ಇವರೇ RCBಯ ಹೊಸ ಕೋಚ್‌, ಮೆಂಟರ್‌; T20ಯ ಸ್ಟಾರ್ ಆಟಗಾರ ಈತ!

Dinesh Karthik: ಇತ್ತೀಚೆಗಷ್ಟೇ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿರುವ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ದಿನೇಶ್‌ ಕಾರ್ತಿಕ್‌ ಇದೀಗ ಕೋಚಿಂಗ್‌ ಕಡೆಗೆ ಹೆಜ್ಜೆಯಿಟ್ಟಿದ್ದಾರೆ. ತಮ್ಮ ನೆಚ್ಚಿನ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ…

Dinesh Karthik vijayaprabha news

Dinesh Karthik: ಇತ್ತೀಚೆಗಷ್ಟೇ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿರುವ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ದಿನೇಶ್‌ ಕಾರ್ತಿಕ್‌ ಇದೀಗ ಕೋಚಿಂಗ್‌ ಕಡೆಗೆ ಹೆಜ್ಜೆಯಿಟ್ಟಿದ್ದಾರೆ. ತಮ್ಮ ನೆಚ್ಚಿನ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ಕೋಚ್‌ ಮತ್ತು ಮೆಂಟರ್‌ ಆಗಿ ನೇಮಕಗೊಂಡಿದ್ದಾರೆ.

ಹೌದು, ಆರ್‌ಸಿಬಿ ತನ್ನ ಟ್ವಿಟರ್‌ ಖಾತೆ ಮೂಲಕ ಈ ಸಿಹಿ ಸುದ್ದಿ ಹಂಚಿಕೊಂಡಿದ್ದು, ದಿನೇಶ್‌ ಕಾರ್ತಿಕ್‌ ಆರ್‌ಸಿಬಿ ತಂಡದ ಕೋಚ್‌ ಮತ್ತು ಮೆಂಟರ್‌ ಆಗಿ ನೇಮಕಗೊಂಡಿದ್ದಾರೆ. 2024ರ ಐಪಿಎಲ್‌ನ ಕ್ವಾಲಿಫೈಯರ್‌ -2ರಲ್ಲಿ SRH ವಿರುದ್ಧ ಭಾರತ ಸೋತ ನಂತರ DK ನಿವೃತ್ತಿ ಘೋಷಿಸಿದ್ದರು.

T20ಯ ಸ್ಟಾರ್ ಆಟಗಾರ ಡಿಕೆ

ಆರ್‌ಸಿಬಿ ಪುರುಷರ ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಕವಾಗಿರುವ ದಿನೇಶ್ ಕಾರ್ತಿಕ್, RCBಯ ಸ್ಟಾರ್ ಆಟಗಾರ ಆಗಿದ್ದರು ಎಂಬುದು ಫ್ಯಾನ್ಸ್‌ಗಳಿಗೆ ಖುಷಿಯ ಸಂಗತಿ.

Vijayaprabha Mobile App free

IPLನಲ್ಲಿ ಅವರು 257 ಪಂದ್ಯ ಆಡಿದ್ದಾರೆ. 26 ಟೆಸ್ಟ್‌ ಪಂದ್ಯಗಳಲ್ಲಿ 1025 ರನ್, 94 ಅಂತಾರಾಷ್ಟ್ರೀಯ ಏಕದಿನದಲ್ಲಿ 1752 ರನ್‌ ಗಳಿಸಿದ್ದಾರೆ. 60 ಅಂತಾರಾಷ್ಟ್ರೀಯ T20 ಆಡಿದ್ದು 686 ರನ್ ಹೊಡೆದಿದ್ದಾರೆ. 401 ಡೊಮೆಸ್ಟಿಕ್ T20 ಆಡಿರುವ ಡಿಕೆ 7407 ಗಳಿಸಿರುವುದು ವಿಶೇಷ. ಚುಟುಕು ಫಾರ್ಮೆಟ್‌ನಲ್ಲಿ ಅವರು ಮಿಂಚಿದ್ದಾರೆ.

ಇದನ್ನು ಓದಿ: ಬಿಜೆಪಿ ನಾಯಕರ ವಿರುದ್ಧ ಸದಾನಂದಗೌಡ ಸಿಡಿಮಿಡಿ; ನಾನು ಮತ್ತೊಬ್ಬ ‘ಜಗದೀಶ್ ಶೆಟ್ಟರ್’ ಆಗಲು ಇಷ್ಟ ಇಲ್ಲ

ವಾಟ್ಸಾಪ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ಇಲ್ಲಿ ಕ್ಲಿಕ್ಮಾಡಿ
ಶೇರ್ ಚಾಟ್ಇಲ್ಲಿಕ್ಲಿಕ್ಮಾಡಿ
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.