Dr.Bro monthly income: ಯುಟ್ಯೂಬ್‌ನಲ್ಲಿ ಡಾ.ಬ್ರೋ ತಿಂಗಳ ಆದಾಯವೆಷ್ಟು? ಅವರೇ ಬಿಚ್ಚಿಟ್ಟ ಮಾಹಿತಿ ಇಲ್ಲಿದೆ

Dr.Bro monthly income: ಕನ್ನಡದ ಖ್ಯಾತ ಯುಟ್ಯೂಬರ್ ಡಾ. ಬ್ರೋ (Dr.Bro) ಚಾನಲ್‌ನ ಗಗನ್ ಶ್ರೀನಿವಾಸ್ (Gagan Srinivas) ತಮ್ಮ ಯುಟ್ಯೂಬ್ ಆದಾಯವನ್ನು (Youtube Income) ರಿವಿಲ್ ಮಾಡಿದ್ದು, ನನಗೆ ತಿಂಗಳಿಗೆ 2 ಸಾವಿರದ…

Dr.Bro monthly income from youtube

Dr.Bro monthly income: ಕನ್ನಡದ ಖ್ಯಾತ ಯುಟ್ಯೂಬರ್ ಡಾ. ಬ್ರೋ (Dr.Bro) ಚಾನಲ್‌ನ ಗಗನ್ ಶ್ರೀನಿವಾಸ್ (Gagan Srinivas) ತಮ್ಮ ಯುಟ್ಯೂಬ್ ಆದಾಯವನ್ನು (Youtube Income) ರಿವಿಲ್ ಮಾಡಿದ್ದು, ನನಗೆ ತಿಂಗಳಿಗೆ 2 ಸಾವಿರದ 100 ಡಾಲರ್ ಬರುತ್ತದೆ ಎಂದು ಹೇಳಿದ್ದಾರೆ.

ಕನ್ನಡದ ಖ್ಯಾತ ಯುಟ್ಯೂಬರ್ ಆಗಿರುವ ಡಾ. ಬ್ರೋ ಚಾನಲ್‌ನ ಗಗನ್ ಶ್ರೀನಿವಾಸ್, ‌ದೇಶ – ವಿದೇಶ ಸುತ್ತುತ್ತಾ ವಿಡಿಯೋ ಮಾಡುತ್ತಾ ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡುತ್ತಾರೆ. ಇವರ ಒಂದೊಂದು ವಿಡಿಯೋ ಯೂಟ್ಯೂಬ್ ನಲ್ಲಿ ಲಕ್ಷಗಟ್ಟಲೇ ವಿವ್ಸ್ ಪಡೆದಿದ್ದು, ತಿಂಗಳಿಗೆ 10 ಲಕ್ಷಕ್ಕೂ ಅಧಿಕ ಹಣ ಗಳಿಸುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು.

ಆದರೆ ಇದೀಗ ಡಾ.ಬ್ರೋ ತಮ್ಮ ಯೂಟ್ಯೂಬ್ ಲೈವ್ ನಲ್ಲಿ ತನ್ನ ಯೂಟ್ಯೂಬ್‌ ಸ್ಟುಡಿಯೋ ತೋರಿಸಿ ತಮ್ಮ ಯೂಟ್ಯೂಬ್‌ ಆದಾಯವನ್ನು (YouTube Income) ರಿವೀಲ್‌ ಮಾಡಿದ್ದು, ಯೂಟ್ಯೂಬ್‌ನಿಂದ ತಿಂಗಳಿಗೆ ಎಷ್ಟು ಆದಾಯ ಗಳಿಸುತ್ತಾರೆ ಎಂಬುವುದರ ಕುರಿತು ಮಾಹಿತಿ ನೀಡಿದ್ದಾರೆ.

Vijayaprabha Mobile App free

Dr.Bro monthly income: ಡಾ.ಬ್ರೋ ತಿಂಗಳ ಆದಾಯವೆಷ್ಟು?

Dr.Bro monthly income
Dr.Bro monthly income from YouTube

ಹೌದು, ಈ ಬಗ್ಗೆ ಮಾಹಿತಿ ನೀಡಿರುವ ‘ಡಾ.ಬ್ರೋ’ ಯೂಟ್ಯೂಬ್‌ ಚಾನಲ್‌ನ ಗಗನ್ ಶ್ರೀನಿವಾಸ್, “ನಾನು 2018ರಲ್ಲಿ ಯೂಟ್ಯೂಬ್ ಜರ್ನಿ ಆರಂಭಿಸಿದ್ದು, ನನ್ನ ಒಂದು ತಿಂಗಳ 2 ಸಾವಿರದ 100 ಡಾಲರ್. ಅಂದರೆ 1 ಲಕ್ಷದ 76 ಸಾವಿರ ರೂಪಾಯಿ ಆಗಿದ್ದು, ಇಷ್ಟು ಹಣ ಬಂದರೆ ಒಂದು ದೇಶಕ್ಕೆ ಹೋದರೆ ನನಗೆ ಖರ್ಚು ಎಷ್ಟು ಬೀಳುತ್ತದೆ. ಇನ್ನು, ಹೋಗಿ ಬರಲು ವಿಮಾನದ ಟಿಕೆಟ್‌ ಬೆಲೆ, ಅಲ್ಲಿ ಉಳಿದುಕೊಳ್ಳಲು ಖರ್ಚು, ಎಡಿಟಿಂಗ್‌ ಕಾಸ್ಟ್‌, ಗೆಜೆಟ್ ಇಎಂಐ ಖರ್ಚು ಎಲ್ಲ ಸೇರಿ 10 -20 ಸಾವಿರ ನನ್ನ ಕೈಗೆ ಬರಬಹುದು ಎಂದು ಹೇಳಿಕೊಂಡಿದ್ದು, ಜಾಹೀರಾತಿನಿಂದಲೂ ಆದಾಯ ಬರುತ್ತದೆ” ಎಂದು ಹೇಳಿದ್ದಾರೆ.

ಇನ್ನು, ಇತ್ತೀಚಿಗೆ ಡಾ. ಬ್ರೋ ಅವರು “ಗೋಪ್ರವಾಸ” ಎನ್ನುವ ಸಂಸ್ಥೆಯೊಂದಿಗೆ ಅಸೋಸಿಯೇಟ್ ಆಗಿದ್ದು ಅಲ್ಲಿಯೂ ಹಣ ಗಳಿಸಲಿದ್ದಾರೆ. ಬಿಗ್‌ಬಾಸ್ ಸ್ಪರ್ಧೆ ಬಗ್ಗೆ ಉತ್ತರಿಸಿದ ಅವರು, “3 ತಿಂಗಳಲ್ಲಿ ಒಂದು ಮನೆಯಲ್ಲಿರುವ ಬದಲಿಗೆ 5 ದೇಶ ಸುತ್ತಬಹುದು” ಎಂದಿದ್ದಾರೆ.

https://vijayaprabha.com/implementation-of-operation-amrit-yojana-in-the-state/

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.