ಲಂಡನ್: ಜಾಗತಿಕ ಹಸಿವು ಸೂಚ್ಯಂಕ (GHI)ದಲ್ಲಿ ಭಾರತ 105ನೇ ಸ್ಥಾನಕ್ಕೆ ಇಳಿದಿದ್ದು, ಇದು ಭಾರತದಲ್ಲಿ ಹಸಿವಿನ ತೀವ್ರತೆ ಗಂಭೀರವಿದೆ ಎಂದು ಸೂಚಿಸಿದೆ.
127 ದೇಶಗಳಲ್ಲಿ ಪೌಷ್ಟಿಕಾಂಶದ ಕೊರತೆ ಮತ್ತು ಮಕ್ಕಳ ಮರಣ ಸೂಚಕಗಳ ಆಧಾರದ ಮೇಲೆ GHI ಸ್ಕೋರ್‌ಗಳೊಂದಿಗೆ ಹಸಿವಿನ ಮಟ್ಟವನ್ನು ಅಳೆಯಲು ಮತ್ತು ಪತ್ತೆಹಚ್ಚಲು ಅಂತರರಾಷ್ಟ್ರೀಯ ಮಾನವೀಯ ಏಜೆನ್ಸಿಗಳು ಜಾಗತಿಕ ಹಸಿವು ಸೂಚ್ಯಂಕ ಅಳೆಯುತ್ತಾರೆ.
ಇದರ 2024ರ ವರದಿಯು, ಅಂದರೆ 19ನೇ ಆವೃತ್ತಿಯು ಈ ವಾರ ಐರಿಶ್ ಮಾನವೀಯ ಸಂಸ್ಥೆ ಕನ್ಸರ್ನ್ ವರ್ಲ್ಡ್‌ವೈಡ್ ಮತ್ತು ಜರ್ಮನ್ ನೆರವು ಸಂಸ್ಥೆ ವೆಲ್ತುಂಗರ್‌ಹಿಲ್ಫ್‌ನಿಂದ ಬಿಡುಗಡೆ ಮಾಡಲಾಗಿದೆ. ಹಲವಾರು ದಶಕಗಳಿಂದ ವಿಶ್ವದ ಬಡ ದೇಶಗಳಲ್ಲಿ ಹಸಿವಿನ ಮಟ್ಟವು ಎಷ್ಟಿದೆ ಮತ್ತು ಈ ಸಮಸ್ಯೆಯನ್ನು ನಿಭಾಯಿಸುವ ಕ್ರಮಗಳನ್ನು ಕೈಗೊಳ್ಳಲು ಇದು ಶಿಫಾರಸು ಮಾಡುತ್ತದೆ.
ದಕ್ಷಿಣ ಏಷ್ಯಾದ ಇತೆ ನೆರೆಹೊರೆಯ ರಾಷ್ಟ್ರಗಳಾದ ಬಾಂಗ್ಲಾದೇಶ, ನೇಪಾಳ ಮತ್ತು ಶ್ರೀಲಂಕಾ ‘ಮಧ್ಯಮ’ ವರ್ಗದ ಅಡಿಯಲ್ಲಿ ಪಟ್ಟಿಯಾಗಿದ್ದು, ಭಾರತವು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಜೊತೆಗೆ ‘ಗಂಭೀರ’ ವರ್ಗದೊಳಗೆ ಸೇರುವ 42 ದೇಶಗಳ ಪೈಕಿ ಒಂದಾಗಿದೆ.




