ಆರ್ಯರು-ದ್ರಾವಿಡರು ಎಂಬ ವಿಭಜನೆ ಆಂಗ್ಲರು ಮಾಡಿದ ಷಡ್ಯಂತ್ರ: ಆಚಾರ್ಯ ಬಾಲಕೃಷ್ಣ

ಉಡುಪಿ: ಭಾರತದಲ್ಲಿ ಆರ್ಯರು ಮತ್ತು ದ್ರಾವಿಡರು ಎಂಬ ವಿಭಜನೆ ಆಂಗ್ಲರು ಮಾಡಿದ ಷಡ್ಯಂತ್ರ. ಆರ್ಯರು ಭಾರತಕ್ಕೆ ವಲಸೆ ಬಂದವರು ಎಂಬುವುದು ಸುಳ್ಳು ಕತೆ, ಆರ್ಯರು ಮತ್ತು ದ್ರಾವಿಡರಿಬ್ಬರೂ ಭಾರತದ ಮೂಲನಿವಾಸಿಗಳು ಎಂಬುದೀಗ ಸಾಬೀತಾಗಿದೆ ಎಂದು…

ಉಡುಪಿ: ಭಾರತದಲ್ಲಿ ಆರ್ಯರು ಮತ್ತು ದ್ರಾವಿಡರು ಎಂಬ ವಿಭಜನೆ ಆಂಗ್ಲರು ಮಾಡಿದ ಷಡ್ಯಂತ್ರ. ಆರ್ಯರು ಭಾರತಕ್ಕೆ ವಲಸೆ ಬಂದವರು ಎಂಬುವುದು ಸುಳ್ಳು ಕತೆ, ಆರ್ಯರು ಮತ್ತು ದ್ರಾವಿಡರಿಬ್ಬರೂ ಭಾರತದ ಮೂಲನಿವಾಸಿಗಳು ಎಂಬುದೀಗ ಸಾಬೀತಾಗಿದೆ ಎಂದು ಹರಿದ್ವಾರದ ಪತಂಜಲಿ ವಿಶ್ವವಿದ್ಯಾಲಯದ ಉಪಕುಲಪತಿ ಆಚಾರ್ಯ ಬಾಲಕೃಷ್ಣ ಹೇಳಿದ್ದಾರೆ.

ಗುರುವಾರ ರಾಜಾಂಗಣದಲ್ಲಿ ನಡೆದ ಅಖಿಲ ಬಾರತೀಯ ಪ್ರಾಚ್ಯವಿದ್ಯಾ ಸಮ್ಮೇಳದ ಉದ್ಘಾಟನಾ ಸಮಾರಂಭದಲ್ಲಿ ಶಿಖರೋಪನ್ಯಾಸ ನೀಡಿದರು.

ಹೊರಗಿನಿಂದ ಭಾರತಕ್ಕೆ ವಲಸೆ ಬಂದವರಿಗಿಂತಲೂ ಹೆಚ್ಚು ಭಾರತೀಯರೇ ಹೊರಗೆ ಹೋಗಿರುವುದಕ್ಕೂ ಪುರಾವೆಗಳಿವೆ. ರಾಜ ಯಾಯತಿಯ ಮಗ ಪುರು ಈಜಿಪ್ಟ್‌ ದೇಶಕ್ಕೂ ಹೋಗಿದ್ದ, ಆತನ ಸ್ಮರಣಾರ್ಥವೇ ಅಲ್ಲಿನ ರಾಜವಂಶ ಫೇರೋ ಎಂದು ಕರೆಯಲ್ಪಟ್ಟಿತು ಎಂಬುದುಕ್ಕೂ ನಿದರ್ಶನಗಳು ಸಿಕ್ಕಿವೆ. ಬೇರೆ ದೇಶಗಳ ನಾಗರಿಕತೆಯಲ್ಲಿ ಇನ್ನೂ ಚಿತ್ರ ಲಿಪಿಯನ್ನು ಕಂಡು ಹಿಡಿಯುವಾಗ, ಭಾರತದಲ್ಲಿ ಅದಾಗಲೇ ವರ್ಣಲಿಪಿ ಬಳಕೆಯಲ್ಲಿತ್ತು ಎಂದು ಹೇಳಿದ್ದಾರೆ.

Vijayaprabha Mobile App free

ಆಂಗ್ಲರು ಸಂಸ್ಕೃತ ಭಾಷೆಯ ವಿರುದ್ಧವೂ ಷಡ್ಯಂತ್ರ ಹೂಡಿದ್ದರು. ನಮ್ಮ ದೇಶದ ಸಂಸ್ಕೃತಿಯ ಬೇರು ಇರುವುದೇ ಸಂಸ್ಕೃತ ಭಾಷೆಯಲ್ಲಿ. ಸಂಸ್ಕೃತಿ ಉಳಿಯಬೇಕಾದರೆ ಸಂಸ್ಕೃತ ಉಳಿಸಬೇಕು. ಅದಕ್ಕಾಗಿ ಮೊದಲು ನಮ್ಮ ದೇಶದ ಇತಿಹಾಸದ ಸಮಗ್ರ ಅಧ್ಯಯನ ನಡೆಯಬೇಕಾಗಿದೆ ಎಂದವರು ಒತ್ತಿ ಹೇಳಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.