ಗೃಹಿಣಿಯರಿಗೆ ಗುಡ್ ನ್ಯೂಸ್: 2 ತಿಂಗಳ ‘ಗೃಹಲಕ್ಷ್ಮಿ’ ಹಣ ಇಂದೇ ಖಾತೆಗೆ ಜಮಾ

ಬೆಂಗಳೂರು : ಎರಡು ತಿಂಗಳುಗಳಿಂದ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಸರ್ಕಾರ ಮಹಿಳೆಯರ ಖಾತೆಗೆ ವರ್ಗಾವಣೆ ಮಾಡಿಲ್ಲ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಇಂದು ಎಲ್ಲಾ ತಾಂತ್ರಿಕ ದೋಷಗಳನ್ನು ಸರಿಪಡಿಸಿಕೊಂಡು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ…

ಬೆಂಗಳೂರು : ಎರಡು ತಿಂಗಳುಗಳಿಂದ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಸರ್ಕಾರ ಮಹಿಳೆಯರ ಖಾತೆಗೆ ವರ್ಗಾವಣೆ ಮಾಡಿಲ್ಲ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಇಂದು ಎಲ್ಲಾ ತಾಂತ್ರಿಕ ದೋಷಗಳನ್ನು ಸರಿಪಡಿಸಿಕೊಂಡು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿ ಅವರ ಖಾತೆಗೆ ಇಂದು ವರ್ಗಾಯಿಸಲಾಗುತ್ತಿದೆ.

ಹೌದು ಗೃಹಲಕ್ಷ್ಮಿ ಹಣ ಖಾತೆಗೆ ಸೇರಲು ಯಾಕೆ ವಿಳಂಬ ವಾಗುತ್ತಿದೆ ಎನ್ನುವುದರ ಕುರಿತು ಕೆಲವು ದಿನಗಳ ಹಿಂದೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿದ್ದು, ತಿಂಗಳಿಗೆ 2,400 ಕೋಟಿ ರೂ. ಖರ್ಚಾಗುತ್ತಿದೆ. ಮಂಡ್ಯದಲ್ಲಿ ಡಿಪಿಟಿಗೆ ಪುಷ್ ಮಾಡಿ ಮೂರು ದಿನಗಳಾದವು. ಇನ್ನೂ ನಾಲ್ಕೈದು ಜಿಲ್ಲೆಗಳಿಗೆ ಯೋಜನೆಯ ಹಣ ದೊರೆಯಬೇಕಿದೆ. ಬ್ಯಾಂಕ್​​​ಗಳಿಗೆ ಹಣ ಕಳುಹಿಸಿರುತ್ತೇವೆ. ಸ್ಥಳೀಯ ಮಟ್ಟವಾಗಿ ಯಜಮಾನಿಯರ ಖಾತೆಗೆ ವರ್ಗಾವಣೆಯಾಗಬೇಕು. ದೊಡ್ಡ ಮೊತ್ತದ ಹಣ ಆಗಿರುವ ಕಾರಣ ವಿಳಂಬ ಆಗುತ್ತಿರುತ್ತದೆ ಎಂದರು.

ಜೂನ್ ತಿಂಗಳ ಹಣ ವರ್ಗಾವಣೆಯಾಗಿದೆ. ಜುಲೈ ತಿಂಗಳ ಹಣ ಇನ್ನೆರಡು ದಿನಗಳಲ್ಲಿ ಖಾತೆಗಳಿಗೆ ವರ್ಗಾವಣೆಯಾಗಲಿದೆ. ಆಗಸ್ಟ್ ತಿಂಗಳ ಹಣ ಕೂಡ ಯಜಮಾನಿಯರ ಖಾತೆಗೆ ವರ್ಗಾವಣೆ ಮಾಡುತ್ತೇವೆ. ವಿಳಂಬ ಆಗಬಾರದು ಎಂಬುದು ನಮ್ಮ ಚಿಂತನೆ. ಒಂದು‌ ದಿನಕ್ಕೆ ನನಗೆ 500 ಕರೆಗಳು ಬರುತ್ತವೆ. ಮಂತ್ರಿಯಾಗಿ ಎಲ್ಲ ಕರೆಗಳಿಗೂ ನಾನು ಉತ್ತರ ನೀಡುತ್ತಿದ್ದೇನೆ ಎಂದು ಅವರು ತಿಳಿಸಿದರು.

Vijayaprabha Mobile App free

ಇದೀಗ ತಾಂತ್ರಿಕ ದೋಷಗಳೆಲ್ಲವೂ ಬಗೆಹರಿದಿದ್ದು, ಇಂದೇ ಮಹಿಳೆಯರಿಗೆ ಅವರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಎರಡು ತಿಂಗಳ ಒಟ್ಟು 4 ಸಾವಿರ ಹಣ ಅವರ ಖಾತೆಗೆ ಜಮೆ ಮಾಡಲಾಗುತ್ತಿದೆ. ಹಾಗಾಗಿ 2000 ನಿರೀಕ್ಷೆಯಲ್ಲಿದ್ದ ಮಹಿಳೆಯರು ಸದ್ಯ ನಿಟ್ಟುಸಿರು ಬಿಡುವಂತಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.