Ganesha festival : ಹಿಂದೂ ದೇವರನ್ನು ಪೂಜಿಸುವ ಪ್ರತಿಯೊಂದು ಮನೆಯಲ್ಲಿಯೂ ಕೂಡ ಗಣಪತಿ ದೇವರ ವಿಗ್ರಹ ಅಥವಾ ಫೋಟೋ ಇದ್ದೆ ಇರುತ್ತದೆ. ಆದರೆ ಯಾವ ಬಣ್ಣದ ವಿಗ್ರಹವನ್ನು ಮನೆಯಲ್ಲಿ ಇಟ್ಟರೆ ಒಳಿತು ಗೊತ್ತಾ? ಗಣೇಶನ ದೇಹದ ಮುಖ್ಯ ಬಣ್ಣ ಕೆಂಪು ಮತ್ತು ಹಸಿರು. ಈ ಬಣ್ಣದ ವಿಗ್ರಹ ಇಡಬಹುದು.
ಐಶ್ವರ್ಯ ಮತ್ತು ಸಮೃದ್ಧಿಯನ್ನು ಬಯಸುವವರು ಹಳದಿ ಬಣ್ಣದ ವಿಗ್ರಹ ಇಡಬಹುದು. ವಾಸ್ತು ಶಾಸ್ತ್ರದ ಪ್ರಕಾರ, ಬಿಳಿ ಬಣ್ಣದ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿದರೆ ಶಾಂತಿ ಮತ್ತು ಸಮೃದ್ಧಿ ಹೆಚ್ಚುತ್ತದೆ.
ಗಣೇಶನಿಗೆ ಹೀಗೆ ಪೂಜೆ ಮಾಡಿದ್ರೆ ಅದೃಷ್ಟ ಒಲಿಯುವುದು ಖಂಡಿತ!
ವಿನಾಯಕನಿಗೆ ವಿಘ್ನವಿನಾಶಕ ಎಂಬ ಹೆಸರೂ ಕೂಡಾ ಇದೆ. ವಿಘ್ನವಿನಾಶಕ ಎಂದರೆ ವಿಘ್ನವನ್ನು ದೂರಮಾಡುವವ ಎಂಬ ಅರ್ಥವನ್ನು ನೀಡುತ್ತದೆ. ವಿನಾಯಕ ದುಃಖ ಮತ್ತು ಕಷ್ಟಗಳನ್ನು ಸೋಲಿಸುವವನು ಎಂದರ್ಥ.
ಆದ್ದರಿಂದಲೇ ಯಾವುದೇ ಪೂಜೆಗೂ ಮುನ್ನ ಗಣೇಶನನ್ನು ಪೂಜಿಸುತ್ತೇವೆ. ಆದರೆ ಬುಧವಾರದಂದು ಗಣಪತಿಯನ್ನು ಪೂಜಿಸುವುದರಿಂದ ಸಮೃದ್ಧಿ ಹೆಚ್ಚುವುದರ ಜೊತೆಗೆ ಬುಧನ ದೋಷಗಳೂ ದೂರವಾಗುತ್ತವೆ. ಇದರ ಸಂಪೂರ್ಣ ಮಾಹಿತಿ ಈ ಯೂಟ್ಯೂಬ್ ವಿಡಿಯೋದಲ್ಲಿದೆ.
ಗಣೇಶನಿಗೆ ದುರ್ವಾ ನೈವೇದ್ಯ ಮಾಡುವುದರಿಂದ ಆಗುವ ಪ್ರಯೋಜನವೇನು.?
ಗಣೇಶನಿಗೆ ದುರ್ವಾ ಬಹಳ ಪ್ರಿಯವಾಗಿದೆ. ಇನ್ನು ಈ ಚತುರ್ಥಿಯಂದು ದುರ್ವಾವನ್ನು ಅರ್ಪಿಸಿ ಪೂಜಿಸುವಾಗ ‘ಶ್ರೀ ಗಣೇಶಾಯ ನಮಃ ದುರ್ವಾಂಕುರಾನ್ ಸಮರ್ಪಯಾಮಿ’ ಎಂಬ ಮಂತ್ರ ಪಠಸಿ ದುರ್ವಾ ಸಮರ್ಪಣೆ ಮಾಡಬೇಕು.
ಹೀಗೆ ಮಾಡುವುರಿಂದ ಜೀವನದಲ್ಲಿನ ಎಲ್ಲಾ ಅಡೆತಡೆಗಳು ನಿವಾರಣೆಯಾಗಿ ಗಣಪತಿಯು ಪ್ರಸನ್ನನಾಗುತ್ತಾನೆ. ದುರ್ವಾವನ್ನು ಅರ್ಪಿಸಿ ಪೂಜಿಸಿದರೆ ಕುಟುಂಬದಲ್ಲಿ ಸಮೃದ್ಧಿ ಹೆಚ್ಚುತ್ತದೆ ಮತ್ತು ಇಷ್ಟಾರ್ಥಗಳೂ ಈಡೇರುತ್ತವೆ. ಈ ಬಗ್ಗೆ ಸ್ಕಂದ, ಶಿವ ಮತ್ತು ಗಣೇಶ ಪುರಾಣಗಳಲ್ಲಿ ಉಲ್ಲೇಖವಿದೆ.
ಸಂಕಷ್ಟ ಚತುರ್ಥಿ ಮತ್ತು ವಿನಾಯಕ ಚತುರ್ಥಿಯ ನಡುವಿನ ವ್ಯತ್ಯಾಸ ಏನು ಗೊತ್ತಾ?
ಅಮಾವಾಸ್ಯೆಯ ನಂತರ ಬರುವ ಶುಕ್ಲ ಪಕ್ಷದ ಚತುರ್ಥಿಯನ್ನು ವಿನಾಯಕ ಚತುರ್ಥಿ ಎಂದು ಕರೆಯಲಾಗುತ್ತದೆ. ಈ ದಿನ ಗಣಪತಿಯನ್ನು ವಿಧಿ – ವಿಧಾನಗಳ ಪ್ರಕಾರ ಪೂಜಿಸುತ್ತಾರೆ. ಕೃಷ್ಣ ಪಕ್ಷದಲ್ಲಿ ಹುಣ್ಣಿಮೆಯ ನಂತರ ಬರುವ ಚತುರ್ಥಿಯನ್ನು ಸಂಕಷ್ಟ ಚತುರ್ಥಿ ಎಂದು ಕರೆಯಲಾಗುತ್ತದೆ.
ಈ ದಿನ ಸಂಪೂರ್ಣ ಉಪವಾಸವಿದ್ದು ಗಣೇಶನನ್ನು ಪೂಜಿಸುತ್ತಾರೆ. ಸಂಕಷ್ಟ ಚತುರ್ಥಿಯು ಮಾಸಕ್ಕೆ 2 ಸಲ ಬರುತ್ತದೆ. ಒಂದು ಚತುರ್ಥಿಯು ಹುಣ್ಣಿಮೆಯ ನಂತರ ಬಂದರೆ, ಇನ್ನೊಂದು ಚತುರ್ಥಿಯು ಅಮಾವಾಸ್ಯೆಯ ನಂತರ ಬರುತ್ತದೆ.
https://vijayaprabha.com/home-remedies-to-get-rid-of-bad-breath/