Actor Thandavaram | ಸಿನಿಮಾ ಅರ್ಧಕ್ಕೆ ನಿಂತಿದ್ದಕ್ಕೆ ನಿರ್ದೇಶನ ಮೇಲೆ ಫೈರ್ ಮಾಡಿದ ನಾಯಕ ನಟ ಅರೆಸ್ಟ್..!

ಬೆಂಗಳೂರು: ಸಿನಿಮಾ ಅರ್ಧಕ್ಕೆ ನಿಂತಿದ್ದಕ್ಕೆ ಸಿನಿಮಾ ನಿರ್ದೇಶಕನ ಮೇಲೆ ಫೈರಿಂಗ್ ನಡೆಸಲಾಗಿದ್ದು, ಮುಗಿಲ್ ಪೇಟೆ ನಿರ್ದೇಶನ ಮಾಡಿದ್ದ ಭರತ್ ಮೇಲೆ ಫೈರಿಂಗ್ ನಡೆದಿದ್ದು ಅದೃಷ್ಟವಶಾತ್ ಗನ್ ನಿಂದ ಹೊರಟ ಬುಲೆಟ್ ಡೈರೆಕ್ಟರ್‌ಗೆ ತಗುಲದೆ ಗೋಡೆಗೆ…

Actor Thandavaram

ಬೆಂಗಳೂರು: ಸಿನಿಮಾ ಅರ್ಧಕ್ಕೆ ನಿಂತಿದ್ದಕ್ಕೆ ಸಿನಿಮಾ ನಿರ್ದೇಶಕನ ಮೇಲೆ ಫೈರಿಂಗ್ ನಡೆಸಲಾಗಿದ್ದು, ಮುಗಿಲ್ ಪೇಟೆ ನಿರ್ದೇಶನ ಮಾಡಿದ್ದ ಭರತ್ ಮೇಲೆ ಫೈರಿಂಗ್ ನಡೆದಿದ್ದು ಅದೃಷ್ಟವಶಾತ್ ಗನ್ ನಿಂದ ಹೊರಟ ಬುಲೆಟ್ ಡೈರೆಕ್ಟರ್‌ಗೆ ತಗುಲದೆ ಗೋಡೆಗೆ ಬಿದ್ದಿದೆ.

ಹೌದು, ಯುವ ನಾಯಕ ತಾಂಡವ ರಾಮ್ (Actor Thandavaram)  ‘ಒಂದು ಕತೆ ಹೇಳಲ’ ಸೇರಿ ಕೇಲ‌ ಸಿನಿಮಾ ಮಾಡಿದ್ರೆ, ಜೋಡಿಹಕ್ಕಿ ಭೂಮಿಗೆ ಬಂದ ಭಗವಂತ ಧಾರವಾಹಿಯಲ್ಲಿ ನಟಿಸಿದ್ದ ತಾಂಡವರಾಮ್ ನಿರ್ದೇಶಕ ಭರತ್ ಜೊತೆಗೆ ಸಿನಿಮಾ ಮಾಡುತ್ತಿದ್ದು, ಸಿನಿಮಾ ಅರ್ಧಕ್ಕೆ ನಿಂತಿತ್ತು.

ಇದನ್ನೂ ಓದಿ: Actress Siri Prahlad married | ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಸಿರಿ ಪ್ರಹ್ಲಾದ್

Vijayaprabha Mobile App free

ನಿನ್ನೆ ಸಿನಿಮಾ ವಿಚಾರವಾಗಿ ಚಂದ್ರಾಲೇಔಟ್ ಬಳಿಯ ಆಫೀಸ್‌ನಲ್ಲಿ ಭರತ್ ಮತ್ತು ತಾಂಡವರಾಮ್ ಮಾತನಾಡಲು ಬಂದಿದ್ದು, ಈ ವೇಳೆ ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಜಗಳ ನಡೆದಿದೆ. ಈ ವೇಳೆ ತಾಂಡವರಾಮ್ ಭರತ್ ಮೇಲೆ ಫೈರಿಂಗ್ ಮಾಡಿದ್ದಾನೆ. ‌ಕೂಡಲೆ ಭರತ್ ಈ ಬಗ್ಗೆ ಪೊಲೀಸ್ರಿಗೆ ಮಾಹಿತಿ ನೀಡಿದ್ದು ಚಂದ್ರಾ ಲೇಔಟ್ ಪೊಲೀಸರು ತಾಂಡವರಾಮ್‌ನನ್ನು ಬಂಧಿಸಿದ್ದಾರೆ. ಕೊಲೆಯತ್ನದ ಪ್ರಕರಣ ತಾಂಡವರಾಮ್ ಮೇಲೆ ದಾಖಲಾಗಿದೆ.

 

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.