ಬೇವು ಎಲ್ಲರಿಗೂ ಪರಿಚಯವಿರುವಂತೆ ಕಹಿರುಚಿಯ ಉದಾಹರಣೆ. ಆದ್ದರಿಂದಲೇ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ವರ್ಷದ ಆರಂಭದಲ್ಲಿ ಮೊದಲನೆಯ ದಿನ ಅಂದರೆ ಯುಗಾದಿಯ ದಿನ, ಬೇವಿನ ಎಲೆಗಳನ್ನು ಜೀವನ ಕಹಿ ಅನುಭವಗಳ ದ್ಯೋತಕವಾಗಿ, ಸಿಹಿಯಾದ ಬೆಲ್ಲದೊಂದಿಗೆ ಸೇವಿಸಲಾಗುತ್ತದೆ. ಅಂದು ಬೇವಿನ ಎಲೆಗಳನ್ನು ಸೇವಿಸುವಾಗ ಪಠಿಸುವ ಶ್ಲೋಕ ಜೀವನದ ಲೌಕಿಕ ಪಾರಮಾರ್ಥಿಕ ಸ್ಥಳಗಳಲ್ಲಿ ಉತ್ತಮವಾದ ಆರೋಗ್ಯವನ್ನು ಬೇಡುವ ಸಲುವಾಗಿ ಇದೆ.
ಬೇವಿಲ್ಲದ ಊರಿಲ್ಲ, ಹಳ್ಳಿಯಿಲ್ಲ, ನಗರಗಳಿಲ್ಲ. ಅನಾದಿ ಕಾಲದಿಂದ ಬೇವನ್ನು ಅಶ್ವತ್ಥ ವೃಕ್ಷದೊಂದಿಗೆ ಬೆಳೆಸಿಕೊಂಡು ಅತ್ಯವಶ್ಯಕವಾಗಿ ಬರುತ್ತಿರುವುದು ಭಾರತೀಂರು ಸಂಪ್ರದಾರರು, ಸುಮಾರು 10 ರಿಂದ 20 ಅಡಿಗಳ ವರೆಗೆ ಬೆಳೆಯುವ ಈ ವೃಕ್ಷವನ್ನು ಸಾಲು ಮರಗಳಾಗಿ ಸಹ ಬೆಳೆಸುತ್ತಾರೆ. ಹೂಗಳು ಮಾರ್ಚ್-ಮೇ ತಿಂಗಳಲ್ಲಿ ಕಾಣಿಸುವುದಾಗಿದ್ದು, ಸ್ವಲ್ಪ ಸುವಾಸನೆಯಿಂದ ಕೂಡಿರುತ್ತದೆ. ಹಣ್ಣುಗಳು ಜೂನ್-ಆಗಸ್ಟ್ ತಿಂಗಳಲ್ಲಿ ಕಂಡು ಬರುತ್ತವೆ. ವೃಕ್ಷದ ಎಲ್ಲಾ ಭಾಗಗಳು ಒಂದಲ್ಲಾ ಒಂದು ರೀತಿಯಲ್ಲಿ ಅಂದರೆ
ವೈದ್ಯಕೀಯ, ಕೃಷಿರಂಗ, ಪರಿಸರ ಮುಂತಾದ ಕ್ಷೇತ್ರಗಳಲ್ಲಿ ತನ್ನ ಅಪಾರವಾದಂತಹ ಕೊಡುಗೆಯನ್ನು ನೀಡಿದೆ. ಆದ್ದರಿಂದಲೇ ಇದನ್ನು ‘ಹೊನ್ನಿನ ಬೇವು’ ಎಂದು ಕರೆಯಲಾಗಿದ್ದು ಇಂದಿಗೆ ಕಲ್ಪವೃಕ್ಷವಾಗಿದೆ. ಔಷಧೀಯ ಗುಣಗಳೆಂದರೆ ಸೋಂಕು ರೋಗಗಳು, ಚರ್ಮರೋಗಗಳು, ವ್ರಣಗಳು, ಮಧುಮೇಹ, ಕ್ರಿಮಿಗಳು, ಜ್ವರ ಮುಂತಾದ ಹಲವಾರು ರೋಗಗಳಲ್ಲಿ ಉಪಯುಕ್ತವಾಗಿದೆ.
ಬೇವಿನ ಉಪಯೋಗಗಳು
1, ಎಲೆಗಳನ್ನು ಸ್ವಲ್ಪ ನೀರಿನೊಂದಿಗೆ ಅರೆದು ಬರುವ ರಸವನ್ನು (1-3 ಚಮಚೆಯಷ್ಟನ್ನು) ಜೇನಿನೊಂದಿಗೆ ಸೇವಿಸಲು ಕಾಮಾಲೆ, ಹೊಟ್ಟೆಯಲ್ಲಿ ಹುಳುಗಳನ್ನು ನಿವಾರಿಸಲು ಉಪಯುಕ್ತ.
2. ಎಲೆ ಅಥವಾ ತೊಗಟೆಯನ್ನು ಒಣಗಿಸಿ ಪುಡಿ ಮಾಡಿ 6 ಚಮಚ ಲವಂಗಪುಡಿ, ದಾಲಚಿನ್ನಿ ಪುಡಿ ೧ ಚಿಟಿಗೆ ಇವುಗಳನ್ನು 200 మి.లి. ನೀರಿನಲ್ಲಿ 15 ನಿಮಿಷ ಕಾಯಿಸಿ, ನಂತರ ಶೋಧಿಸಿ, 50 ಮಿ.ಲಿ.ನಷ್ಟು ಸೇವಿಸಲು ಆಗಾಗ್ಗೆ ಬರುವ ಜ್ವರ, ವೈರಸ್ ಸೋಂಕು, ಅಜೀರ್ಣ, ಚಳಿ ಜ್ವರಗಳಲ್ಲಿ ಉಪಯುಕ್ತ.
3. ಬೇವಿನ (ಬೀಜದ) ಎಣ್ಣೆಯನ್ನು ಸಮ ಪ್ರಮಾಣದ ಅರಳೆಣ್ಣೆಯೊಂದಿಗೆ 1 ಚಮಚದಷ್ಟು ನೀಡಲು ಚರ್ಮರೋಗಿಗಳಲ್ಲಿ ಉಪಯುಕ್ತ.
4, ಹೂವಿನ ಚಟ್ಟಿ: ಹೂವನ್ನು ತುಪ್ಪದಲ್ಲಿ ಹುರಿದು, ಸ್ವಲ್ಪ ಹುಣಿಸೇಹಣ್ಣು, ಹುರಿದ ಕೆಂಪು ಮೆಣಸಿನಕಾಯಿ, ಬೇವಿನ ಎಲೆಗಳು, ಸ್ವಲ್ಪ ಉಪ್ಪು ಇವನ್ನು ಚೆನ್ನಾಗಿ ಅರೆಯಿರಿ. ಈ ಚಟ್ಟಿಯು ಅರುಚಿ, ವಾಂತಿ, ಹೊಟ್ಟೆಯಲ್ಲಿ ಹುಳುಗಳನ್ನು ನಿವಾರಿಸಲು ಉಪಯುಕ್ತ. ಅಂತೆಯೇ ಮೆಣಸಿನ ರಸಂನಲ್ಲಿ ಕರಿಮೆಣಸಿನೊಂದಿಗೆ ನೀಡಬಹುದು. ಚಿಗುರು ಕಾಂಡಗಳು ಹಲ್ಲು ಉಜ್ಜುವುದರಲ್ಲಿ ಉಪಯುಕ್ತ.