ಥೈರಾಯ್ಡ್ ಸಮಸ್ಯೆಗೆ ಮುಖ್ಯ ಕಾರಣವೇನು? ಪರೀಕ್ಷಿಸುವುದು ಹೇಗೆ? ಥೈರಾಯ್ಡ್ ಲಕ್ಷಣಗಳು ಮತ್ತು ನೈಸರ್ಗಿಕ ಆಹಾರಗಳ ಬಗ್ಗೆ ತಿಳಿದುಕೊಳ್ಳಿ

ಥೈರಾಯ್ ಜಾಗೃತಿ ಥೈರಾಯ್ಡ್ ಆರೋಗ್ಯವನ್ನು ಸುಧಾರಿಸಲು ನೈಸರ್ಗಿಕ ಆಹಾರಗಳು:- ಥೈರಾಯ್ಡ್ ಆರೋಗ್ಯದ ಪ್ರಾಮುಖ್ಯತೆ:- ಥೈರಾಯ್ಡ್ ನಮ್ಮ ದೇಹದ ಅನೇಕ ಪ್ರಮುಖ ಕಾರ್ಯಗಳನ್ನು ನಿಯಂತ್ರಿಸಲು ಸಹಾಯ ಮಾಡುವ ಹಾರ್ಮೋನುಗಳನ್ನು ಉತ್ಪತ್ತಿ ಮಾಡುತ್ತದೆ. ಥೈರಾಯ್ಡ್ ಸರಿಯಾಗಿ ಕೆಲಸ…

ಥೈರಾಯ್ ಜಾಗೃತಿ ಥೈರಾಯ್ಡ್ ಆರೋಗ್ಯವನ್ನು ಸುಧಾರಿಸಲು ನೈಸರ್ಗಿಕ ಆಹಾರಗಳು:-

ಥೈರಾಯ್ಡ್ ಆರೋಗ್ಯದ ಪ್ರಾಮುಖ್ಯತೆ:- ಥೈರಾಯ್ಡ್ ನಮ್ಮ ದೇಹದ ಅನೇಕ ಪ್ರಮುಖ ಕಾರ್ಯಗಳನ್ನು ನಿಯಂತ್ರಿಸಲು ಸಹಾಯ ಮಾಡುವ ಹಾರ್ಮೋನುಗಳನ್ನು ಉತ್ಪತ್ತಿ ಮಾಡುತ್ತದೆ. ಥೈರಾಯ್ಡ್ ಸರಿಯಾಗಿ ಕೆಲಸ ಮಾಡದಿದ್ದರೆ, ಅದು ನಮ್ಮ ಇಡೀ ದೇಹದ ಮೇಲೆ ಪರಿಣಾಮ ನೀರಬಹುದು.

ಥೈರಾಯ್ಡ್ ಗ್ರಂಥಿಯಿಂದ ಉತ್ಪತ್ತಿಯಾಗುವ ಥೈರಾಕ್ಸಿನ್ (ಟೆ4) ಮತ್ತು ಟ್ರೈಯೋಡೋಥೈರೋನೈನ್ (33) ನಮ್ಮ ದೇಹವು ಕೊಬ್ಬು ಮತ್ತು ಕಾರ್ಬೋಹೈಡ್ರೆಟ್‌ಗಳನ್ನು ಬಳಸುವ ಪ್ರಮಾಣವನ್ನು ನಿರ್ವಹಿಸುತ್ತದೆ ದೇಹದ ಉಷ್ಣತೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹೃದಯ ಬಡಿತದ ಮೇಲೆ ಪ್ರಭಾವ ಬೀರುತ್ತದೆ ಹಾಗೂ ಪ್ರೋಟೀನ್ ಉತ್ಪಾದನೆಯನ್ನು ನಿಯಂತ್ರಿಸಲು ಕೂಡ ಸಹಾಯ ಮಾಡುತ್ತದೆ.

Vijayaprabha Mobile App free

ಥೈರಾಯ್ಡ್ ಸಮಸ್ಯೆಗೆ ಮುಖ್ಯ ಕಾರಣವೇನು?:

ಅಯೋಡಿನ್ ಕೊರತೆಯಿಂದ ಥೈರಾಯ್ಡ್ ಸಮಸ್ಯೆಗಳು ಉಂಟಾಗಬಹುದು. ಸಾಂದರ್ಭಿಕವಾಗಿ, ಗರ್ಭಾವಸ್ಥೆಯು ಥೈರಾಯ್ಡ್ ಸಮಸ್ಯೆಗಳ ಆರಂಭ ಅಥವಾ ಉಲ್ಬಣಕ್ಕೆ ಕಾರಣವಾಗಬಹುದು. ದೇಹವು ಹೆಚ್ಚು ಥೈರಾಯ್ ಹಾರ್ಮೋನ್ ಅನ್ನು ಉತ್ಪಾದಿಸಿದರೆ, ಹೈಪರ್ ಥೈರಾಯ್ದಿಸಮ್ ಸಮಸ್ಯೆ ಎದುರಾಗುವ ಸಾಧ್ಯತೆಗಳಿರುತ್ತವೆ.

ಈ ರೋಗವು ಆನುವಂಶಿಕವಾಗಿದ್ದು, ಪುರುಷರು ಅಥವಾ ಮಹಿಳೆಯರಲ್ಲಿ ಯಾವುದೇ ವಯಸ್ಸಿನಲ್ಲಿ ಕಾಣಿಸಿಕೊಳ್ಳಬಹುದು. ಸಾಮಾನ್ಯವಾಗಿ ಇದು 20ರಿಂದ 30 ವರ್ಷದೊಳಗಿನ ಮಹಿಳೆಯರಲ್ಲಿ ಹೆಚ್ಚು ಕಂಡುಬರುತ್ತದೆ.

ಥೈರಾಯ್ಡ್ ಸಮಸ್ಯೆಯ ಆರಂಭಿಕ ಲಕ್ಷಣಗಳು:-

ಆಯಾಸ

ತೂಕದಲ್ಲಿ ಹಠಾತ್ ನಷ್ಟ / ಹೆಚ್ಚಳ

ನಿದ್ರೆ ಸಮಸ್ಯೆ

ಥೈರಾಯ್ಡ್ ಹೆಚ್ಚಳ

ಸ್ನಾಯು ದೌರ್ಬಲ್ಯ

ಹೆಚ್ಚು ಶೀತದ ಸಮಸ್ಯೆ

ಮನೆಯಲ್ಲೇ ಥೈರಾಯ್ಡ್ ಪರೀಕ್ಷಿಸುವುದು ಹೇಗೆ?:

ಕೈಯಲ್ಲಿ ಕನ್ನಡಿಯನ್ನು ಹಿಡಿದುಕೊಂಡು ನಿಮ್ಮ ಕುತ್ತಿಗೆಯ ಕೆಳಗೆ ಕಾಲರ್‌ಬೋನ್ ಮತ್ತು ಧ್ವನಿ ಪೆಟ್ಟಿಗೆಯ ಕೆಳಗೆ(ಲಾರೆಂಕ್ಸ್) ಗಮನಿಸಿ. ಈಗ ನಿಮ್ಮ ತಲೆಯನ್ನು ಸ್ವಲ್ಪ ಹಿಂದಕ್ಕೆ ಬಾಗಿಸಿ, ನೀರು ಕುಡಿಯಿರಿ. ನೀರು ನುಂಗುವಾಗ, ಕುತ್ತಿಗೆಯನ್ನು ನೋಡಿ. ಈ ವೇಳೆ ಉಬ್ಬು ಕಂಡುಬರುತ್ತಿದೆಯೇ ಎಂದು ಪರಿಶೀಲಿಸಿ. ಉಬ್ಬು ಕಂಡುಬಂದಲ್ಲಿ ವೈದ್ಯರನ್ನು ಭೇಟಿ ಮಾಡುವುದು ಉತ್ತಮ.

ನೆಲ್ಲಿಕಾಯಿ:- ನೆಲ್ಲಿಕಾಯಿಯು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಮತ್ತು ಥೈರಾಯ್ಡ್ ಸಮಸ್ಯೆಗಳ ವಿರುದ್ಧ ಹೋರಾಡುವಲ್ಲಿ ಬಹಳ ಪರಿಣಾಮಕಾರಿಯಾಗಿದೆ. ನೆಲ್ಲಿಕಾಯಿಯಲ್ಲಿ ಕಿತ್ತಳಗಿಂತ ಎಂಟು ಪಟ್ಟು ಹೆಚ್ಚು ವಿಟಮಿನ್ ಸಿ ಮತ್ತು ದಾಳಿಂಬೆಗಿಂತ ಸುಮಾರು 17 ಪಟ್ಟು ಹೆಚ್ಚು ವಿಟಮಿನ್ ಸಿ ಇರುತ್ತದೆ.

ಇದು ಕೂದಲಿಗೆ ಅತ್ಯುತ್ತಮ ಟಾನಿಕ್ ಆಗಿದೆ. ಇದು ತಲೆಹೊಟ್ಟನ್ನು ದೂರಗೊಳಿಸುತ್ತದೆ, ಕೂದಲಿನ ಕಿರುಚೀಲಗಳನ್ನು ಬಲಪಡಿಸುತ್ತದೆ ಮತ್ತು ನೆತ್ತಿಯ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಕೂದಲಿನ ಬೆಳವಣಿಗೆ ಸುಧಾರಿಸುತ್ತದೆ.

ತೆಂಗಿನ ಕಾಯಿ:- ಥೈರಾಯ್ಡ್ ರೋಗಿಗಳಿಗೆ ತೆಂಗಿನಕಾಯಿ ಅತ್ಯುತ್ತಮ ಆಹಾರಗಳಲ್ಲೊಂದಾಗಿದೆ. ಇದು ಚಯಾಪಚಯವನ್ನು ಸುಧಾರಿಸುತ್ತದೆ. ತೆಂಗಿನಕಾಯಿಯಲ್ಲಿ MCFA ಗಳು ಅಂದರೆ, ಮಧ್ಯಮ ಸರಪಳಿ ಕೊಬ್ಬಿನಾಮ್ಲಗಳು ಮತ್ತು MTC ಗಳು ಅಂದರೆ ಮಧ್ಯಮ ಸರಪಳಿ ಟ್ರೈಗ್ಲಿಸರೈಡ್‌ಗಳು ಹೇರಳವಾಗಿದ್ದು, ಇವು ಚಯಾಪಚಯವನ್ನು ಸುಧಾರಿಸಲು ಸಹಾಯ ಮಾಡುತ್ತವೆ.

ಕುಂಬಳಕಾಯಿ ಬೀಜಗಳು:- ಕುಂಬಳಕಾಯಿ ಬೀಜಗಳು ಸತುವಿನ ಸಮೃದ್ಧ ಮೂಲವಾಗಿದ್ದು, ಇದು ದೇಹದಲ್ಲಿನ ಇತರ ಜೀವಸತ್ವಗಳು ಮತ್ತು ಖನಿಜಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತವೆ. ಅಲ್ಲದೆ, ದೇಹದಲ್ಲಿ ಥೈರಾಯ್ಡ್ ಹಾರ್ಮೋನುಗಳ ಸಂಶ್ಲೇಷಣೆ ಮತ್ತು ಸಮತೋಲನವನ್ನು ಉತ್ತೇಜಿಸುತ್ತವೆ.

ಬ್ರೆಜಿಲ್ ಬೀಜಗಳು:- ಸೆಲೆನಿಯಮ್ ಎಂಬುದು ದೇಹದ ಥೈರಾಯ್ಡ್ ಹಾರ್ಮೋನುಗಳ ಚಯಾಪಚಯ ಕ್ರಿಯೆಗೆ ಅಗತ್ಯವಿರುವ ಸೂಕ್ಷ್ಮ ಪೋಷಕಾಂಶವಾಗಿದೆ. 14 ಅನ್ನು 13 ಗೆ ಪರಿವರ್ತಿಸಲು ಸೆಲೆನಿಯಮ್ ಅಗತ್ಯವಿರುತ್ತದೆ. ಬ್ರೆಜಿಲ್ ಬೀಜಗಳು ಈ ಪೋಷಕಾಂಶದ ಅತ್ಯುತ್ತಮ ನೈಸರ್ಗಿಕ ಮೂಲಗಳಲ್ಲೊಂದಾಗಿದೆ.

ಶಕ್ತಿಯುತವಾದ ಉತ್ಕರ್ಷಣ ನಿರೋಧಕ ಮತ್ತು ಥೈರಾಯ್ಡ್ ಖನಿಜದ ಆರೋಗ್ಯಕರ ಪ್ರಮಾಣ ಪಡೆಯಲು ದಿನಕ್ಕೆ ಮೂರು ಬ್ರೆಜಿಲ್ ಬೀಜಗಳನ್ನು ಸೇವಿಸಿದರೆ ಸಾಕು.

ಹೆಸರು ಕಾಳು:- ಹೆಸರು ಕಾಳುಗಳಲ್ಲಿ ಪ್ರೋಟೀನ್, ಆಂಟಿಆಕ್ಸಿಡೆಂಟ್‌ಗಳು, ಕಾಂಪ್ಲೆಕ್ಸ್ ಕಾರ್ಬೋಹೈಡ್ರೆಟ್‌ಗಳು, ವಿಟಮಿನ್‌ಗಳು ಮತ್ತು ಖನಿಜಾಂಶಗಳು ಹೇರಳವಾಗಿರುತ್ತವೆ. ಫೈಬರ್‌ನಿಂದ ಕೂಡಿದ ಹೆಸರುಕಾಳು ಸೇವನೆ ಮಲಬದ್ಧತೆಯಿಂದ ಬಳಲುತ್ತಿದ್ದವರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಮಲಬದ್ಧತೆಯು ಥೈರಾಯ್ಡ್ ಅಸಮತೋಲನದ ಸಾಮಾನ್ಯ ಲಕ್ಷಣವಾಗಿದೆ.

ಹೆಸರು ಕಾಳು ಅಯೋಡಿನ್ ಅನ್ನು ಒದಗಿಸುತ್ತದೆ ಮತ್ತು ಜೀರ್ಣಿಸಿಕೊಳ್ಳಲು ಸುಲಭವಾಗಿದೆ. ಹಾಗಾಗಿ, ಇದು ಥೈರಾಯ್ಡ್ ಸ್ನೇಹಿ ಆಹಾರಗಳಲ್ಲಿ ಅತ್ಯುತ್ತಮವಾಗಿದೆ.

ಕೇಸರಿ:- ರಾತ್ರಿ ನೆನೆಸಿಟ್ಟ ಕೇಸರಿಯನ್ನು ಬೆಳಿಗ್ಗೆ ಎದ್ದ ನಂತರ ಸೇವಿಸಿದರೆ ಥೈರಾಯ್ಡ್ ಸಮಸ್ಯೆ ಇರುವವರ ಮೂಡ್ ಬದಲಾವಣೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು. ಇದು ಕಿಬ್ಬೊಟ್ಟೆಯ ಸೆಳೆತ ಅಥವಾ PMS ನಿಂದ ಪರಿಹಾರವನ್ನು ನೀಡುತ್ತದೆ. ಇದು ಸ್ಫೂಲಕಾಯತೆಯ ವಿರುದ್ಧದ ಸೂಪರ್‌ಫುಡ್ ಆಗಿದೆ.

ಮಲಗುವ ಮುನ್ನ ಒಂದು ಲೋಟ ಕೇಸರಿ ಹಾಲನ್ನು ಸೇವಿಸಿದರೆ ಕ್ಯಾಲ್ಸಿಯಂ ಮತ್ತು ಪ್ರೋಟೀನ್‌ನ ಉತ್ತಮ ಪ್ರಮಾಣವನ್ನು ನೀಡುತ್ತದೆ.

ಬಾಳೆಹಣ್ಣು ಮತ್ತು ಹುರುಳಿಕಾಳು:- ಬಾಳೆಹಣ್ಣು ಅಯೋಡಿನ್‌ನ ನೈಸರ್ಗಿಕ ಶ್ರೀಮಂತ ಮೂಲವಾಗಿದ್ದು, ಇದು ದೇಹದಲ್ಲಿ T4 ಅನ್ನು 13 ಗೆ ಸಕ್ರಿಯಗೊಳಿಸಲು ಮತ್ತು ಪರಿವರ್ತಿಸಲು ಅವಶ್ಯಕವಾಗಿದೆ.

ಹುರುಳಿಕಾಳು ಪ್ರೋಟೀನ್, ಕಬ್ಬಿಣ, ಸತುವಿನ ಸಮೃದ್ಧ ಮೂಲವಾಗಿದ್ದು, ಇದು TSH ಅನ್ನು ಉತ್ಪಾದಿಸಲು ನಿಷ್ಕ್ರಿಯ T4 ಅನ್ನು ಸಕ್ರಿಯ T3 ಆಗಿ ನೈಸರ್ಗಿಕವಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ. ಇದು ಥೈರಾಯ್ ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.

ಥೈರಾಯ್ಡ್ ಸಮಸ್ಯೆ ಹೆಚ್ಚಿದ್ದರೆ ಈ ಆಹಾರಗಳನ್ನು ಸೇವಿಸಬಾರದು:-

ಅಯೋಡಿಕರಿಸಿದ ಉಪ್ಪು

ಮೀನು ಮತ್ತು ಕಪ್ಪೆ ಚಿಪ್ಪು

ಹಾಲಿನ ಉತ್ಪನ್ನಗಳು

ಮೊಟ್ಟೆಯ ಹಳದಿ ಭಾಗ

ಹುರಿದ ಪದಾರ್ಥಗಳು

ಕಾಕಂಬಿ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.