ತೆಂಗಿನ ಎಣ್ಣೆಯಿಂದ ಮುಖದ ಸೌಂದರ್ಯ ಹೆಚ್ಚಿಕೊಳ್ಳುವುದು ಹೇಗೆ?

ತೆಂಗಿನ ಎಣ್ಣೆಯು ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಹಾಗೆಯೇ ತೆಂಗಿನ ಎಣ್ಣೆ ಸೌಂದರ್ಯಕ್ಕೂ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ. ನಿಮ್ಮ ಮುಖವನ್ನು ತೆಂಗಿನೆಣ್ಣೆಯಿಂದ ಮಸಾಜ್ ಮಾಡುವುದರಿಂದ ನಿಮ್ಮ ಚರ್ಮವನ್ನು ತೇವಗೊಳಿಸುವುದರ ಜೊತೆಗೆ ವಿವಿಧ ಚರ್ಮದ ಪ್ರಯೋಜನಗಳನ್ನು…

ತೆಂಗಿನ ಎಣ್ಣೆಯು ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಹಾಗೆಯೇ ತೆಂಗಿನ ಎಣ್ಣೆ ಸೌಂದರ್ಯಕ್ಕೂ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ. ನಿಮ್ಮ ಮುಖವನ್ನು ತೆಂಗಿನೆಣ್ಣೆಯಿಂದ ಮಸಾಜ್ ಮಾಡುವುದರಿಂದ ನಿಮ್ಮ ಚರ್ಮವನ್ನು ತೇವಗೊಳಿಸುವುದರ ಜೊತೆಗೆ ವಿವಿಧ ಚರ್ಮದ ಪ್ರಯೋಜನಗಳನ್ನು ಪಡೆಯಬಹುದು. ಹಾಗಾದ್ರೆ ತೆಂಗಿನ ಎಣ್ಣೆಯಿಂದ ಮುಖದ ಸೌಂದರ್ಯ ಹೆಚ್ಚಿಕೊಳ್ಳುವುದು ಹೇಗೆ?, ಕೊಬ್ಬರಿ ಎಣ್ಣೆಗೆ ಯಾವ ವಸ್ತು ಬೆರೆಸಿದರೆ ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಕೊಬ್ಬರಿ ಎಣ್ಣೆ ಮತ್ತು ನಿಂಬೆ ಒಂದು ಬೌಲ್‌ನಲ್ಲಿ 4 ಚಮಚ ಕೊಬ್ಬರಿ ಎಣ್ಣೆ ತೆಗೆದುಕೊಳ್ಳಿ. ಬಳಿಕ ಇದಕ್ಕೆ 1 ಚಮಚ ದಾಬಾಮಿ ಎಣ್ಣೆ ಸಹ ಸೇರಿಸಿಕೊಳ್ಳಿ. ಇದಕ್ಕೆ ನಿಂಬೆ ಹಣ್ಣಿನ ಸಿಪ್ಪೆಯನ್ನು ತುರಿದುಕೊಂಡು ಸೇರಿಸಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಇಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ನೀರು ಹಾಕಿ ನೀರು ಕುದಿಯಲು ಬಿಡಿ. ನೀರು ಕುದಿಯಲು ಆರಂಭಿಸಿದಾಗ ಪಾತ್ರೆಯ ಮಧ್ಯದಲ್ಲಿ ಈ ಬೌಲ್ ಇಟ್ಟು ಕುದಿಸಬೇಕು. 10 ನಿಮಿಷ ಕುದಿಸಿಕೊಂಡ ಬಳಿಕ ಒಲೆ ಆಫ್ ಮಾಡಿ ತಣ್ಣಗಾಗಲು ಬಿಡಿ. ನಂತರ ಒಂದು ಗಾಜಿನ ಡಬ್ಬಿಯಲ್ಲಿ ಇದನ್ನು ಹಾಕಿ ಮುಚ್ಚಳವನ್ನು ಗಟ್ಟಿಯಾಗಿ ಇಡಬೇಕು. ಇದನ್ನು ರಾತ್ರಿ ಮಲಗುವ ಮುನ್ನ ಮುಖಕ್ಕೆ ಚೆನ್ನಾಗಿ ಹಚ್ಚಿಕೊಂಡು ಸ್ವಲ್ಪ ಹೊತ್ತು ಮಸಾಜ್ ಮಾಡಿ ಬೆಳಗ್ಗೆ ಎದ್ದು ತೊಳೆದುಕೊಳ್ಳಿ. ಕೆಲವು ದಿನ ಇದನ್ನು ಹಚ್ಚುತ್ತಿದ್ದರೆ ಹೊಳೆಯುವ ಮುಖ ನಿಮ್ಮದಾಗಲಿದೆ. ಕೊಬ್ಬರಿ ಎಣ್ಣೆ ಸಕ್ಕರೆ ಒಂದು ಬೌಲ್‌ನಲ್ಲಿ 4 ಚಮಚ ಕೊಬ್ಬರಿ ಎಣ್ಣೆ ತೆಗೆದುಕೊಂಡು ಅದಕ್ಕೆ 3 ಚಮಚ ಸಕ್ಕರೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಸಕ್ಕರೆ ಸಂಪೂರ್ಣ ಕರಗುವುದಿಲ್ಲ ಹಾಗೆಯೇ ಉಳಿಯುವಂತೆ ಮಾಡಿ ರಾತ್ರಿ ಮಲಗುವ ಮುನ್ನ ಮುಖಕ್ಕೆ ಹಚ್ಚಿ ಚೆನ್ನಾಗಿ ಉಜ್ಜಿಕೊಳ್ಳಿ. ಬಳಿಕ 30 ನಿಮಿಷದ ನಂತರ ತೊಳೆದು ಬಿಡಿ. ಇದನ್ನು ವಾರದಲ್ಲಿ ಮೂರರಿಂದ ನಾಲ್ಕು ಬಾರಿ ಮಾಡಿದರೆ ಹೊಳೆಯುವಂತಹ ಮುಖ ಪಡೆಯಬಹುದು. ಕೊಬ್ಬರಿ ಎಣ್ಣೆಯು ತ್ವಚೆಯಲ್ಲಿನ ಕೊಳೆ ತೆಗೆಯಲು ಹಾಗೂ ಹೊಳಪು ನೀಡಲು ಪ್ರಮುಖ ವಸ್ತುವಾಗಿದೆ. ಸೌಂದರ್ಯ ವರ್ಧಕವಾಗಿ ಇದು ಬಹಳ ಉಪಯುಕ್ತವಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.