ಬಾಯಿಯ ಆರೋಗ್ಯದಲ್ಲಿ ಸಮಸ್ಯೆ ಕಾಣಬಹುದು:
* ದೀರ್ಘಕಾಲ ಮಾಸ್ಕ್ ಅನ್ನು ಧರಿಸುವವರಿಗೆ ಬಾಯಿಯ ಆರೋಗ್ಯದಲ್ಲಿ ಸಮಸ್ಯೆ ಕಾಣಬಹುದು ಎನ್ನಲಾಗಿದೆ. ಆದರೆ ಕರೋನ ಹಿನ್ನಲೆ, ಮಾಸ್ಕ್ ಧರಿಸುವುದು ಅನಿವಾರ್ಯವಾಗಿದ್ದು, ದೀರ್ಘಾವಧಿ ಮಾಸ್ಕ್ ಧರಿಸುವುದರಿಂದ ನಿರ್ಜಲೀಕರಣ, ಬಾಯಿ ಒಣಗುವಿಕೆ ಸಮಸ್ಯೆಯಾಗಬಹುದು.
* ಹೆಚ್ಚು ಅವಧಿ ಮಾಸ್ಕ್ ಧರಿಸುವುದು ಬಾಯಿಯ ಶುಷ್ಕತೆಗೆ ಕಾರಣವಾಗಿ ಬಾಯಿಯಲ್ಲಿನ ಸೂಕ್ಷ್ಮಜೀವಿಗಳ ಹೆಚ್ಚಳಕ್ಕೆ ಕಾರಣವಾಗಿ ಬಾಯಿಯ ದುರ್ವಾಸನೆ ಸಮಸ್ಯೆಯಾಗುತ್ತದೆ.
* ದೀರ್ಘಾವಧಿ ಮಾಸ್ಕ್ ಧರಿಸುವುದರಿಂದ ಬಾಯಿಯ ದುರ್ವಾಸನೆಯಿಂದ ಬಾಯಿಯ ಆರೋಗ್ಯ ಸಮಸ್ಯೆಗಳಾದ ಹುಳುಕು ಹಲ್ಲು, ಒಸಡಿನ ತೊಂದರೆಯಾಗಬಹುದು.
* ಇನ್ನು, ಸರಿಯಾಗಿ ಶುಚಿಗೊಳಿಸದೆ, ತೊಳೆಯದ ಹಾಗು ಬಳಸಿದ ಮಾಸ್ಕ್ ಅನ್ನೇ ದೀರ್ಘಾವಧಿವರೆಗೆ ಬಳಸುವುದರಿಂದ ಬ್ಲಾಕ್ ಫಂಗಸ್, ವೈಟ್ ಫಂಗಸ್ ನಂತಹ ರೋಗಕ್ಕೆ ತುತ್ತಾಗಬಹುದು.