ಚಿಕನ್​ ಲಿವರ್​ ತಿನ್ನುವುದರಿಂದ ಇಷ್ಟೆಲ್ಲ ಪ್ರಯೋಜನಗಳಿವೆಯಾ?

ನಾನ್​ ವೆಜ್ ಪ್ರಿಯರಿಗೆ ಚಿಕನ್ ಎಂದರೆ ಪಂಚಪ್ರಾಣ. ಹೆಚ್ಚಿನವರು ಚಿಕನ್ ಇಲ್ಲದೇ ಇರಲಾರರು. ಚಿಕನ್​ನಲ್ಲೂ ಒಂದೊಂದು ಭಾಗ ಒಬ್ಬೊಬ್ಬರಿಗೆ ಇಷ್ಟವಾಗುತ್ತದೆ. ಕೆಲವರಿಗೆ ಚಿಕನ್ ಲೆಗ್ ಇಷ್ಟವಾದರೆ, ಇನ್ನು ಕೆಲವರಿಗೆ ರೆಕ್ಕೆ, ಎದೆ ಭಾಗ ಇಷ್ಟವಾಗುತ್ತದೆ.…

ನಾನ್​ ವೆಜ್ ಪ್ರಿಯರಿಗೆ ಚಿಕನ್ ಎಂದರೆ ಪಂಚಪ್ರಾಣ. ಹೆಚ್ಚಿನವರು ಚಿಕನ್ ಇಲ್ಲದೇ ಇರಲಾರರು. ಚಿಕನ್​ನಲ್ಲೂ ಒಂದೊಂದು ಭಾಗ ಒಬ್ಬೊಬ್ಬರಿಗೆ ಇಷ್ಟವಾಗುತ್ತದೆ. ಕೆಲವರಿಗೆ ಚಿಕನ್ ಲೆಗ್ ಇಷ್ಟವಾದರೆ, ಇನ್ನು ಕೆಲವರಿಗೆ ರೆಕ್ಕೆ, ಎದೆ ಭಾಗ ಇಷ್ಟವಾಗುತ್ತದೆ. ಆದರೆ, ಚಿಕನ್ ಲಿವರ್ ಅಂದ್ರೆ ಹಲವರಿಗೆ ಇಷ್ಟವಾಗುವುದಿಲ್ಲ.

ಲಿವರ್​ ತಿಂದರೆ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಬರುತ್ತವೆ ಎಂಬ ತಪ್ಪು ಕಲ್ಪನೆ ಇದೆ. ಆದರೆ, ಚಿಕನ್ ಲಿವರ್ ಸೇವನೆಯಿಂದ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ನೀಗುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಚಿಕನ್ ಲಿವರ್ ಸೇವನೆಯಿಂದ ಆಗುವ ಆರೋಗ್ಯ ಪ್ರಯೋಜನಗಳ ಬಗ್ಗೆ ನಾವೀಗ ತಿಳಿಯೋಣ. ಚಿಕನ್ ಲಿವರ್​ನಲ್ಲಿ ಅನೇಕ ಪೋಷಕಾಂಶಗಳಿದ್ದು, ನಮ್ಮನ್ನು ಆರೋಗ್ಯವಾಗಿರಿಸಲು ಸಹಾಯ ಮಾಡುತ್ತದೆ. ಲಿವರ್​ನಲ್ಲಿ ವಿಟಮಿನ್​ ಬಿ12, ಫಾಲಿಕ್​ ಆ್ಯಸಿಡ್​ ಮತ್ತು ವಿಟಮಿನ್​ ಡಿ ಇದೆ. ಮಿನರಲ್ಸ್​ನಲ್ಲಿ ಕಬ್ಬಿಣ, ಸತು, ರಂಜಕ ಮತ್ತು ಸೆಲೆನಿಯಮ್ ಅಂಶಗಳಿವೆ. ಆರೋಗ್ಯಕರ ಕೊಬ್ಬಾದ ಒಮೆಗಾ 3 ಫ್ಯಾಟಿ ಆ್ಯಸಿಡ್​ ಇರುವುದರಿಂದ ಇದನ್ನು ತೆಗೆದುಕೊಳ್ಳುವುದು ತುಂಬಾ ಒಳ್ಳೆಯದು ಎನ್ನುತ್ತಾರೆ ಆಹಾರ ತಜ್ಞರು. ಗರ್ಭಿಣಿಯರು, ಬೆಳೆಯುತ್ತಿರುವ ಮಕ್ಕಳು ಮತ್ತು ಪ್ರೋ ಮೆಟಾಬಾಲಿಕ್ ಶಕ್ತಿಯ ಹೆಚ್ಚುವರಿ ಅಗತ್ಯವಿರುವ ಯಾರಿಗಾದರೂ ಲಿವರ್​ ತುಂಬಾ ಸಹಾಯಕವಾಗಿದೆ. ಚಿಕನ್ ಲಿವರ್ ಹಲ್ಲಿನ ಆರೋಗ್ಯವನ್ನು ಬೆಂಬಲಿಸುತ್ತದೆ.

ಒಂದು ಚಿಕನ್​ ಲಿವರ್​ ನಿಮಗೆ ಪ್ರತಿದಿನ ಅಗತ್ಯವಿರುವ 400 ಮೈಕ್ರೋಗ್ರಾಮ್​ ಫಾಲಿಕ್ ಆಮ್ಲದಲ್ಲಿ 254 ಮೈಕ್ರೋಗ್ರಾಮ್​ಗಳನ್ನು ಪೂರೈಸುತ್ತದೆ. ಫಾಲಿಕ್ ಆಮ್ಲವು ಜನ್ಮ ದೋಷಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಚಿಕನ್​ ಲಿವರ್​, ಕಬ್ಬಿಣ ಮತ್ತು ಸತುವಿನ ಅಗತ್ಯ ಪ್ರಮಾಣವನ್ನು ಒದಗಿಸುತ್ತದೆ. ಕಬ್ಬಿಣವು ನಿಮ್ಮ ದೇಹವು ಆಮ್ಲಜನಕವನ್ನು ಪರಿಣಾಮಕಾರಿಯಾಗಿ ಬಳಸಲು ಮತ್ತು ಹೊಸ ಕೆಂಪು ರಕ್ತ ಕಣಗಳನ್ನು ಉತ್ಪತಿ ಮಾಡಲು ನೆರವಾಗುತ್ತದೆ. ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯ ಆರೋಗ್ಯದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಕಬ್ಬಿಣದ ಕೊರತೆಯು ದೇಹದ ಆಯಾಸ, ಕಡಿಮೆ ಆಮ್ಲಜನಕ ಮತ್ತು ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆಗೆ ಕಾರಣವಾಗಬಹುದು. ಕಣ್ಣು, ಚರ್ಮ, ಕೂದಲು ಮತ್ತು ಉಗುರುಗಳ ಆರೋಗ್ಯವನ್ನು ಸುಧಾರಿಸುವಲ್ಲಿ ಲಿವರ್​ನಲ್ಲಿರುವ ವಿಟಮಿನ್ ಎ ಪ್ರಮುಖ ಪಾತ್ರ ವಹಿಸುತ್ತದೆ. ಇಲ್ಲಿ ಪ್ರಮುಖವಾಗಿ ನೆನಪಿಡಬೇಕಾದ ಅಂಶವೊಂದಿದೆ. ಚಿಕನ್ ಲಿವರ್ ಅನ್ನು ಚೆನ್ನಾಗಿ ಬೇಯಿಸಿ ತೆಗೆದುಕೊಳ್ಳುವುದು ಉತ್ತಮ. ಇದನ್ನು ಬೇಯಿಸದಿದ್ದರೆ ಸೋಂಕು ತಗಲುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ಇದರಲ್ಲಿ ಡಾಕ್ ಎಂಬ ಬ್ಯಾಕ್ಟೀರಿಯಾ ಇರುತ್ತದೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.