ಸ್ಟಾರ್ ಸುವರ್ಣ ವಾಹಿನಿಯ ದಸರಾ ದರ್ಬಾರ್‌ನಲ್ಲಿ ಬಿಗ್ ಬಾಸ್ ಸೀಸನ್ 10ರ ವಿನ್ನರ್ ಕಾರ್ತಿಕ್ ಮಹೇಶ್ ಹಾಗೂ ನಟಿ ನಮ್ರತಾ ಹಾಡೊಂದಕ್ಕೆ ಭರ್ಜರಿ ಡಾನ್ಸ್ ಮಾಡಿದ್ದಾರೆ. ಮಳೆಯಲಿ ಚಳಿ ಬಿಟ್ಟು ಕುಣಿಯುವ ಮೂಲಕ ಈ ಜೋಡಿ ನೋಡುಗರ ಮೈ ಬಿಸಿ ಮಾಡಿದೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ದಸರಾ ದರ್ಬಾರ್ ಕಾರ್ಯಕ್ರಮ ಭಾನುವಾರ ಪ್ರಸಾರವಾಗುತ್ತಿದ್ದು, ಇದರ ಪ್ರೋಮೋ ಚಾನೆಲ್‌ನ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಆಗಿದೆ. ಪ್ರೋಮೋದ ವಿಡಿಯೋವೊಂದರಲ್ಲಿ ನಮ್ರತಾ ಹಾಗೂ ಕಾರ್ತಿಕ್ ಇಬ್ಬರು ನೀರಿನ ಮಧ್ಯೆ ಡಾನ್ಸ್ ಮಾಡಿದ್ದಾರೆ. ವಿಡಿಯೋದ ಕೊನೆಯಲ್ಲಿ ನಮ್ರತಾ ಜೊತೆ ಡಾನ್ಸ್ ಮಾಡಿ ಚಳಿಯಾಯ್ತು ಎಂದ ಕಾರ್ತಿಕ್ ಮಹೇಶ್ ಹೇಳಿದ್ದಾರೆ.
ಬೆಳಗಿನ ಜಾವ 5.45ಕ್ಕೆ ಈ ಡಾನ್ಸ್ ಶೂಟಿಂಗ್ ನಡೆದಿದೆ ಎನ್ನಲಾಗಿದ್ದು, ಈ ವಿಡಿಯೋದಲ್ಲಿ ಇಬ್ಬರನ್ನು ಒಟ್ಟಿಗೆ ನೋಡಿದ ಫ್ಯಾನ್ಸ್ ಖುಷಿಯಾಗಿದ್ದಾರೆ.