ಇ-ಕೆವೈಸಿ ಮಾಡಿಸಬೇಕು.
* ಗೃಹಲಕ್ಷ್ಮಿ ಯೋಜನೆಯಡಿ ಖಾತೆಗೆ ಹಣ ಬಾರದೇ ಇರುವವರು ಮುಖ್ಯವಾಗಿ ರೇಷನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಹೀಗಾಗಿ ರೇಷನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡಿಸಿಕೊಳ್ಳಿ.
* ಗೃಹ ಲಕ್ಷ್ಮಿ ಫಲಾನುಭವಿಗಳಿಗೆ NPCI ಕಡ್ಡಾಯಗೊಳಿಸಿದೆ. ಗೃಹ ಲಕ್ಷ್ಮಿ ಫಲಾನುಭವಿಗಳು ಕಡ್ಡಾಯವಾಗಿ E-KYC ಆಧಾರ್ ಸೀಡಿಂಗ್ ಮಾಡಿಸಬೇಕಾಗಿದೆ.

* ಕೆಲವೊಮ್ಮೆ ಖಾತೆಗೆ ಹಣ ಜಮೆಯಾಗಿದ್ದರ ಬಗ್ಗೆ ಮೊಬೈಲ್ SMS ಬರುತ್ತದೆ. ಹಲವು ಬಾರಿ ಎಸ್‌ಎಂಎಸ್ ಬರುವುದಿಲ್ಲ. ಇಂತಹ ಸಮಯದಲ್ಲಿ ನೀವು ಬ್ಯಾಂಕ್ ನಲ್ಲಿ ಹೋಗಿ ಪಾಸ್ ಬುಕ್ ಚೆಕ್ ಮಾಡಿಸಬೇಕು.
* ಗೃಹಲಕ್ಷ್ಮಿ ಯೋಜನೆಯಡಿ ನೋಂದಣಿ ಮಾಡಿಕೊಂಡು ಹಣ ಬಾರದ ಫಲಾನುಭವಿಗಳು ಕೂಡಲೇ ಅರ್ಜಿಯೊಂದಿಗೆ ಇ-ಕೆವೈಸಿ ಸಂಬಂಧಿತ ಸಮಸ್ಯೆಗಳನ್ನು ಬ್ಯಾಂಕ್ ಗಳಲ್ಲಿ ಪರಿಹರಿಸಿಕೊಳ್ಳಬೇಕು.

Vijayaprabha Mobile App free

ಈ ರೀತಿ ಮಾಡಿದ್ದರೆ ನಿಮಗೆ ಗೃಹಲಕ್ಷ್ಮಿ ಯೋಜನೆಯ 2000 ಹಣ ನಿಮ್ಮ ಖಾತೆಗೆ ಬರಲಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.