ಬೆಂಗಳೂರು : ಹಣಕ್ಕಾಗಿ ತಾಯಿ ಮಗನನ್ನ ಕಿಡ್ನ್ಯಾಪ್ ಮಾಡಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದ ಮೇಲೆ ಇಬ್ಬರು ರೌಡಿಶೀಟರ್ ಸೇರಿ ಒಟ್ಟು 9 ಮಂದಿಯನ್ನ ಚಂದ್ರಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಜೋಸೆಫ್ (ರೌಡಿ ಶೀಟರ್), ಶ್ರೀನಿವಾಸ್ @ ಪಾಗಲ್ ಸೀನ (ರೌಡಿಶೀಟರ್), ಸೌಮ್ಯಾ, ಪ್ರತಾಪ್, ಜತಿನ್, ವಿಘ್ನೇಶ್, ಸೈಯದ್ ಶಹಬುದ್ದೀನ್, ಸ್ವಾತಿ, ಮಾದೇಶ ಬಂಧಿತ ಆರೋಪಿಗಳು.
ಆ.13 ರಂದು ಜೋಸೆಫ್ ಮತ್ತು ಶ್ರೀನಿವಾಸ್ ಹಣ ವಸೂಲಿ ಮಾಡಲು ತಾಯಿ-ಮಗನನ್ನ ಕಿಡ್ನ್ಯಾಪ್ ಮಾಡಿದ್ದರು. ಬಳಿಕ ಇಬ್ಬರನ್ನೂ ಪರಿಚಯಸ್ಥ ಪ್ರತಾಪ್ ಮನೆಯಲ್ಲಿ ಅಕ್ರಮವಾಗಿ ಇರಿಸಿ ಟಾರ್ಚರ್ ಮಾಡಿದ್ದರು. ದೈಹಿಕ ಮತ್ತು ಲೈಂಗಿಕ ದೌರ್ಜನ್ಯ ಎಸಗಿ 2 ಲಕ್ಷ ರೂ. ಕೊಡುವಂತೆ ಕಿರುಕುಳ ನೀಡಿದ್ದರು. ಇಬ್ಬರ ಬಳಿ ಹಣ ಇಲ್ಲ ಎಂದು ಗೊತ್ತಾದಾಗ ಬಿಟ್ಟು ಕಳಿಸಿದ್ದಾರೆ.
ಗ್ಯಾಂಗ್‌ನಿಂದ ಪಾರಾದ ಮಹಿಳೆ ಚಂದ್ರಲೇಔಟ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಘಟನೆಗೆ ಕಾರಣಕರ್ತರಾಗಿದ್ದ ಇಬ್ಬರು ರೌಡಿಶೀಟರ್‌ಗಳು, ಇಬ್ಬರು ಮಹಿಳೆಯರು ಸೇರಿ 9 ಮಂದಿಯನ್ನ ಬಂಧನ ಮಾಡಿ ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿಗಳಾದ ಜೋಸೆಫ್ ಮತ್ತು ಪಾಗಲ್ ಸೀನ ಚಂದ್ರಾ ಲೇಔಟ್ ರೌಡಿ ಶೀಟರ್ ಗಳಾಗಿದ್ದು, ಶಹಬುದ್ದೀನ್ ಮತ್ತು ವಿಘ್ನೇಶ್ ವಿರುದ್ಧ ಈ ಹಿಂದೆ ಹಲ್ಲೆ ಪ್ರಕರಣಗಳಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.