ಬೆಂಗಳೂರು: ಬೆಂಗಳೂರು ಮೂಲದ ಫ್ಯಾಷನ್ ಬ್ರ್ಯಾಂಡ್ ‘ದಿ ಇಂಡಿಯನ್ ಗ್ಯಾರೇಜ್ ಕೋ.’ (ಟಿಐಜಿಸಿ)ನ ಎಕ್ಸ್‌ಕ್ಲ್ಯೂಸಿವ್ ಬ್ರ್ಯಾಂಡ್ ಔಟ್ಲೆಟ್ ಬೆಂಗಳೂರಿನಲ್ಲಿ ತೆರೆದುಕೊಂಡಿದೆ. ಬ್ರಾಂಡ್ ಅಂಬಾಸಿಡರ್ ಆಗಿರುವ ಟೀಮ್ ಇಂಡಿಯಾ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಭಾನುವಾರ ಮಳಿಗೆಗೆ ಚಾಲನೆ ನೀಡಿದರು. ಕ್ಯಾಪ್ಟನ್‌ನ ನೋಡಲು ಇಂಡಿಯನ್ ಗ್ಯಾರೇಜ್ ಔಟ್ಲೆಟ್ ಎದುರು ಜನಸ್ತೋಮವೇ ನೆರೆದಿತ್ತು.
‘ದಿ ಇಂಡಿಯನ್ ಗ್ಯಾರೇಜ್ ಕೋ.’ ಡೈರೆಕ್ಟ್ ಟು ಕನ್ಸುಮರ್ ವೆಬ್ಸೈಟ್ ಹೊಂದಿದ್ದು, ಜೊತೆಗೆ ಪ್ರಮುಖ ಇ- ಕಾಮರ್ಸ್ ಫ್ಲಾಟ್‌ಫಾರ್ಮ್‌ಗಳಾದ ಅಮೇಜಾನ್, ಫ್ಲಿಪ್‌ಕಾರ್ಟ್, ಮಿಂತ್ರಾ, ಮೀಶೋ, ಅಜಿಯೋಗಳಲ್ಲೂ ತನ್ನ ಪ್ರಾಡಕ್ಟ್‌ಗಳನ್ನ ಮಾರಾಟ ಮಾಡುತ್ತಿದೆ. ಭಾರತದಾದ್ಯಂತ ಸುಮಾರು 100 ಫ್ಯಾಶನ್ ಫ್ಯಾಕ್ಟರಿ ಮಳಿಗೆಗಳಲ್ಲೂ ಬ್ರ್ಯಾಂಡ್
ಅಸ್ತಿತ್ವವನ್ನು ಹೊಂದಿದೆ.
ತನ್ನ ಬ್ರ್ಯಾಂಡ್‌ಗಳ ವಿಸ್ತರಣೆಯ ಭಾಗವಾಗಿ ಮೊಟ್ಟ ಮೊದಲ ಆಫ್‌ಲೈನ್ ಮಳಿಗೆಯನ್ನ ಬೆಂಗಳೂರಿನ ಬ್ರಿಗೇಡ್ ರೋಡ್‌ನಲ್ಲಿ ಕಂಪನಿಯು ಆರಂಭಿಸಿದ್ದು, ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ಅನಂತ್ ಟ್ಯಾಂಟೆಡ್ ಅವರೊಂದಿಗೆ ಟಿಐಜಿಸಿಯ ಬ್ರಾಂಡ್ ಅಂಬಾಸಿಡರ್ ಆಗಿರುವ ಸೂರ್ಯಕುಮಾರ್ ಯಾದವ್ ರಿಬ್ಬನ್ ಕತ್ತರಿಸಿ ಮಳಿಗೆ ಶುಭಾರಂಭಗೊಳಿಸಿದರು.
ಸೂರ್ಯಕುಮಾರ್ ಯಾದವ್ ಅವರು ಮಳಿಗೆ ಶುಭಾರಂಭಕ್ಕೆ ಆಗಮಿಸುವ ಸುದ್ದಿ ತಿಳಿದು ಸಾವಿರಾರು ಜನ ಬ್ರಿಗೇಡ್ ರೋಡಿನ ಎರಡೂ ಬದಿಯಲ್ಲಿ ನೆರೆದಿದ್ದರು. ಕ್ಯಾಪ್ಟನ್ ಬರುತ್ತಿದ್ದಂತೆ ಆರ್‌ಸಿಬಿ… ಆರ್‌ಸಿಬಿ ಘೋಷಣೆ ಮೊಳಗಿತ್ತು. ಮಳಿಗೆ ಉದ್ಘಾಟನೆಗೂ ಮುನ್ನ ಸೂರ್ಯಕುಮಾರ್ ಯಾದವ್ ನೆರೆದ ಸಾವಿರಾರು ಫ್ಯಾನ್ಸ್ ಎದುರು ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು, ಲವ್ ಯು ಬೆಂಗಳೂರು ಎಂದು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ.
ಇನ್ನು ಟಿಐಜಿಸಿಯು ಜನಪ್ರಿಯ ಬ್ರಾಂಡ್ ಆಗಿ ಹೊರಹೊಮ್ಮುತ್ತಿದ್ದು, ಓವರ್ ಸೈಜ್ಡ್ ಟೀ ಶರ್ಟ್‌ಗಳು, ಕ್ಯಾಶುಯಲ್ ಶರ್ಟ್‌ಗಳು, ಸ್ವೆಟರ್‌ಗಳು, ಶಾರ್ಟ್ಸ್, ಹೂಡೀಸ್, ಜಾಕೆಟ್‌ಗಳು, ಚೈನೋಸ್, ಡೆನಿಮ್ ಮತ್ತು ಸ್ವೆಟ್‌ಶರ್ಟ್‌ಗಳು ಸೇರಿದಂತೆ ವೈವಿಧ್ಯಮಯ ಪುರುಷರ ಹಾಗೂ ಮಹಿಳೆಯರ ಫ್ಯಾಷನ್ ಉಡುಪುಗಳ ವಿಶಾಲ ಶ್ರೇಣಿಯನ್ನ ಈ ಮಳಿಗೆ ಹೊಂದಿದೆ. ಇದೇ ವರ್ಷದಲ್ಲಿ ಉದ್ಯಮವನ್ನ ಇನ್ನಷ್ಟು ವಿಸ್ತರಿಸುವ ಯೋಜನೆಯನ್ನ ಕಂಪನಿ ಹೊಂದಿದ್ದು, ಅದರ ಭಾಗವಾಗಿ ಆಫ್‌ಲೈನ್ ಮಳಿಗೆಗಳನ್ನ ತೆರೆಯುತ್ತಿದೆ.