ಮನೆಯಲ್ಲಿ ಸಾಕಿದ್ದ ನಾಯಿ ಕಚ್ಚಿದ ಪರಿಣಾಮ ಒಂದು ತಿಂಗಳ ಮಗು ಸಾವನ್ನಪ್ಪಿರುವ ಘಟನೆಯು ಅಮೆರಿಕಾದ ಕ್ಯಾಲಿಫೋರ್ನಿಯಾದ ಟೊರೆನ್ಸ್‌ನಲ್ಲಿ ನಡೆದಿದೆ.
ಮಾರ್ಥಾ ಅವೆನ್ಯೂನಲ್ಲಿರುವ ಮನೆಯಲ್ಲಿ ಈ ಘಟನೆ ನಡೆದಿದೆ. ಕುಟುಂಬ ಹಲವು ನಾಯಿಗಳನ್ನು ಸಾಕಿದ್ದು, ಅದರಲ್ಲಿ ಒಂದು ನಾಯಿ ಚಿಕ್ಕ ಮಗುವನ್ನ ಕಚ್ಚಿದೆ. ಮಗುವಿನ ಸುರಕ್ಷತೆಗೆ ಹೆಚ್ಚಿನ ಗಮನ ಇರಿಸದ ಕಾರಣ 1 ತಿಂಗಳ ಮಗುವನ್ನು ಗಾಯಗೊಳಿಸಿದ ನಾಯಿ ಅದರ ಸಾವಿಗೆ ಕಾರಣವಾಗಿದೆ.
ಮಗುವನ್ನು ಉಳಿಸುವ ಪ್ರಯತ್ನದ ಭಾಗವಾಗಿ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಪೊಲೀಸರು ಪೋಷಕರ ನಿರ್ಲಕ್ಷ್ಯತನದ ಕುರಿತು ತನಿಖೆ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.