ವೈವಿಧ್ಯಮಯ ಆಹಾರದಲ್ಲಿ ಉತ್ತಮ ಪರಿಮಳ ಮತ್ತು ಒಳ್ಳೆಯ ರುಚಿಗಾಗಿ ಬಳಸುವ ಪುಟ್ಟಗಿಡ. ಬೇರು ಅಥವಾ ಬಲಿತ ಕಾಂಡಗಳಿಂದ ಗಿಡವನ್ನು ಬೆಳೆಸಬಹುದು. ಹೆಚ್ಚು ಮರಳಿರುವ ಮಣ್ಣಿನಲ್ಲಿ ನೀರಿನಾಸರೆಯಿರುವ ಜಾಗದಲ್ಲಿ ಬೆಳೆಯುತ್ತದೆ. ಬೇರು ಅಥವಾ ಕಾಂಡ ನೆಟ್ಟು ಒಂದೆರಡು ತಿಂಗಳಲ್ಲಿ ಎಲೆಗಳನ್ನು ಬಳಸಲು ಯೋಗ್ಯ. ಎಲೆಗಳಲ್ಲಿ ಆರಿ ಹೋಗುವ ತೈಲವಿದ್ದು ಪುದೀನದ ಸುವಾಸನೆಗೆ ಈ ತೈಲವೇ ಕಾರಣ.
ಅತ್ಯಂತ ಪ್ರಾಚೀನ ಕಾಲದಿಂದ ಅಡುಗೆ ಮನೆಯಲ್ಲಿ ಬಳಸುವ ಈ ಸಸ್ಯ ಗ್ರೀಕ್ ರೋಮನ್ನರ ಪುರಾಣಗಳಲ್ಲಿ ಗಿಡವಾಗಿದೆ. ಪುದೀನಾ ಸೊಪ್ಪು ದುರ್ಗಂಧ ನಿವಾರಕ, ದಂತರಕ್ಷಕ, ಹಸಿವನ್ನು ಹೆಚ್ಚಿಸುತ್ತದೆ. ಹೊಟ್ಟೆ ನೋವನ್ನು ಶಮನ ಮಾಡಿ ಮಲಬದ್ಧತೆಯನ್ನು ನಿವಾರಿಸುತ್ತದೆ.
ಪುದೀನಾ ಸೊಪ್ಪಿನ ಉಪಯೋಗಗಳು
1. ಊಟವಾದ ನಂತರ ಎರಡು ದಳ ಪುದೀನಾವನ್ನು ಅಗಿದು ತಿನ್ನುವುದರಿಂದ ಹಲ್ಲು ಗಳ ಮೇಲೆ ಕ್ರಿಮಿ ಸಂಚಯ ವಾಗುವುದಿಲ್ಲ ಅದರಿಂದ ಶ್ವಾಸದ ದುರ್ಗಂಧವೂ ಮಾಯವಾಗು
2. ಕೆಮ್ಮು-ನೆಗಡಿ ಆದಾಗ ಪುದೀನಾ ಸೊಪ್ಪಿನ ಟೀ ಮಾಡಿ ಕುಡಿಯಬಹುದು. ಪುದೀನಾದಲ್ಲಿರುವ ಆವಿಯಾ ಗುವ ತೈಲ ಗಂಟಲು ನೋವನ್ನು ಕಡಿಮೆ ಮಾಡಿ ಸ್ವರವನ್ನು ಒಳ್ಳೆಯ ಸ್ಥಿತಿಯಲ್ಲಿಡುತ್ತದೆ.
3. ಎಣ್ಣೆ ಜಿನುಗುವ ಚರ್ಮವಿರುವವರ ಮುಖದಲ್ಲಿ ಕಾಣಿಸಿಕೊಳ್ಳುವ ಮೊಡವೆಗಳ ನಿವಾರಣೆಗೆ ಪುದೀನಾ ಒಳ್ಳೆಯ ಔಷಧ. 15-20 ಪುದೀನಾ ಎಲೆಗೆ ಒಂದೆರಡು ಚಿಟಿಕೆ ಅರಿಶಿನದ ಪುಡಿಯನ್ನು ಸೇರಿಸಿ ಒಟ್ಟಾಗಿ ಅರೆದು ಮುಖಕ್ಕೆ ಹಚ್ಚಿಕೊಳ್ಳಬೇಕು. ಅರ್ಧ ಗಂಟೆಯ ನಂತರ ಬಿಸಿ ನೀರಿನಿಂದ ಮುಖ ತೊಳೆಯಬೇಕು. ಇದರಿಂದ ಜಿಡ್ಡು ಮಾಯವಾಗಿ ಮೊಡವೆಗಳು ನಿವಾರಣೆಯಾಗುತ್ತದೆ.
4. 15-20 ಪುದೀನಾ ಎಲೆಗಳನ್ನು ಅರೆದು ರಸ ಹಿಂಡಿ ಅದಕ್ಕೆ ಕಾಲು ಕ ಸಕ್ಕರೆ ಸೇರಿಸಿ ಕುಡಿಯುವುದರಿಂದ ಹೊಟ್ಟೆನೋವು ಕಡಿಮೆಯಾಗುತ್ತದೆ. – ಇದನ್ನೇ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಅಜೀರ್ಣ ಕಡಿಮೆಯಾಗುತ್ತದೆ.
ಇದನ್ನು ಓದಿ: ಕಾಲಿಗೆ ಸಂಬಂದಿಸಿದ ಕಾಯಿಲೆ; ಉಗುರುಸುತ್ತು ನಿವಾರಣೆಗೆ ಮನೆಮದ್ದು