ಅಮೆರಿಕಕ್ಕೆ ಟ್ರಂಪ್ ಅಧ್ಯಕ್ಷ: ಚುನಾವಣೆಯಲ್ಲಿ ಭಾರಿ ಗೆಲುವು 

ವಾಷಿಂಗ್ಟನ್‌ (ಅಮೆರಿಕ): ಇಡೀ ವಿಶ್ವವೇ ಕುತೂಹಲದಿಂದ ಗಮನಿಸುತ್ತಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಭರ್ಜರಿ ಗೆಲುವು ಸಾಧಿಸಿದ್ದಾರೆ. ಮಂಗಳವಾರ ಅಂತಿಮ ಹಂತದ ಮತದಾನ ಪ್ರಕ್ರಿಯೆ (ಭಾರತೀಯ ಕಾಲಮಾನ ಸಂಜೆ 4.30ಕ್ಕೆ)…

ವಾಷಿಂಗ್ಟನ್‌ (ಅಮೆರಿಕ): ಇಡೀ ವಿಶ್ವವೇ ಕುತೂಹಲದಿಂದ ಗಮನಿಸುತ್ತಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಮಂಗಳವಾರ ಅಂತಿಮ ಹಂತದ ಮತದಾನ ಪ್ರಕ್ರಿಯೆ (ಭಾರತೀಯ ಕಾಲಮಾನ ಸಂಜೆ 4.30ಕ್ಕೆ) ಮುಗಿದಿದ್ದು, ರಿಪಬ್ಲಿಕನ್‌ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಹಾಗೂ ಡೆಮಾಕ್ರೆಟಿಕ್‌ ಅಭ್ಯರ್ಥಿ ಕಮಲಾ ಹ್ಯಾರಿಸ್ ನಡುವೆ ತುರುಸಿನ ಸ್ಪರ್ಧೆ ರೋಚಕ ಫಲಿತಾಂಶ ಹೊರಬಿದ್ದಿದೆ. ಫಲಿತಾಂಶದಲ್ಲಿ ಭಾರತದ ಪರ ಒಲವು ಹೊಂದಿರುವ ಟ್ರಂಪ್ ಜಯಗಳಿಸಿದ್ದಾರೆ.

ಸುಮಾರು 24 ಕೋಟಿ ಮತದಾರರು ಮತದಾನದ ಹಕ್ಕು ಪಡೆದಿದ್ದು, ಇ-ಮೇಲ್‌ ಮೂಲಕ ಮತದಾನಕ್ಕೆ ಮೊದಲೇ ಅವಕಾಶ ಇದ್ದ ಕಾರಣ ಈಗಾಗಲೇ ಸುಮಾರು 9 ಕೋಟಿಗೂ ಅಧಿಕ ಮಂದಿ ಹಕ್ಕು ಚಲಾವಣೆ ಮಾಡಿದ್ದಾರೆ. ಅಲ್ಲದೆ, ಅಮೆರಿಕದಲ್ಲಿ ಇವಿಎಂ ಇಲ್ಲ. ಮತಪತ್ರಗಳ ಮೂಲಕ ಮತದಾನ ನಡೆಯುವತ್ತದೆ. ಅಮೆರಿಕದಲ್ಲಿ ನೇರವಾಗಿ ಜನ ಅಧ್ಯಕ್ಷರನ್ನು ಆಯ್ಕೆ ಮಾಡಲ್ಲ. ಬದಲಾಗಿ ಟ್ರಂಪ್‌ ಅಥವಾ ಕಮಲಾ ಬೆಂಬಲಿಗರಾದ 538 ಎಲೆಕ್ಟೋರಲ್‌ ಕಾಲೇಜ್‌ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ. ಇವರು ಅಧ್ಯಕ್ಷರನ್ನು ಅಧಿಕೃತವಾಗಿ ಆಯ್ಕೆ ಮಾಡಲಿದ್ದು, ಮುಂದಿನ ತಿಂಗಳು ಅಧಿಕೃತ ಘೋಷಣೆ ಆಗಲಿದೆ. 270 ಪ್ರತಿನಿಧಿಗಳ ಬೆಂಬಲ ಪಡೆದವರು ಅಧ್ಯಕ್ಷರಾಗಲಿದ್ದಾರೆ ಹಾಗೂ ಜನವರಿಯಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.