1. ಬಾಳೆ ಹೆಣ್ಣು: ಬಾಳೆಯ ಉಪಯೋಗ : ಇದರ ಎಲ್ಲಾ ಭಾಗವು ಔಷಧಯುಕ್ತವಾಗಿದೆ. ಕರಿಬಾಳೆ, ಪುಟ್ಟ ಬಾಳೆ, ರಸಬಾಳೆ ನೇಂದ್ರ ಬಾಳೆ, ಕಲ್ಯಾಣ ಬಾಳೆ, ವಾಟ ಬಾಳೆ, ಬೂದುಬಾಳೆ, ಮೈಸೂರು ಬಾಳೆ ಇತ್ಯಾದಿ ಅನೇಕ
2. ದೇಹದ ಉರಿಗೆ : ದೇಹದಲ್ಲಿ ಎಲ್ಲಿಯಾದರೂ ಉರಿಯುತ್ತಿದ್ದರೆ ಆ ಜಾಗಕ್ಕೆ ತುಪ್ಪ ಸವರಿ ಬಾಳೆ ಎಲೆ ಕಟ್ಟಬೇಕು. ಬಾಳೆ ಎಲೆಯಲ್ಲಿ ಊಟ ಮಾಡುವುದು ತುಂಬಾ ಆರೋಗ್ಯಕರ, ರಸ ಬಾಳೆ ಹಣ್ಣಿನ ಜೊತೆ ಸಕ್ಕರೆ, ತುಪ್ಪ ಸೇರಿಸಿ ದಿನಾಲೂ ತಿಂದರೆ ಪುಷ್ಟಿಕರ ವಾಗಿರುತ್ತದೆ. ನೇಂದ್ರ ಬಾಳೆಹಣ್ಣನ್ನು ಸಹ ಇದೇ ರೀತಿಯ ತಿಂದರೆ ಒಳ್ಳೆಯದು.
3. ಮೂಲವ್ಯಾಧಿ : ಪ್ರತಿದಿನ ರಾತ್ರಿ ಮಲಗುವ ಮುಂಚೆ, ಸಿಪ್ಪೆ ಸಹಿತ ಏಲಕ್ಕಿಯನ್ನು ಬಾಳೆ ಹಣ್ಣಿನೊಂದಿಗೆ ಸೇವಿಸುವುದರಿಂದ ಮೂಲವ್ಯಾಧಿ ಗುಣವಾಗುವುದು. ಬಾಳೆದಿಂಡಿನ ರಸ, ಎಳನೀರು ಸೇರಿಸಿ ಸೇವಿಸಿದರೆ ಪರಿಣಾಮಕಾರಿ
4.ಕಣ್ಣಿನ ದೋಷ : ನಿತ್ಯವೂ ಬಾಳೆ ಎಲೆಯಲ್ಲಿ ಊಟ ಮಾಡಿದರೆ ಕಣ್ಣಿನ ದೃಷ್ಟಿಗೆ ಅನುಕೂಲವಾಗುವುದು. ಬಾಳೆ ಹಣ್ಣಿನಲ್ಲಿ ಜೀವಸತ್ವ ಅಧಿಕವಾಗಿರುವುದರಿಂದ ದೃಷ್ಟಿಗೆ
ಒಳ್ಳೆಯದು. ರಾತ್ರಿ ಕುರುಡು ನಿಂದ ಬಳಲುವವರ ಹೆಚ್ಚಾಗಿ ಸೇವಿಸಿದರೆ ಉತ್ತಮ.
5. ರಕ್ತ ಸ್ರಾವ : ರಕ್ತಸ್ರಾವ ತುಂಬಾ ಆದಾಗ ಬಾಳೆ ಹೂವಿನ ಪಲ್ಯ ಮಾಡಿ ತಿಂದರೆ ಕಡಿಮೆಯಾಗುತ್ತದೆ. ನೋವು ಕಡಿಮೆಯಾಗುತ್ತದೆ. ಮೊಸರಿನ ಜೊತೆ ಈ ಪಲ್ಯವನ್ನು
ಆರೋಗ್ಯಕ್ಕೆ ಒಳ್ಳೆಯದು. ರಕ್ತ ಹೀನತೆಯಿಂದ ತಿಂದರೆ ಆರೋಗ್ಯಕ್ಕೆ ಬಳಲುವವರು ಪ್ರತಿದಿನ ಸೇವಿಸಿದರೆ ಅನಿಮಿಯ ಇಲ್ಲವಾಗುತ್ತದೆ.
6.ಭೇದಿ : ಬಾಳೆ ಮೂತಿ ತಂಬುಳಿ, ಚಟ್ಟಿ ಮಾಡಿ ತಿಂದರೆ ಭೇದಿ ಕಟ್ಟುತ್ತದೆ. ಊಟದ ನಂತರ 2 ಮಾಗಿದ ಹಣ್ಣು ಸೇವಿಸಿದರೆ ಮಲಬದ್ಧತೆ ನಿವಾರಣೆಯಾಗುವುದು.
7.ಮೂತ್ರದಲ್ಲಿ ಕಲ್ಲು : ಮೂತ್ರದಲ್ಲಿ ಕಲ್ಲು ಅಥವಾ ಮೂತ್ರ ತಡೆಗೆ ಬಾಳೆ ದಿಂಡಿನ ರಸವನ್ನು ಮಾಡಿ ದಿನಾಲೂ ಒಂದು ಲೋಟದಂತೆ ಒಂದು ವಾರ ಸೇವಿಸಿದರೆ ಕಲ್ಲು ಕರುಗುತ್ತದೆ. (ಕರಿಬಾಳ ಶ್ರೇಷ್ಟ). ಬಾಳೆ ದಿಂಡಿನ ಪಲ್ಯ, ಗೊಜ್ಜು, ಮಜ್ಜಿಗೆ ಹುಳಿ ಮಾಡಿ ತಿಂದರೆ ಒಳ್ಳೆಯದು.
8.ವಿಷ ಬಾಧೆ : ವಿಷ ಕುಡಿದವರು ಬಾಳೆ ಗೆಡ್ಡೆ ರಸ ಮೇಲಿಂದ ಮೇಲೆ ಕುಡಿಸಿ, ವಾಂತಿ ಮಾಡಿಸಿದರೆ ವಿಷವಿಳಿಯುತ್ತದೆ.
ಇದನ್ನು ಓದಿ: ಮೂಲವ್ಯಾಧಿ, ಆಮಶಂಕೆಗೆ ಮನೆ ಔಷಧಿ