ಬಾಂಗ್ಲಾದೇಶ: ದುರ್ಗಾಪೂಜಾ ಪಂಗಡದ ಮೇಲೆ ಕೆಲವು ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದಿರುವ ಘಟನೆ ಢಾಕಾದಲ್ಲಿ ನಡೆದಿದೆ. ಇದರಿಂದಾಗಿ ಮಂಟದಲ್ಲಿ ನೂಕುನುಗ್ಗಲು ಉಂಟಾಗಿ, ಕಾಲ್ತುಳಿತ ಸಂಭವಿಸಿದೆ.
ಓಲ್ಡ್ ಢಾಕಾದ ತಾಟಿ ಬಜಾರ್ ಪ್ರದೇಶದಲ್ಲಿನ ದುರ್ಗಾ ಪೂಜಾ ಮಂಟಪದ ಮೇಲೆ ಪೆಟ್ರೋಲ್ ಬಾಂಬ್ ಎಸೆಯಲಾಗಿದೆ. ಬಳಿಕ ದಾಳಿಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ.
ದುರ್ಗಾ ಪೂಜೆಯ ವೇಳೆ ಇಸ್ಲಾಮಿಕ್ ಹಾಡುಗಳು: ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯದ ಮೇಲಿನ ದೌರ್ಜನ್ಯದ ವರದಿಗಳ ನಡುವೆ, ಚಿತ್ತಗಾಂಗ್‌ನ ದುರ್ಗಾ ಪೂಜೆಯ ವೇದಿಕೆಯಲ್ಲಿ ಇಸ್ಲಾಮಿಕ್ ಹಾಡನ್ನು ಹಾಡಲಾಗಿದೆ.
ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಚಿತ್ತಗಾಂಗ್ ನಗರದ ಜೆಎಂ ಸೇನ್ ಹಾಲ್‌ನಲ್ಲಿ ಹಾಡಲು ಬಯಸಿದ ತಂಡವೊಂದು ಸಾಂಸ್ಕೃತಿಕ ತಂಡದ ಸದಸ್ಯರು ಎಂದು ಗುರುತಿಸಿಕೊಂಡಿದ್ದು, ಪೂಜಾ ಸಮಿತಿಯ ಸದಸ್ಯರು ಅನುಮತಿ ನೀಡಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ತಂಡವು ಜಾತ್ಯತೀತ ಹಾಡನ್ನು ಹಾಡಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಆದರೆ ಎರಡನೇ ಹಾಡು ಇಸ್ಲಾಮಿಕ್ ಆಗಿತ್ತು. ಇದು ಹಿಂದೂ ಸಮುದಾಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.