ಕೆಎಸ್ಆರ್‌ಟಿಸಿಗೆ 20 ಹೊಸ ಐರಾವತಗಳು: ವೋಲ್ವೋ ಕ್ಲಬ್‌ ಕ್ಲಾಸ್‌ನ ಬಸ್‌ಗೆ ಸಿಎಂ ಚಾಲನೆ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಐಷಾರಾಮಿ ಬಸ್‌ಗಳ ಸೇವೆ ಮತ್ತಷ್ಟು ಹೈಟೆಕ್‌ ಆಗಿದ್ದು, ಬುಧವಾರ ವೋಲ್ವೋ ಕ್ಲಬ್‌ ಕ್ಲಾಸ್‌- 2.0 ಶ್ರೇಣಿಯ ಅತ್ಯಾಧುನಿಕ 20 ಬಸ್‌ಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು…

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಐಷಾರಾಮಿ ಬಸ್‌ಗಳ ಸೇವೆ ಮತ್ತಷ್ಟು ಹೈಟೆಕ್‌ ಆಗಿದ್ದು, ಬುಧವಾರ ವೋಲ್ವೋ ಕ್ಲಬ್‌ ಕ್ಲಾಸ್‌- 2.0 ಶ್ರೇಣಿಯ ಅತ್ಯಾಧುನಿಕ 20 ಬಸ್‌ಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಆವರಣದಲ್ಲಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ಈಗಾಗಲೇ ಕೆಎಸ್ಆರ್‌ಟಿಸಿಯು 443 ಐಷಾರಾಮಿ ಬಸ್‌ಗಳನ್ನು ಹೊಂದಿದ್ದು, ತಲಾ ₹1.78 ಕೋಟಿ ಮೌಲ್ಯದ 20 ಐರಾವತ ಕ್ಲಬ್‌ ಕ್ಲಾಸ್‌ 2.0 ಮಾದರಿ ಬಸ್‌ಗಳು ಸೇರ್ಪಡೆಯಾಗಿವೆ.

ವಿಧಾನಸೌಧದ ಭವ್ಯ ಮೆಟ್ಟಿಲು ಎದುರು ಬಸ್‌ಗಳಿಗೆ ಚಾಲನೆ ನೀಡಿದ ಅವರು, ನಂತರ ಖುದ್ದಾಗಿ ಬಸ್ ಪರಿವೀಕ್ಷಣೆ ಮಾಡಿದರು. ಬಸ್ನ ಒಳಗೆ ಕುಳಿತು ವಾಹನದ ವಿಶೇಷತೆಗಳನ್ನು ಅವಲೋಕಿಸಿದರು. ಈ ವೇಳೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮುಖ್ಯಮಂತ್ರಿಗಳಿಗೆ ಸಾಥ್‌ ನೀಡಿದರು.ಈ ವೇಳೆ ಇಬ್ಬರು ಸಿಬ್ಬಂದಿ ಅವಲಂಬಿತರಿಗೆ ಸಾರಿಗೆ ಸುರಕ್ಷಾ ಪರಿಹಾರ ವಿಮಾ ಯೋಜನಡಿ ತಲಾ ₹1 ಕೋಟಿ ಪರಿಹಾರ ಚೆಕ್‌ ಹಾಗೂ ಅಪಘಾತ ಹೊರತುಪಡಿಸಿ ಖಾಯಿಲೆ ಇತ್ಯಾದಿ ಕಾರಣಗಳಿಂದ ಮೃತರಾದ ₹5 ಸಿಬ್ಬಂದಿ ಅವಲಂಬಿತರಿಗೆ ಕುಟುಂಬ ಕಲ್ಯಾಣ ಯೋಜನೆ ಅಡಿ ತಲಾ ₹10 ಲಕ್ಷ ಪರಿಹಾರ ಚೆಕ್‌ಅನ್ನು ಮುಖ್ಯಮಂತ್ರಿಗಳು ವಿತರಿಸಿದರು.

Vijayaprabha Mobile App free

ಬೆಂಕಿ ನಂದಿಸಲು ನೀರು:

ಬಸ್‌ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದು, ಅಗ್ನಿ ಅನಾಹುತ ಸಮಯದಲ್ಲಿ ಎಚ್ಚರಿಸುವ ಫೈರ್ ಅಲಾರ್ಮ್ ಮತ್ತು ಪ್ರೊಟೆಕ್ಷನ್ ಸಿಸ್ಟಮ್ ಅಳವಡಿಸಲಾಗಿದೆ. ಬಸ್ಸಿನ ಒಳಗೆ ಪ್ರಯಾಣಿಕರ ಆಸನದ ಎರಡೂ ಬದಿಯಲ್ಲಿ ನೀರಿನ ಪೈಪ್ಗಳಿದ್ದು, ಒಂದು ಬಟನ್‌ ಒತ್ತಿದರೆ 30 ಕಡೆ ನೀರು ಸಿಂಪಡಣೆಯಾಗಿ ಬೆಂಕಿ ಅನಾಹುತ ತಡೆಯಲು ಅಥವಾ ಹಾನಿ ಪ್ರಮಾಣ ಕಡಿಮೆ ಮಾಡಲು ನೆರವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಐರಾವತ ವಿಶೇಷತೆಗಳು:

ವಿಶಾಲ ಲಗೇಜ್ ಸ್ಥಳಾವಕಾಶವಿದ್ದು, ಹಳೆಯ ಮಾದರಿ ಬಸ್ಗಳಿಗೆ ಹೋಲಿಸಿದ್ದಲ್ಲಿ ಶೇ.20ರಷ್ಟು ಹೆಚ್ಚಿನ ಲಗೇಜ್ ಸ್ಥಳಾವಕಾಶವಿದೆ. USB + C ಟೈಪ್ನಂತಹ ಹೊಸ ಜನರೇಷನ್ ಮೊಬೈಲ್ ಚಾರ್ಜಿಂಗ್ ಪಾಯಿಂಟ್‌, ವಿಶಾಲವಾದ ಎ.ಸಿ. ಡಕ್ಟ್‌, ಫಾಗ್‌ ಲೈಟ್ ಒಳಗೊಂಡಿರುವುದರಿಂದ ರಾತ್ರಿ ವೇಳೆಯಲ್ಲಿ ಹೆಚ್ಚಿನ ಸುರಕ್ಷತೆ ಇರುತ್ತದೆ.

ಇನ್ನು ಶಕ್ತಿಶಾಲಿ ಹ್ಯಾಲೊಜೆನ್ ಹೆಡ್‌ಲೈಟ್‌ಗಳು, ಡೇ ರನ್ನಿಂಗ್ ಲೈಟ್‌ (DRL), ಫ್ಲಶ್ ಇಂಟೀರಿಯರ್ಸ್, ಬಾಹ್ಯ ಸ್ಕ್ಯಾಂಡಿನೇವಿಯನ್ ವಿನ್ಯಾಸವಿದೆ. ಏರೋಡೈನಾಮಿಕ್‌ ವಿನ್ಯಾಸದಿಂದ ಉತ್ತಮ ಇಂಧನ ದಕ್ಷತೆ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.