2025ರಲ್ಲಿ ಜನಗಣತಿ ಮಾಡಲು ಕೇಂದ್ರ ಸರ್ಕಾರ ಸಿದ್ಧತೆ: ಕ್ಷೇತ್ರ ಮರುವಿಂಗಡನೆ ಸಾಧ್ಯತೆ

ನವದೆಹಲಿ: ವಿಶ್ವದಾದ್ಯಂತ ಕರೋನಾ ಹಿನ್ನೆಲೆ 2021ರಿಂದ ಮುಂದೂಡಲ್ಪಟ್ಟಿದ್ದ ಜನಗಣತಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ಪರಿಷ್ಕರಣೆ ಪ್ರಕ್ರಿಯೆಯನ್ನು 2025ರಲ್ಲಿ ಆರಂಭಿಸಿ, 2026ರಲ್ಲಿ ವರದಿ ಬಿಡುಗಡೆಗೆ ಸರ್ಕಾರ ಸಜ್ಜಾಗಿದೆ. ಹೌದು, ಜನಗಣತಿ ಆದ ಬಳಿಕ…

ನವದೆಹಲಿ: ವಿಶ್ವದಾದ್ಯಂತ ಕರೋನಾ ಹಿನ್ನೆಲೆ 2021ರಿಂದ ಮುಂದೂಡಲ್ಪಟ್ಟಿದ್ದ ಜನಗಣತಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ಪರಿಷ್ಕರಣೆ ಪ್ರಕ್ರಿಯೆಯನ್ನು 2025ರಲ್ಲಿ ಆರಂಭಿಸಿ, 2026ರಲ್ಲಿ ವರದಿ ಬಿಡುಗಡೆಗೆ ಸರ್ಕಾರ ಸಜ್ಜಾಗಿದೆ.

ಹೌದು, ಜನಗಣತಿ ಆದ ಬಳಿಕ ಲೋಕಸಭೆ ಹಾಗೂ ವಿಧಾನಸಭೆಗಳ ಕ್ಷೇತ್ರ ಮರುವಿಂಗಡಣೆ ನಡೆಯಲಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ಹೇಳಿವೆ. ಆದರೆ ವಿಪಕ್ಷ ಹಾಗೂ ಹಲವು ಎನ್‌ಡಿಎ ಮೈತ್ರಿಕೂಟದ ಪಕ್ಷಗಳಿಂದ ಬೇಡಿಕೆ ವ್ಯಕ್ತವಾಗಿರುವ ಹೊರತಾಗಿಯೂ ಜನಗಣತಿ ವೇಳೆ ಜಾತಿಗಣತಿ ನಡೆಸಬೇಕೇ ಬೇಡವೇ ಎಂಬ ಬಗ್ಗೆ ಸರ್ಕಾರ ಇನ್ನೂ ತೀರ್ಮಾನ ಕೈಗೊಂಡಿಲ್ಲ. ಸದ್ಯದ ಮಟ್ಟಿಗೆ ಜಾತಿ ಗಣತಿ ನಡೆಸುವ ಯೋಚನೆ ಸರ್ಕಾರಕ್ಕಿಲ್ಲ ಎನ್ನಲಾಗಿದೆ

ಈ ನಡುವೆ, ಜನಗಣತಿ ಕುರಿತು ಚರ್ಚಿಸಲು ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ಕರೆಯಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

Vijayaprabha Mobile App free

ಈ ಹಿಂದಿನ ಜನಗಣತಿಯಲ್ಲಿ ಏನಿತ್ತು?:

2011ರಲ್ಲಿ ಭಾರತದ ಜನಸಂಖ್ಯೆ 121.1 ಕೋಟಿ ಇತ್ತು. ಇದರಲ್ಲಿ ಹಿಂದೂಗಳು ಶೇ.79.9, ಮುಸ್ಲಿಮರು ಶೇ.14.23, ಕ್ರೈಸ್ತರು ಶೇ.2.30, ಸಿಖ್ಖರು ಶೇ.1.72 ಇದ್ದರು. 57 ಸಾವಿರ ಪಾರ್ಸಿ ಧರ್ಮೀಯರೂ ಇದ್ದರು. ಶೇ.68.84ರಷ್ಟು ಜನರು ಗ್ರಾಮೀಣ ಪ್ರದೇಶದಲ್ಲಿ, ಶೇ.31.16ರಷ್ಟು ಜನರು ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವುದು ಕಂಡುಬಂದಿತ್ತು.

ದೇಶದಲ್ಲಿ 28 ರಾಜ್ಯಗಳು ಮತ್ತು 7 ಕೇಂದ್ರಾಡಳಿತ ಪ್ರದೇಶಗಳಿವೆ. 20 ಕೋಟಿ ಜನಸಂಖ್ಯೆಯೊಂದಿಗೆ ಉತ್ತರಪ್ರದೇಶ ಅತಿಹೆಚ್ಚು ಜನಸಂಖ್ಯೆ ಹೊಂದಿದ ರಾಜ್ಯವಾಗಿದೆ. 64429 ಜನರೊಂದಿಗೆ ಲಕ್ಷದ್ವೀಪ ಅತಿಕಡಿಮೆ ಜನಸಂಖ್ಯೆ ಹೊಂದಿದ ಪ್ರದೇಶವಾಗಿದೆ. 342239 ಚದರ ಕಿ.ಮೀ ಹೊಂದಿರುವ ರಾಜಸ್ಥಾನ ಭೌಗೋಳಿಕವಾಗಿ ದೇಶದಲ್ಲಿ ಅತ್ಯಂತ ದೊಡ್ಡ ರಾಜ್ಯ, 3702 ಚದರ ಕಿ.ಮೀ ಹೊಂದಿರುವ ಗೋವಾ ಅತ್ಯಂತ ಸಣ್ಣ ರಾಜ್ಯ ಎಂಬಿತ್ಯಾದಿ ವಿಷಯಗಳನ್ನು ಜನಗಣತಿ ವರದಿ ಹೇಳಿತ್ತು.

31 ಪ್ರಶ್ನೆಗಳ ಗಣತಿ:

ಜನಗಣತಿ ವೇಳೆ ನಾಗರಿಕರನ್ನು ಸಂದರ್ಶಿಸಲು ಒಟ್ಟು 31 ಪ್ರಶ್ನೆಗಳನ್ನು ಸರ್ಕಾರ ಸಿದ್ಧಪಡಿಸಿದೆ. ಇದರಲ್ಲಿ ಕುಟುಂಬ ಮುಖ್ಯಸ್ಥ ಎಸ್‌ಸಿ ಅಥವಾ ಎಸ್ಟಿ ಸಮುದಾಯಕ್ಕೆ ಸೇರಿದ್ದಾರೆಯೇ ಇಲ್ಲವೇ ಎಂಬ ಪ್ರಶ್ನೆ ಕೂಡ ಸೇರಿದೆ. ಈ ಪ್ರಶ್ನೆಯನ್ನು ಕಳೆದ ಜನಗಣತಿ ವೇಳೆ ಕೂಡ ಕೇಳಲಾಗಿತ್ತು. ಇದರ ಜೊತೆಗೆ ಮನೆಯಲ್ಲಿ ಎಷ್ಟು ಜನ ವಾಸವಿದ್ದಾರೆ? ಮನೆಯ ಮುಖ್ಯಸ್ಥರು ಮಹಿಳೆಯಾ? ಮನೆಯಲ್ಲಿ ಎಷ್ಟು ಕೊಠಡಿಗಳಿವೆ? ವಿವಾಹಿತರು ಎಷ್ಟು ಜನರಿದ್ದಾರೆ? ಮನೆಯಲ್ಲಿ ಫೋನ್‌, ಅಂತರ್ಜಾಲ ಸಂಪರ್ಕ, ಮೊಬೈಲ್‌, ಬೈಸಿಕಲ್‌/ಸ್ಕೂಟರ್‌, ಕಾರು/ ಜೀಪ್‌/ ವ್ಯಾನ್‌ ಇದೆಯಾ? ಮನೆಯಲ್ಲಿ ಧಾನ್ಯ ಬಳಸುತ್ತೀರಾ? ಕುಡಿಯುವ ನೀರಿನ ಮೂಲ ಯಾವುದು? ಶೌಚಾಲಯ ಇದೆಯಾ? ಸ್ನಾನದ ಗೃಹ ಉಂಟಾ? ಪ್ರತ್ಯೇಕ ಅಡುಗೆ ಕೋಣೆ ಇದೆಯಾ? ಎಲ್‌ಪಿಜಿ ಸಂಪರ್ಕ ಇದೆಯಾ? ರೇಡಿಯೋ/ ಟೀವಿ ಇದೆಯಾ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಲಾಗುವುದು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.