ಡೆಂಗ್ಯೂ ಜ್ವರಕ್ಕೆ ಯಾವುದೇ ರೀತಿಯ ಲಸಿಕೆ ಅಥವಾ ಔಷಧಿ ಇಲ್ಲ ಎನ್ನುವುದು ತಿಳಿದೇ ಇದೆ. ಹಾಗಾದರೆ ಇದನ್ನು ಗುಣಪಡಿಸುವುದು ಹೇಗೆ ಎನ್ನುವ ಪ್ರಶ್ನೆಯು ಮೂಡು ವುದು. ದೇಹದ ತಾಪಮಾನ ಕಡಿಮೆ ಮಾಡಿಕೊಂಡು, ಪ್ಲೇಟ್ಲೆಟ್ ಹೆಚ್ಚು ಮಾಡುವಂತಹ ಔಷಧಿ ಸೇವನೆ ಮಾಡಿದರೆ ಉತ್ತಮ!
ಡೆಂಗ್ಯೂ ಜ್ವರದ ವೇಳೆ ಪ್ಲೇಟ್ಲೆಟ್ ಕಡಿಮೆ ಆಗುವುದು ದೊಡ್ಡ ಸಮಸ್ಯೆ. ಹೀಗಾಗಿ ಇದನ್ನು ನಿರ್ವಹಿಸಲು ಪ್ಲೇಟ್ಲೆಟ್ ಏರಿಕೆ ಮಾಡುವ ದ್ರವಾಹಾರಗಳಾಗಿರುವ ಎಳನೀರು, ದಾಳಿಂಬೆ ಮತ್ತು ಕ್ರ್ಯಾನ್ಬೆರಿ ಜ್ಯೂಸ್ ಸೇವಿಸಬೇಕು. ಈ ದ್ರವಾಹಾರಗಳನ್ನು ಸೇವನೆ ಮಾಡುವ ಮೂಲಕ ನಿಶ್ಯಕ್ತಿ ಕಡಿಮೆ ಮಾಡಬಹುದು ಮತ್ತು ಜ್ವರ ತಗ್ಗಿಸುವುದು. ಡೆಂಗ್ಯೂ ಜ್ವರಕ್ಕೆ ಪಪ್ಪಾಯಿ ಎಲೆ ಮತ್ತು ಗಿಲೋಯ್ ಎಲೆಯ ರಸವು ತುಂಬಾ ಪರಿಣಾಮಕಾರಿ ಮನೆಮದ್ದು ಎಂದು ಹೇಳಲಾಗುತ್ತದೆ. ಹಸಿವು ಕಡಿಮೆಯಾಗಿರುವ ಕಾರಣದಿಂದಾಗಿ ಸುಲಭವಾಗಿ ಜೀರ್ಣವಾಗುವಂತಹ, ಪೋಷಕಾಂಶಗಳು ಇರುವ ಆಹಾರ ಸೇವನೆ ಮಾಡಿದರೆ ಒಳ್ಳೆಯದು. ತುಳಸಿ, ಕೊತ್ತಂಬರಿ, ಬೆಳ್ಳುಳ್ಳಿ, ಶುಂಠಿ, ಲಿಂಬೆ ಮತ್ತು ಅಮ್ಜೂರ್ ನ್ನು ಸೇವಿಸಿದರೆ ತುಂಬಾ ಒಳ್ಳೆಯದು. ಡೆಂಗ್ಯೂ ಇದ್ದರೆ ಆಗ ಯಾವ ಆಹಾರಗಳನ್ನು ಸೇವಿಸಬಹುದು ಎಂದು ತಿಳಿಯುವುದು ಅಗತ್ಯ ಪಪ್ಪಾಯಿ ಎಲೆಗಳಲ್ಲಿ ಅಸಿಟೋಜೆನಿನ್ ಎನ್ನುವ ರಾಸಾಯನಿ ಕವಿದ್ದು, ಇದು ಡೆಂಗ್ಯೂ ಇರುವ ಜನರಲ್ಲಿ ಪ್ಲೇಟ್ಲೆಟ್ ನ್ನು ತುಂಬಾ ವೇಗವಾಗಿ ಹೆಚ್ಚಿಸುವುದು ಮತ್ತು ಬೇಗನೆ ಗುಣಮುಖ ರಾಗಲು ಸಹಕಾರಿ. ಪಪ್ಪಾಯಿ ಎಲೆಗಳಲ್ಲಿ ಹಲವಾರು ನೈಸರ್ಗಿಕ ಸಸ್ಯಜನ್ಯ ಅಂಶಗ ಳಾಗಿರುವ ಫ್ಲಾವನಾಯ್ಡ್ ಮತ್ತು ಕ್ಯಾರೋಟಿನ್ ಗಳಿದ್ದು, ಇದು ಉರಿಯೂತ ಶಮನಕಾರಿ ಮತ್ತು ಆ್ಯಂಟಿಆಕ್ಸಿಡೆಂಟ್ ಆಗಿದೆ. ೪-೫ರಷ್ಟು ಪಪ್ಪಾಯಿ ಎಲೆಗಳನ್ನು ನೀರಿನಲ್ಲಿ ಕುದಿಸಿ, ಅದರ ಕಷಾಯ ಮಾಡಿಕೊಂಡು ಬೆಳಗ್ಗೆ ಮತ್ತು ಸಂಜೆ ವೇಳೆ ಒಂದು ಕಪ್ ನಂತೆ ಕುಡಿಯಬಹುದು.
ಗೋಧಿಹುಲ್ಲು ನೈಸರ್ಗಿಕ ರೀತಿಯಿಂದ ಪ್ಲೇಟ್ಲೆಟ್ ಗಣತಿಯನ್ನು ಹೆಚ್ಚು ಮಾಡುವುದು ಎಂದು ಅಂತಾರಾಷ್ಟ್ರೀಯ ಮಟ್ಟದ ಅಧ್ಯಯನಗಳು ಹೇಳಿವೆ. ಒಂದು ಕಪ್ ಗೋಧಿಹುಲ್ಲಿನ ರಸಕ್ಕೆ ಸ್ವಲ್ಪ ಲಿಂಬೆ ಹಚ್ಚಿಕೊಂಡು ಸೇವನೆ ಮಾಡಿದರೆ ಆಗ ಖಂಡಿತವಾಗಿಯೂ ಇದರಿಂದ ಲಾಭ ಸಿಗಲಿದೆ ಒಣದ್ರಾಕ್ಷಿಯಲ್ಲಿ ಅತ್ಯಧಿಕ ಮಟ್ಟದ ಕಬ್ಬಿಣಾಂಶವಿದೆ ಮತ್ತು ಇದು ಡೆಂಗ್ಯೂ ರೋಗಿಗಳಲ್ಲಿ ಪ್ಲೇಟ್ಲೆಟ್ ಹೆಚ್ಚು ಮಾಡಲು ಸಹಕಾರಿ ಆಗಿದೆ. ರಾತ್ರಿ ವೇಳೆ ಒಂದು ಹಿಡಿ ದ್ರಾಕ್ಷಿಯನ್ನು ನೀರಿನಲ್ಲಿ ನೆನೆಯಲು ಹಾಕಿ ಮತ್ತು ಇದನ್ನು ಬೆಳಗ್ಗೆ ಎದ್ದು ತಿನ್ನಿ ಹಾಗೂ ನೀರನ್ನು ಕುಡಿಯಿರಿ. ಇದು ಹಿಮೋಗ್ಲೋಬಿನ್ ಕಡಿಮೆ ಇರುವವರಿಗೆ ತುಂಬಾ ಒಳ್ಳೆಯದು. ಇದು ರಕ್ತಹೀನತೆ ಸಮಸ್ಯೆಯನ್ನು ನಿವಾರಿಸುವುದು.
ಡೆಂಗ್ಯೂ ಇರುವವರು ಕಿವಿ ಹಣ್ಣು ಸೇವನೆ ಮಾಡಿದರೆ, ಆಗ ಚೇತರಿಕೆಗೆ ತುಂಬಾ ಸಹಕಾರಿ ಆಗಿರುವುದು. ಇದರಲ್ಲಿ ವಿಟಮಿನ್ ಸಿ ಮತ್ತು ಪೊಟ್ಯಾಶಿಯಮ್ ಅಂಶವು ಸಮೃದ್ಧವಾಗಿದೆ ಒಂದು ಚಮಚ ಮೆಂತ್ಯೆಕಾಳನ್ನು ರಾತ್ರಿ ವೇಳೆ ಒಂದು ಲೋಟ ನೀರಿನಲ್ಲಿ ನೆನೆಯಲು ಹಾಕಿ. ಮರುದಿನ ಬೆಳಗ್ಗೆ ನೀರನ್ನು ಸೋಸಿಕೊಳ್ಳಿ ಮತ್ತು ಸ್ವಲ್ಪ ಬಿಸಿ ಮಾಡಿ ಕುಡಿಯಿರಿ. ದಿನದಲ್ಲಿ ೩-೪ ಗಂಟೆಗಳ ಕಾಲ ಮೆಂತ್ಯೆಕಾಳನ್ನು ನೆನೆಸಿಟ್ಟು ಅದನ್ನು ಬಳಸಿಕೊಂಡರೂ ಲಾಭ ಪಡೆಯಬಹುದು.