ಈರುಳ್ಳಿ ಕಣ್ಣಲ್ಲಿ ನೀರು ತರಿಸಿದರೂ, ಆಯುರ್ವೇದದ ಪ್ರಕಾರ ಈರುಳ್ಳಿ ತಿನ್ನುವುದರಿಂದ ಶರೀರಕ್ಕೆ ಆಗುವ ಲಾಭಗಳೇನು ಗೊತ್ತಾ?

ಆಯುರ್ವೇದದ ಪ್ರಕಾರ ಈರುಳ್ಳಿಯ ಪ್ರಯೋಜನಗಳು:- 1) ಈರುಳ್ಳಿಯನ್ನು ಹಸಿಯಾಗಿ ದಿನ ಸೇವಿಸುವ ರೂಢಿ ಇಟ್ಟುಕೊಂಡರೆ ರಕ್ತದ  ವೃದ್ಧಿಯಾಗುತ್ತದೆ. 2)   ಈರುಳ್ಳಿಯನ್ನು ಸುಟ್ಟು ತಿನ್ನುವುದರಿಂದ ಅಜೀರ್ಣ ನಿವಾರಣೆಯಾಗುತ್ತದೆ. 3) ಸ್ವಲ್ಪ ಬೆಲ್ಲದೊಂದಿಗೆ ಈರುಳ್ಳಿಯನ್ನು ತಿನ್ನುವ ರೂಢಿ…

ಆಯುರ್ವೇದದ ಪ್ರಕಾರ ಈರುಳ್ಳಿಯ ಪ್ರಯೋಜನಗಳು:-

1) ಈರುಳ್ಳಿಯನ್ನು ಹಸಿಯಾಗಿ ದಿನ ಸೇವಿಸುವ ರೂಢಿ ಇಟ್ಟುಕೊಂಡರೆ ರಕ್ತದ  ವೃದ್ಧಿಯಾಗುತ್ತದೆ.

2)   ಈರುಳ್ಳಿಯನ್ನು ಸುಟ್ಟು ತಿನ್ನುವುದರಿಂದ ಅಜೀರ್ಣ ನಿವಾರಣೆಯಾಗುತ್ತದೆ.

Vijayaprabha Mobile App free

3) ಸ್ವಲ್ಪ ಬೆಲ್ಲದೊಂದಿಗೆ ಈರುಳ್ಳಿಯನ್ನು ತಿನ್ನುವ ರೂಢಿ ಇಟ್ಟುಕೊಂಡರೆ ದೇಹದ ತೂಕ ಹೆಚ್ಚಾಗುತ್ತದೆ.

4) ಊಟದ ಜೊತೆಯಲ್ಲಿ ಹಸಿ ಈರುಳ್ಳಿಯನ್ನು ನಂಚಿಕೊಂಡು ತಿಂದರೆ ಕಣ್ಣು ನೋವು ನಿವಾರಣೆಯಾಗುತ್ತದೆ.

5) ಜಜ್ಜಿದ ಈರುಳ್ಳಿಯನ್ನು ಗಾಢವಾಗಿ ಮೂಸು ನೋಡುವುದರಿಂದ ತಲೆನೋವು ಮತ್ತು ನೆಗಡಿ ಉಪಶಮನವಾಗುವುದು.

6)  ಈರುಳ್ಳಿ ಯನ್ನು ಹೆಚ್ಚಾಗಿ ಉಪಯೋಗಿಸುತ್ತಿದ್ದರೆ ವೀರ್ಯ ವೃದ್ಧಿಯಾಗುತ್ತದೆ.

7) ಚೇಳು ಕುಟುಕಿದ ಜಾಗದ ಮೇಲೆ ಜಜ್ಜಿದ ಈರುಳ್ಳಿ ತಿಕ್ಕುವುದರಿಂದ ನೋವು ನಿವಾರಣೆಯಾಗುತ್ತದೆ.

8)  ಈರುಳ್ಳಿ ಹೂವುಗಳನ್ನು ಸೇವಿಸುವುದರಿಂದ ಜೀರ್ಣಶಕ್ತಿ ಹೆಚ್ಚಾಗುತ್ತದೆ.

9)  ಈರುಳ್ಳಿ ರಸವನ್ನು ಸ್ವಲ್ಪ ಬಿಸಿ ಮಾಡಿ ಒಂದೆರಡು ತೊಟ್ಟು ಕಿವಿಗೆ ಹಾಕಿಕೊಂಡರೆ ಶೀತಕ್ಕೆ ಉಂಟಾಗಿರುವ ಕಿವಿ ನೋವು ನಿವಾರಣೆಯಾಗುವುದು.

10) ಈರುಳ್ಳಿಯನ್ನು ನುಣ್ಣಗೆ ಅರೆದು ವಸಡಿಗೆ ಮೃದುವಾಗಿ ತಿಕ್ಕುತ್ತಾ ಬಂದರೆ ದಂತಕ್ಷಯ ನಿವಾರಣೆಯಾಗುತ್ತದೆ.

11)  ಬಿಳಿ ಈರುಳ್ಳಿ ಯನ್ನು ಜಜ್ಜಿ ರಸ ತೆಗೆದು ಅರಿಶಿನ ಪುಡಿ ಯೊಂದಿಗೆ ಕಲಸಿ ತುರಿಕಜ್ಜಿ ಮೇಲೆ ಲೇಪಿಸಿದರೆ ಶೀಘ್ರವಾಗಿ ಗುಣವಾಗುವುದು.

12) ಪ್ರತಿನಿತ್ಯ ಈರುಳ್ಳಿಯನ್ನು ಹಸಿಯಾಗಿ ಹಾಗೂ ಸುಮಾರಾಗಿ ಬೇಯಿಸಿ ಕೊಂಡು ತಿನ್ನುತ್ತಿದ್ದರೆ ಹೃದಯರೋಗ ತೊಂದರೆ ಉಂಟಾಗುವುದಿಲ್ಲ,

ಇದನ್ನು ಓದಿ: ರೋಗದಿಂದ ಈರುಳ್ಳಿ ಬೆಳೆ ನಷ್ಟ; ಪರಿಹಾರಕ್ಕೆ ಒತ್ತಾಯಿಸಿ ಹರಪನಹಳ್ಳಿಯಲ್ಲಿ ನಾಳೆ ಪ್ರತಿಭಟನೆ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.