ಆರೋಗ್ಯಕ್ಕೆ ವರದಾನವಾಗಿರುವ ಕರಿಬೇವಿನ ಮಹತ್ವ ಮತ್ತು ಅದರ ಉಪಯೋಗ

ದಕ್ಷಿಣ ಭಾರತದ ಅನೇಕ ಅಡುಗೆಗಳಲ್ಲಿ ಸ್ವಾದಿಷ್ಟವಿಲ್ಲದಿದ್ದರು ಸುವಾಸನೆ ನೀಡಲು ಉಪಯೋಗಿಸಲ್ಪಡುವ ಸೊಪ್ಪು, ತರಕಾರಿಗಳಲ್ಲಿ ಕರಿಬೇವು ಬಹಳ ಶ್ರೇಷ್ಠ, ರುಚಿಯಲ್ಲಿ ಬೇವಿನಷ್ಟು ಕಹಿಯಲ್ಲದಿದ್ದರೂ ಕಪ್ಪಗಿದ್ದು ಬೇವಿನಂತೆ ವಿಶೇಷ ಗುಣಗಳಿರು ವುದರಿಂದ  ಕರಿಬೇವೆಂದು ಕರೆಯಲಾಗಿದೆ. ಕರಿಬೇವು ಸಾಮಾನ್ಯವಾಗಿ…

ದಕ್ಷಿಣ ಭಾರತದ ಅನೇಕ ಅಡುಗೆಗಳಲ್ಲಿ ಸ್ವಾದಿಷ್ಟವಿಲ್ಲದಿದ್ದರು ಸುವಾಸನೆ ನೀಡಲು ಉಪಯೋಗಿಸಲ್ಪಡುವ ಸೊಪ್ಪು, ತರಕಾರಿಗಳಲ್ಲಿ ಕರಿಬೇವು ಬಹಳ ಶ್ರೇಷ್ಠ, ರುಚಿಯಲ್ಲಿ ಬೇವಿನಷ್ಟು ಕಹಿಯಲ್ಲದಿದ್ದರೂ ಕಪ್ಪಗಿದ್ದು ಬೇವಿನಂತೆ ವಿಶೇಷ ಗುಣಗಳಿರು ವುದರಿಂದ  ಕರಿಬೇವೆಂದು ಕರೆಯಲಾಗಿದೆ.

ಕರಿಬೇವು ಸಾಮಾನ್ಯವಾಗಿ ಅಡಿಗೆ ಮನೆಯ ಹಿಂದಿನ ಅಂಗಳದಲ್ಲಿ ಬೆಳೆಯುವ ಮಟ್ಟ ಮರ. ಆಗ. ತಾನೇ ಮರದಿಂದ ಕಿತ್ತು ತಂದ ಎಲೆಗಳ ಸುವಾಸನೆಯು ఎల్ల ಅಡುಗೆಗೆ ಪರಿಮಳ ನೀಡುತ್ತದೆ. ಗಿಡವನ್ನು ಸಾಮಾನ್ಯ ಕಡ್ಡಿಗಳನ್ನು ನೆಡುವುದರಿಂದ ಬೆಳಸಬಹುದು. ಅಡುಗೆಯಲ್ಲಿ ಉಪಯೋಗಿಸುವುದರಿಂದ ಇದಕ್ಕೆ ಸಂಸ್ಕೃತಿಯಲ್ಲಿ `ಕಾಲಶಾಕ’ (ಅಂದರೆ ಕಪ್ಪು ಹಸಿರು ತರಕಾರಿ) ಎಂದು ಹೆಸರು. ಕಫ, ಪಿತ್ತ ರೋಗಗಳನ್ನು ಕಡಿಮೆ ಮಾಡುವುದಾಗಿದ್ದು, ಜಠರದ ರೋಗಗಳಲ್ಲಿ, ಮೊಳೆರೋಗದಲ್ಲಿ, ಹುಳುಗಳಲ್ಲಿ, ಆಮಶಂಕೆ ಭೇದಿ ಮುಂತಾದವುಗಳಲ್ಲಿ ಉಪಯುಕ್ತ.

ಕರಿಬೇವಿನ ಉಪಯೋಗಗಳು

Vijayaprabha Mobile App free

1.1-2 ಟೀ ಚಮಚೆಯಷ್ಟು ಎಲೆಯ ರಸವನ್ನು, 1 ಟೀ ಚಮಚ ನಿಂಬೆ ರಸವನ್ನು ಮತ್ತು ಸಕ್ಕರೆಯನ್ನು ಬೆರೆಸಿ ಸೇವಿಸುವುದರಿಂದ ಮುಂಜಾನೆ ಬರುವ ವಾಂತಿ, ಅಜೀರ್ಣ, ಅತಿಯಾಗಿ ಜಿಡ್ಡು ಪದಾರ್ಥ ಸೇವನೆಯಿಂದುಂಟಾದ ತೊಂದರೆ, ಮೂಳೆ ಸರಿಯಾಗಿ ಬೆಳೆಯದಿರುವಿಕೆ, ಮಕ್ಕಳ ಹಲ್ಲುಟ್ಟುವ ತೊಂದರೆಗಳಲ್ಲಿ ಉಪಯುಕ್ತ.

2. ಎಳೆಯದಾದ ಎಲೆಗಳನ್ನು ಜೇನಿನೊಂದಿಗೆ ನೀಡುವುದರಿಂದ ಬೇವು ಆಮಶಂಕೆ ಮತ್ತು ಮೂಳೆ ರೋಗದಲ್ಲಿ ಉತ್ತಮ. ಅಂತೆಯೇ ಎಲೆಗಳನ್ನು ಚೆನ್ನಾಗಿ ಅರೆದು ಮಜ್ಜಿಗೆಯೊಂದಿಗೆ ನೀಡಲು ಉಪಯುಕ್ತ. ಅದರೊಂದಿಗೆ ಶುಂಠಿ ಸೇರಿಸಬೇಕು.

3. ಪ್ರತಿ ಮುಂಜಾನೆ 8-10 ತಾಜಾ ಎಲೆಗಳನ್ನು ಅಗಿದು ಸೇವಿಸುವುದರಿಂದ ಮಧುಮೇಹ ರೋಗವನ್ನು ಬಾರದಿರುವಂತೆ ತಡೆಗಟ್ಟಬಹುದು. ಅಂತೆಯೇ ಅತಿ ಸೌಲ್ಯ (ಬೊಜ್ಜು) ರೋಗವನ್ನು ಬಾರದಂತೆ ಇಡಬಹುದು.

4, ಎಲೆಗಳನ್ನು ಅರೆದು ಕುರು, ಗಾಯಗಳಿಗೆ ಸ್ವಲ್ಪ ಅರಿಶಿನದೊಂದಿಗೆ ಹಚ್ಚಬಹುದು.

5. ಎಲೆಗಳನ್ನು (10-15) ನೀರಿನಲ್ಲಿ ಚೆನ್ನಾಗಿ ಅರೆದು ಎಳೆನೀರಿನೊಂದಿಗೆ ಸೇವಿಸಿದರೆ (60-100 మి.లి.) ಕಾಮಾಲೆ ರೋಗ ತಡೆಯಬಹುದು.

6. ಹಣ್ಣುಗಳನ್ನು ಅರೆದು ಸಮ ಪ್ರಮಾಣ ನಿಂಬೆ ರಸದಲ್ಲಿ ಬೆರೆಸಿ ಹಚ್ಚಲು ಸೊಳ್ಳೆ, ಇರುವೆ ಮುಂತಾದ ಕೀಟಗಳ ಕಚ್ಚುವಿಕೆಯನ್ನು ನಿವಾರಿಸಬಹುದು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.