ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನವೇ ಕಾದಾಟ ಶುರು: ಬಿಸಿನೀರಿಗಾಗಿ ಫೈಟ್

‘ಬಿಗ್ ಬಾಸ್ ಕನ್ನಡ ಸೀಸನ್ 11’ ಆರಂಭಗೊಂಡು ಒಂದು ದಿನವೂ ಕಳೆದಿಲ್ಲ. ಅಷ್ಟರಲ್ಲಿ ಮನೆ ಮಂದಿ ಕಿತ್ತಾಡಿಕೊಳ್ಳಲು ಶುರುಮಾಡಿದ್ದಾರೆ. ಬಿಸಿನೀರು ಹಾಗೂ ತಣ್ಣೀರಿನ ವಿಚಾರಕ್ಕೆ ಮನೆ ಮಂದಿ ಕಿತ್ತಾಡಿಕೊಂಡಿದ್ದು ಇದನ್ನ ನೋಡಿದರೆ ಕಳೆದ ಸೀಸನ್…

‘ಬಿಗ್ ಬಾಸ್ ಕನ್ನಡ ಸೀಸನ್ 11’ ಆರಂಭಗೊಂಡು ಒಂದು ದಿನವೂ ಕಳೆದಿಲ್ಲ. ಅಷ್ಟರಲ್ಲಿ ಮನೆ ಮಂದಿ ಕಿತ್ತಾಡಿಕೊಳ್ಳಲು ಶುರುಮಾಡಿದ್ದಾರೆ. ಬಿಸಿನೀರು ಹಾಗೂ ತಣ್ಣೀರಿನ ವಿಚಾರಕ್ಕೆ ಮನೆ ಮಂದಿ ಕಿತ್ತಾಡಿಕೊಂಡಿದ್ದು ಇದನ್ನ ನೋಡಿದರೆ ಕಳೆದ ಸೀಸನ್ ಮತ್ತೆ ರಿಪೀಟ್ ಆಗುತ್ತಾ ಎಂಬ ಅನುಮಾನ ಶುರುವಾಗಿದೆ.

‘ಬಿಗ್ ಬಾಸ್’ ಸೀಸನ್ 11ಗೆ 17 ಸ್ಪರ್ಧಿಗಳು ಎಂಟ್ರಿ ಪಡೆದಿದ್ದಾರೆ. ಅನುಷಾ ರೈ, ಧರ್ಮಕೀರ್ತಿರಾಜ್, ಲಾಯರ್ ಜಗದೀಶ್, ಭವ್ಯಾ ಗೌಡ, ಯಮುನಾ ಶ್ರೀನಿಧಿ, ಧನರಾಜ್ ಆಚಾರ್, ಗೌತಮಿ ಜಾಧವ್, ಶಿಶಿರ್, ತ್ರಿವಿಕ್ರಂ, ಹಂಸ, ಮಾನಸಾ, ಗೋಲ್ಡ್ ಸುರೇಶ್, ಐಶ್ವರ್ಯಾ ಸಿಂಧೋಗಿ, ಚೈತ್ರಾ ಕುಂದಾಪುರ್, ಉಗ್ರಂ ಮಂಜು, ರಂಜಿತ್ ಕುಮಾರ್, ಮೋಕ್ಷಿತಾ ಪೈ, ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ. ಇದರಲ್ಲಿ ಒಂದಷ್ಟು ಮಂದಿ ಸ್ವರ್ಗದಲ್ಲಿದ್ದರೆ ಮತ್ತೊಂದಷ್ಟು ಮಂದಿ ನರಕದಲ್ಲಿ ಇದ್ದಾರೆ.

ನರಕದಲ್ಲಿ ಇರೋರಿಗೆ ಬಿಸಿನೀರು ಬೇಕಾಗಿದೆ. ಇದನ್ನು ಸೌಕರ್ಯ ಎಂದು ಸ್ವರ್ಗ ನಿವಾಸಿಗಳು ಪರಿಗಣಿಸಿದ್ದಾರೆ. ಹೀಗಾಗಿ, ಬಿಸಿ ನೀರನ್ನು ಕೊಡೋಕೆ ಅವರು ಇಷ್ಟಪಡುತ್ತಿಲ್ಲ. ಇದರಿಂದ ಇಬ್ಬರ ಮಧ್ಯೆ ಕಿತ್ತಾಟ ಆಗಿದೆ. ಮಾತಿಗೆ ಮಾತು ಬೆಳೆದಿದೆ. ಅಷ್ಟೇ ಅಲ್ಲ, ಇದನ್ನು ಉದ್ದೇಶಪೂರ್ವಕವಾಗಿ ಮಾಡಲಾಗುತ್ತಿದೆ ಎಂದು ಕೆಲ ನರಕ ನಿವಾಸಿಗಳು ಭಾವಿಸಿದ್ದಾರೆ.

Vijayaprabha Mobile App free

‘ನಮ್ಮ ಕೈಯಲ್ಲಿ ಮಿಸ್ಟೇಕ್ ಮಾಡಿಸೋಕೆ ಅವರು ಪ್ಲ್ಯಾನ್ ಮಾಡಿಸುತ್ತಾರೆ. ಎಲ್ಲರೂ ಹುಷಾರಾಗಿರಿ. ಈಗ ಆಟ ಶುರು’ ಎಂದು ಉಗ್ರಂ ಮಂಜು ಅವರು ಹೇಳಿದ್ದಾರೆ. ಎಲ್ಲರೂ ಸಣ್ಣ ಸಣ್ಣ ವಿಚಾರಕ್ಕೆ ದೊಡ್ಡ ಮಟ್ಟದ ಗೊಂದಲ ಮಾಡಿಕೊಳ್ಳುತ್ತಿದ್ದು, ಸಾಕಷ್ಟು ಕಿತ್ತಾಡಿಕೊಳ್ಳುತ್ತಿದ್ದಾರೆ. ಯಮುನಾ ಶ್ರೀನಿಧಿ ಹಾಗೂ ಚೈತ್ರಾ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಚೈತ್ರಾ ಹಣ್ಣನ್ನು ತಿಂದು ರೂಲ್ಸ್ ಬ್ರೇಕ್ ಮಾಡಿದ್ದಾರೆ.

ಇನ್ನು, ಲಾಯರ್ ಎನಿಸಿಕೊಂಡಿರೋ ಜಗದೀಶ್ ಅವರು ಮೊದಲ ದಿನವೇ ರೂಲ್ಸ್ ಬ್ರೇಕ್ ಮಾಡಿದ್ದಾರೆ. ನರಕ ನಿವಾಸಿಗಳು ಮನೆಗೆಲಸ ಮಾಡಬೇಕಿತ್ತು. ಈ ವೇಳೆ ಚೈತ್ರಾ ಹಾಗೂ ಜಗದೀಶ್ ಅವರನ್ನು ಕೆಲಸಕ್ಕೆ ನೇಮಿಸಲಾಯಿತು. ಚೈತ್ರಾ ಸರಿಯಾಗಿ ಶುಚಿಮಾಡಿಲ್ಲ ಎಂದು ಜಗದೀಶ್ ಅವರೇ ಶುಚಿಮಾಡಿ ನಿಯಮ ಮುರಿದಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.