ಚಿಲಮತ್ತೂರು: ತಡರಾತ್ರಿ ನಾಲ್ವರು ಅಪರಿಚಿತ ವ್ಯಕ್ತಿಗಳು ಪೇಪರ್ ಮಿಲ್ ಕಾರ್ಮಿಕನ ನಿವಾಸಕ್ಕೆ ಬಲವಂತವಾಗಿ ನುಗ್ಗಿ ಮಹಿಳೆ ಮತ್ತು ಆಕೆಯ ಸೊಸೆ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಕ್ಷೇತ್ರದ ಚಿಲಮತ್ತೂರು ಮಂಡಲದಲ್ಲಿ ವರದಿಯಾಗಿದೆ.
ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಮನೆಗೆ ಮಧ್ಯರಾತ್ರಿ ದ್ವಿಚಕ್ರವಾಹನಗಳಲ್ಲಿ ಬಂದಿದ್ದ ಐವರು, ತಂದೆ ಮತ್ತು ಮಗನ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ನಾಲ್ವರು ಅತ್ತೆ ಮತ್ತು ಸೊಸೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ. ಈ ಕುಟುಂಬವು ಬಳ್ಳಾರಿ ಮೂಲದ್ದೆಂದು ತಿಳಿದು ಬಂದಿದ್ದು, ಐದು ತಿಂಗಳ ಹಿಂದೆ ನಲ್ಲಬೊಮ್ಮನಿಪಲ್ಲಿಯಲ್ಲಿ ನಿರ್ಮಾಣವಾಗುತ್ತಿರುವ ಕಾಗದದ ಗಿರಣಿಯಲ್ಲಿ ವಾಚ್‌ಮೆನ್ ಉದ್ಯೋಗಕ್ಕಾಗಿ ಚಿಲಮತ್ತೂರು ಮಂಡಲಕ್ಕೆ ತೆರಳಿ ವಾಸವಿತ್ತು ಎನ್ನಲಾಗಿದೆ.
ಸದ್ಯ ದುಷ್ಕರ್ಮಿಗಳನ್ನು ಬಂಧಿಸಲು ಪೊಲೀಸರು ಶೋಧ ಆರಂಭಿಸಿದ್ದು, ಸಂತ್ರಸ್ತರಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಚಿಲಮತ್ತೂರು ಪೊಲೀಸ್ ಇನ್ಸ್ ಪೆಕ್ಟರ್ ಕೆ.ರಾಮಚಂದ್ರ ಹೇಳಿದ್ದಾರೆ.