ಹುಬ್ಬಳ್ಳಿ: ರಾಯಚೂರು ಮೂಲದ ರೈತರೊಬ್ಬರನ್ನು ಹನಿಟ್ರ್ಯಾಪ್ ಮಾಡಿದ್ದ ನಾಲ್ವರ ಗ್ಯಾಂಗ್‌ನ್ನು ಪೊಲೀಸರು ಬಂಧಿಸಿದ್ದಾರೆ.
ಧಾರವಾಡದವನೇ ಆದ ಆಕಾಶ ರವಿ ಉಪ್ಪಾರ, ರೇಣುಕಾ ಉರ್ಪ್ ರಿಯಾನಾ ಉಪ್ಪಾರ, ಗಜಾನಾಬಾನು ಉರ್ಪ್ ಅಂಜು ಹಾಗೂ ಮಲಿಕ್ ಜಾನ್ ನದಾಫ ಬಂಧಿತರು. ಇವರಿಂದ ಸ್ಕೋಡಾ ಕಾರು, ಆಭರಣ, ನಗದು ಸೇರಿದಂತೆ 14 ಲಕ್ಷ 73 ಸಾವಿರ ರೂ. ಮೌಲ್ಯದ ವಸ್ತುಗಳನ್ನು ಜಪ್ತಿಪಡಿಸಿಕೊಳ್ಳಲಾಗಿದೆ.
ಈ ತಂಡ ಮಹಿಳೆಯರನ್ನು ಬಿಟ್ಟು ಸಲಿಗೆ ಬೆಳೆಸಿ, ಅವರನ್ನು ತಮ್ಮ ಮನೆಗೆ ಕರೆಸಿ ಅವರೊಂದಿಗಿನ ಅಶ್ಲೀಲ ವಿಡಿಯೋ ಮಾಡಿಕೊಳ್ಳುತ್ತಿದ್ದರು. ನಂತರ ಪೊಲೀಸರಂತೆ ದಾಳಿ ನಡೆಸಿ ಹಣ ಸುಲಿಗೆ ಮಾಡುತ್ತಿದ್ದರು. ಸದ್ಯ ಈ ತಂಡ ವಿದ್ಯಾಗಿರಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.