ಮಲಬದ್ಧತೆ, ಹೊಟ್ಟೆ ನೋವು, ಎದೆಯಲ್ಲಿ ಉರಿಯಂತಹ ಸಮಸ್ಯೆಗೆ ಮನೆಮದ್ದು ಕಾಮಕಸ್ತೂರಿ ಬೀಜಗಳು

ಕಾಮಕಸ್ತೂರಿ ಬೀಜವನ್ನು ತಿನ್ನಲು ಮಜ ಅನಿಸುತ್ತದೆ. ಆದರೆ ಅದೆಷ್ಟೋ ಜನರಿಗೆ ಕಾಮಕಸ್ತೂರಿ ಬೀಜದ ಬಗ್ಗೆ ಮಾಹಿತಿ ಇಲ್ಲ. ಈ ಬೀಜವನ್ನು ಕಾಮಕಸ್ತೂರಿ ಅಥವಾ ತುಳಸಿ ಬೀಜ ಎನ್ನಲಾಗುತ್ತದೆ. ಕಾಮಕಸ್ತೂರಿ ಬೀಜದ ಆರೋಗ್ಯ ಪ್ರಯೋಜನಗಳು ಹೀಗಿವೆ:-…

Seed of Kamakasturi

ಕಾಮಕಸ್ತೂರಿ ಬೀಜವನ್ನು ತಿನ್ನಲು ಮಜ ಅನಿಸುತ್ತದೆ. ಆದರೆ ಅದೆಷ್ಟೋ ಜನರಿಗೆ ಕಾಮಕಸ್ತೂರಿ ಬೀಜದ ಬಗ್ಗೆ ಮಾಹಿತಿ ಇಲ್ಲ. ಈ ಬೀಜವನ್ನು ಕಾಮಕಸ್ತೂರಿ ಅಥವಾ ತುಳಸಿ ಬೀಜ ಎನ್ನಲಾಗುತ್ತದೆ.

ಕಾಮಕಸ್ತೂರಿ ಬೀಜದ ಆರೋಗ್ಯ ಪ್ರಯೋಜನಗಳು ಹೀಗಿವೆ:-

1. ತೂಕವನ್ನು ಇಳಿಕೆ ಮಾಡಿಕೊಳ್ಳುವುದರಿಂದ ಹಿಡಿದು ಚರ್ಮದ ಆರೋಗ್ಯವನ್ನು ಕಾಪಾಡುವವರೆಗೆ ಕಾಮಕಸ್ತೂರಿ ಬೀಜಗಳು ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ.

Vijayaprabha Mobile App free

2.ಈ ಕಾಮ ಕಸ್ತೂರಿ ಬೀಜಗಳು ಒಮೆಗಾ 3, ಕೊಬ್ಬಿನಾಮ್ಲಗಳು, ರಂಜಕ, ಮೆಗ್ನೀಸಿಯಮ್, ವಿಟಮಿನ್ ಎ, ಬಿ, ಇ ಮತ್ತು ಕೆ, ಕ್ಯಾಲ್ಸಿಯಂ, ಮತ್ತು ಕಬ್ಬಿಣದಂತಹ ವಿವಿಧ ರೀತಿಯ ಪೋಷಕಾಂಶಗಳನ್ನು ಸಮೃದ್ದವಾಗಿ ಹೊಂದಿದೆ.

3.ಕಾಮಕಸ್ತೂರಿ ಬೀಜವನ್ನು ರಾತ್ರಿ ಸೇವನೆ ಮಾಡುವುದರಿಂದ ಕೊಬ್ಬನ್ನು ಸುಡಲು ಸಹಾಯಮಾಡುವುದಲ್ಲದೆ, ನಿಮ್ಮ ತೂಕವನ್ನು ಸಹ ಸುಲಭವಾಗಿ ಇಳಿಸಿಕೊಳ್ಳಬಹುದು.

4.ಕಾಮಕಸ್ತೂರಿ ಬೀಜವನ್ನು ಸಕ್ಕರೆಯ ಜೊತೆ ಸೇರಿಸಿ ಸೇವನೆ ಮಾಡುವುದರಿಂದ, ನಿಮ್ಮ ದೇಹದಿಂದ ವಿಷದ ಅಂಶಗಳನ್ನು ಹೊರ ಹಾಕಲು ಸಹಾಯ ಮಾಡುತ್ತದೆ.

5. ಕಾಮಕಸ್ತೂರಿ ಬೀಜ ಹೆಚ್ಚು ತಂಪಿನ ಗುಣಗಳನ್ನು ಹೊಂದಿದ್ದು, ದೇಹದ ಉಷ್ಣಾಂಶವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

6. ಇನ್ನು ಈ ಬೀಜಗಳನ್ನು ರಾತ್ರಿಯಲ್ಲಾ ನೆನೆಸಿಟ್ಟು , ಬೆಳಗ್ಗೆ ಅದಕ್ಕೆ ನಿಂಬೆ ರಸ ಹಾಕಿ ಕುಡಿಯುವುದು ಹೆಚ್ಚು ಪ್ರಯೋಜನಗಳನ್ನು ನೀಡುವುದಲ್ಲದೆ, ನಿಮ್ಮ ದೇಹದ ಹೆಚ್ಚಿನ ಉಷ್ಣಾಂಶವನ್ನು ಕಡಿಮೆ ಮಾಡುತ್ತದೆ.

7.ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು ಕಾಮಕಸ್ತೂರಿ ಬೀಜಗಳು ಹೆಚ್ಚು ಪ್ರಯೋಜನಕಾರಿಯಾಗಿದ್ದು, ರಾತ್ರಿ ನೆನಸಿ ಹಾಲಿನೊಂದಿಗೆ ಮಿಶ್ರಣ ಮಾಡಿ ಕುಡಿಯುವುದು ಉತ್ತಮ.

8. ಮಲಬದ್ಧತೆ, ಹೊಟ್ಟೆ ನೋವು, ಎದೆಯಲ್ಲಿ ಉರಿಯಂತಹ ಸಮಸ್ಯೆ ಅನುಭವಿಸುತ್ತಿದ್ದರೆ, ಉತ್ತಮ ಮನೆಮದ್ದು ಎನ್ನಲಾಗಿದ್ದು, ಇದು ಮೃದುವಾದ ಕರುಳಿನ ಚಲನೆಯನ್ನು ನಿಯಂತ್ರಿಸುತ್ತದೆ.

9. ನಿಮಗೆ ಮುಖ ಅಥವಾ ಬೇರೆ ಯಾವುದೇ ಚರ್ಮದ ಸಮಸ್ಯೆ ಇದ್ದರೆ, ಕಾಮಕಸ್ತೂರಿ ಬೀಜಗಳನ್ನು ಪುಡಿ ಮಾಡಿ, ತೆಂಗಿನ ಎಣ್ಣೆಯಲ್ಲಿ ಸೇರಿಸಿ ಹಚ್ಚುವುದರಿಂದ ಈ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.

10. ಕಾಮಕಸ್ತೂರಿ ಬೀಜಗಳನ್ನು ನಿಯಮಿತವಾಗಿ ತಿನ್ನುವುದರಿಂದ ದೇಹವು ಕಾಲಜನ್ ಅನ್ನು ಸ್ರವಿಸಲು ಸಹಾಯ ಮಾಡುವುದಲ್ಲದೆ, ನಿಮ್ಮ ಎಲ್ಲಾ ಚರ್ಮದ ಸಮಸ್ಯೆಗೆ ಫುಲ್ ಸ್ಟಾಪ್ ಹಾಕುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.