(Traffic Police) ರಾಜ್ಯದಲ್ಲಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡೋರು ಇದ್ದೇ ಇರ್ತಾರೆ. ಹೀಗೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಪೊಲೀಸರಿಂದ ತಪ್ಪಿಸಿಕೊಳ್ಳಲು ನಾನಾ ಟೆಕ್ನಿಕ್ ಯೂಸ್ ಮಾಡ್ತಾ ಇರ್ತಾರೆ. ಆದ್ರೆ ಇದರ ನಡುವೆ ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೊಸ ಐಡಿಯಾ ಹುಡುಕಿದ್ದಾರೆ. ಅದುವೇ “ಪೊಲೀಸ್ ಇರ್ತಾರೆ ನೋಡ್ಕೊಂಡ್ ಹೋಗಿ’.
ಹೌದು, ನೀವೇನಾದರೂ ಹೆಲೈಟ್ ಧರಿಸದೆ, ಸೀಟ್ ಬೆಲ್ಟ್ ಧರಿಸದೆ, ಲೈಸೆನ್ಸ್ ಇಲ್ಲದೆ ಹೋಗ್ತಾ ಇದ್ರೆ ಇದ್ರಿಂದ ತಪ್ಪಿಸಿಕೊಳ್ಳಲು ಅನೇಕರು ಟ್ರಾಫಿಕ್ ಪೊಲೀಸ್ ಇಲ್ಲದ ಜಾಗ ಹುಡುತ್ತಾರೆ. ಅದಕ್ಕೆ ಈಗ ಗೂಗಲ್ ಮ್ಯಾಪ್ ಸಹಾಯ ಮಾಡ್ತಿದೆ.
“ಪೊಲೀಸ್ ಇರ್ತಾರೆ, ನೋಡ್ಕೊಂಡ್ ಹೋಗಿ”:
ಗೂಗಲ್ ಮ್ಯಾಪ್ ನಲ್ಲಿ Police ertare.. ಎಂದು ಹುಡುಕಿದರೆ ಅಂತಹ ಹಲವಾರು ಹೆಸರಿನ ಸ್ಥಳಗಳನ್ನು ಕಾಣಬಹುದಾಗಿದೆ. ಇದು ಟ್ರಾಫಿಕ್ ಪೊಲೀಸರು ಹೆಚ್ಚಾಗಿ ಇರುವ ಸ್ಥಳಗಳನ್ನು ಗುರುತಿಸಿದ್ದು, ಇತರೆ ವಾಹನ ಸವಾರರು ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡುವಂತಿದೆ.
ಈ ಎಚ್ಚರಿಕೆಯ ಸ್ಕ್ರೀನ್ ಶಾಟ್‌ಗಳು ವೈರಲ್ ಆಗಿದ್ದು, ಲೊಕೇಶನ್ ಟ್ಯಾಗ್‌ನ ಸ್ಕ್ರೀನ್‌ಶಾಟ್ ಅನ್ನು ಕೆಲವು ವಾಹನ ಸವಾರರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
“ಹೆಲ್ಮೆಟ್ ಹಾಕ್ಕೊಂಡ್ ಬನ್ನಿ, ಪೊಲೀಸ್ ಇರ್ತಾರೆ”
ಕೆಲವು ಸ್ಥಳಗಳನ್ನು “ಹೆಲ್ಮೆಟ್ ಹಾಕ್ಕೊಂಡ್ ಬನ್ನಿ, ಪೊಲೀಸ್ ಇರ್ತಾರೆ” ಎಂದು ಸಹ ಕೆಲವು ವಾಹನ ಸವಾರರು ಗೂಗಲ್ ಮ್ಯಾಪ್‌ನಲ್ಲಿ ಗುರುತಿಸಿದ್ದಾರೆ.
ಬರೀ ಬೆಂಗಳೂರು ಮಾತ್ರವಲ್ಲದೆ ಮೈಸೂರು, ಚಿಕ್ಕಮಗಳೂರು, ಹಿರಿಯೂರು, ದಾವಣಗೆರೆ, ಕೊಟ್ಟಿಗೆಹಾರ-ಚಿಕ್ಕಮಗಳೂರು ರಸ್ತೆಯಲ್ಲೂ ಕೂಡ ಪೊಲೀಸರ ತಪಾಸಣೆ ಸ್ಥಳಗಳನ್ನು ಗೂಗಲ್ ಮ್ಯಾಪ್‌ನಲ್ಲಿ ಗುರುತಿಸಲಾಗಿದೆ.
ಪೊಲೀಸರು ತಪಾಸಣೆ ನಡೆಸುತ್ತಾರೆ ಅಥವಾ ದಂಡ ವಿಧಿಸುತ್ತಾರೆ ಎನ್ನುವ ಕಾರಣಕ್ಕೆ ಸಂಚಾರ ಸುರಕ್ಷತೆಯನ್ನು ಗಾಳಿಗೆ ತೂರಿ ವಾಹನ ಚಲಾಯಿಸುವುದು ನಮ್ಮ ಜೀವನಕ್ಕಷ್ಟೇ ಅಲ್ಲದೇ, ಇತರರ ಜೀವನಕ್ಕೂ ಮಾರಕ.