ಖತರ್ನಾಕ್ ಸಿಎ ವಿದ್ಯಾರ್ಥಿನಿ ₹31 ಸಾವಿರ ವಂಚನೆ: ಬಟ್ಟೆ ಖರೀದಿಸಿ ಹಣ ಹಾಕದೆ ಧೋಖಾ

ಬೆಂಗಳೂರು: ರಾಜ್ಯ ರಾಜಧಾನಿಯ ಸದಾಶಿವನಗರ ಪ್ರತಿಷ್ಠಿತ ಬಟ್ಟೆ ಶೋ ರೂಮ್‌ವೊಂದರಲ್ಲಿ ₹31 ಸಾವಿರ ಮೌಲ್ಯದ ಬಟ್ಟೆಗಳನ್ನು ಖರೀದಿಸಿ ಬಳಿಕ ಆನ್‌ಲೈನ್‌ನಲ್ಲಿ ಹಣ ಪಾವತಿಸಿರುವುದಾಗಿ ಹೇಳಿ ತನ್ನದೇ ಖಾತೆಗೆ ಹಣ ವರ್ಗಾಯಿಸಿಕೊಂಡು ವಂಚಿಸಿದ ಆರೋಪದಡಿ ಚಾರ್ಟೆಡ್‌…

ಬೆಂಗಳೂರು: ರಾಜ್ಯ ರಾಜಧಾನಿಯ ಸದಾಶಿವನಗರ ಪ್ರತಿಷ್ಠಿತ ಬಟ್ಟೆ ಶೋ ರೂಮ್‌ವೊಂದರಲ್ಲಿ ₹31 ಸಾವಿರ ಮೌಲ್ಯದ ಬಟ್ಟೆಗಳನ್ನು ಖರೀದಿಸಿ ಬಳಿಕ ಆನ್‌ಲೈನ್‌ನಲ್ಲಿ ಹಣ ಪಾವತಿಸಿರುವುದಾಗಿ ಹೇಳಿ ತನ್ನದೇ ಖಾತೆಗೆ ಹಣ ವರ್ಗಾಯಿಸಿಕೊಂಡು ವಂಚಿಸಿದ ಆರೋಪದಡಿ ಚಾರ್ಟೆಡ್‌ ಅಕೌಂಟೆಂಟ್‌(ಸಿಎ) ವ್ಯಾಸಂಗ ಮಾಡುತ್ತಿರುವ ಯುವತಿಯನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ದೊಡ್ಡಬಳ್ಳಾಪುರ ಮೂಲದ ರಶ್ಮಿ (25) ಬಂಧಿತೆ. ಈಕೆ ಸದಾಶಿವನಗರದ ಆರ್‌ಎಂವಿ ಎಕ್ಸ್‌ಟೆನ್ಷನ್‌ನ ವಸಿಷ್ಠ ಬಾಟಿಕ್‌ ಎಂಬ ಬಟ್ಟೆ ಷೋ ರೂಮ್‌ನಲ್ಲಿ ಇತ್ತೀಚೆಗೆ 31,800 ರು. ಮೌಲ್ಯದ ಬಟ್ಟೆಗಳನ್ನು ಖರೀದಿಸಿದ್ದಳು. ಬಳಿಕ ಆನ್‌ಲೈನ್‌ನಲ್ಲಿ ಹಣ ಪಾವತಿಸಿರುವುದಾಗಿ ಹೇಳಿ ಹಣ ಪಾವತಿಸದೆ ವಂಚಿಸಿ ಪರಾರಿಯಾಗಿದ್ದಳು. ಈ ಸಂಬಂಧ ಷೋ ರೂಮ್‌ನ ಸಿಬ್ಬಂದಿ ಸಂಪದ ಎಂಬುವವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.

ಪ್ರಕರಣದ ಹಿನ್ನೆಲೆ:

Vijayaprabha Mobile App free

ಆರೋಪಿ ರಶ್ಮಿ ಗ್ರಾಹಕರ ಸೋಗಿನಲ್ಲಿ ಅ.29ರ ಮಧ್ಯಾಹ್ನ ಬಟ್ಟೆ ಷೋ ರೂಮ್‌ಗೆ ಬಂದಿದ್ದು, 31,800 ರು. ಮೌಲ್ಯದ ಬಟ್ಟೆಗಳನ್ನು ಖರೀದಿಸಿದ್ದಾಳೆ. ಬಳಿಕ ಸ್ನೇಹಾ ಎಂಬ ಹೆಸರಿನಲ್ಲಿ ಬಿಲ್ ಮಾಡಿಸಿದ್ದಾಳೆ. ಆನ್‌ಲೈನ್‌ನಲ್ಲಿ ಹಣ ಪಾವತಿಸುವುದಾಗಿ ತನ್ನ ಮೊಬೈಲ್‌ನಿಂದ ಷೋ ರೂಮ್‌ನ ಫೋನ್‌ ಪೇ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ಹಣ ಪಾವತಿಯಾಗಿದೆ ಎಂದಿದ್ದಾಳೆ. ಆದರೆ, ಷೋ ರೂಮ್‌ನ ಬ್ಯಾಂಕ್‌ ಖಾತೆಗೆ ಹಣ ಪಾವತಿಯಾಗಿರಲಿಲ್ಲ.

ಈ ವೇಳೆ ಸಿಬ್ಬಂದಿ ಸಂಪದ ಅವರು ಹಣ ಪಾವತಿಯಾಗಿಲ್ಲ ಎಂದು ರಶ್ಮಿಯಿಂದ ಮೊಬೈಲ್ ಸಂಖ್ಯೆ ಪಡೆದಿದ್ದರು. ಮೊಬೈಲ್ ಸಂಖ್ಯೆಗೆ ಹಲವು ಬಾರಿ ಕರೆ ಮಾಡಿದರೂ ಯಾವುದೇ ಪ್ರಯೋಜವಾಗಿಲ್ಲ. ಬಳಿಕ ನೀಡಲಾದ ದೂರಿನ ಮೇರೆಗೆ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.

ಕ್ಯೂಆರ್‌ ಸ್ಕ್ಯಾನಿನಲ್ಲಿ ಮೋಸ:

ಆರೋಪಿ ರಶ್ಮೀ ನಗರದ ಖಾಸಗಿ ವಿಮಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಜತೆಗೆ ಚಾರ್ಟೆಡ್‌ ಅಕೌಂಟೆಂಟ್‌(ಸಿಎ) ವ್ಯಾಸಂಗ ಮಾಡುತ್ತಿರುವುದು ವಿಚಾರಣೆಯಿಂದ ತಿಳಿದು ಬಂದಿದೆ. ಆರೋಪಿ ರಶ್ಮಿ 2 ಬ್ಯಾಂಕ್‌ ಖಾತೆ ಹೊಂದಿದ್ದಾಳೆ. ಬಟ್ಟೆ ಖರೀದಿ ಬಳಿಕ ಕ್ಯೂಆರ್‌ ಕೋಡ್‌ ಸ್ಕ್ಯಾನರ್‌ ಮೇಲೆ ಬರೆದಿರುವ ಅಂಗಡಿ ಹೆಸರು ಗಮನಿಸಿದ್ದಾಳೆ. ಈ ವೇಳೆ ತನ್ನದೇ ಮೊಬೈಲ್‌ ಸಂಖ್ಯೆಯನ್ನು ಅಂಗಡಿ ಹೆಸರಿನಲ್ಲಿ ಸೇವ್‌ ಮಾಡಿಕೊಂಡಿದ್ದಾಳೆ. ಬಳಿಕ ಕ್ಯೂಆರ್‌ ಕೋಡ್‌ ಸ್ಕ್ಯಾನ್ ಮಾಡಿದಂತೆ ಮಾಡಿ ತನ್ನದೇ ಬ್ಯಾಂಕ್‌ ಖಾತೆಗೆ ಹಣ ವರ್ಗಾಯಿಸಿಕೊಂಡಿದ್ದಾಳೆ. ಇದರ ಫೋಟೋವನ್ನೇ ಹಣ ಪಾವತಿಯಾಗಿದೆ ಎಂದು ಅಂಗಡಿ ಸಿಬ್ಬಂದಿಗೆ ತೋರಿಸಿ ಯಾಮಾರಿಸಿದ್ದಾಳೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.