Actor Darshan Pavitra Gowda relationship: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ (Actor Darshan) ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದ್ದು, ನಟಿ ಪವಿತ್ರಾಳೊಡನೆ (Pavitra Gowda) ತಾನು ಲಿವಿಂಗ್ ಟು ಗೆದರ್ (ಸಹಜೀವನ) ಸಂಬಂಧದಲ್ಲಿ ಇರುವುದಾಗಿ ಘೋಷಿಸಿರುವುದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿದೆ.
ನಾವಿಬ್ಬರು ಮದುವೆ ಆಗಿಲ್ಲ. ಜಸ್ಟ್ ಲಿವಿಂಗ್ ಟುಗೆದರ್‌ನಲ್ಲಿ ಇದ್ದೀವಿ ಎಂದು ವಿಚಾರಣೆಯಲ್ಲಿ ದರ್ಶನ್ ಬಾಯ್ಬಿಟ್ಟಿದ್ದಾರೆಂದು ಚಾರ್ಜ್‌ಶೀಟ್‌ನಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ. ಖುದ್ದು DCPಯಿಂದಲೇ ವಿಚಾರಣೆ ನಡೆದಾಗ ದರ್ಶನ್, ಪವಿತ್ರಗೌಡ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಪವಿತ್ರಾ, ನಾನು ಜತೆಯಲ್ಲಿ ಇದ್ದೀವಿ ಎಂದು ಹೇಳಿಕೆ ನೀಡಿದ್ದಾರೆ.
ಈ ಹಿಂದೆ ಇವರಿಬ್ಬರ ನಡುವಿನ ಬಾಂಧವ್ಯವು ದರ್ಶನ್ ಮತ್ತು ವಿಜಯ ಲಕ್ಷ್ಮಿ ದಾಂಪತ್ಯದಲ್ಲಿ ಬಿರುಕು ಮೂಡಿಸಿತ್ತು. ಈಗ ತನ್ನ ಸಂಬಂಧಕ್ಕೆ ಹೊಸ ಹೆಸರು ನೀಡಿರುವ ದರ್ಶನ್ ಪ್ರಕರಣದ ದಿಕ್ಕನ್ನೇ ಬೇರೆಡೆಗೆ ತಿರುಗಿಸಿರುವುದು ಸ್ಪಷ್ಟವಾಗಿದೆ. ರೇಣುಕಾಸ್ವಾಮಿ, ಪವಿತ್ರಾಗೆ ಅಶ್ಲೀಲ ಮಸೇಜ್ ಮಾಡಿದ್ದಕ್ಕೆ, ಆತನನ್ನು ಕಿಡ್ನ್ಯಾಪ್ ಮಾಡಿ ಹಲ್ಲೆ ನಡೆಸಿ ಕೊಲೆ ಮಾಡಲಾಗಿತ್ತು.
https://vijayaprabha.com/actor-pawan-kalyan-is-seriously-ill/