ಸೌಂದರ್ಯವನ್ನು ಹೋಲಿಸುವಾಗ ಮೊದಲಿಗೆ ಕಾಣಸಿಗುವುದು ಮುಖವೇ. ನಾವು ಸಾಮಾನ್ಯವಾಗಿ ಅನೇಕ ಮೇಕಪ್ಪ ವಸ್ತುಗಳಿಂದ ಇದನ್ನು ಆಗಾಗ ಅಲಂಕರಿಸಿಕೊಳ್ಳುತ್ತೇವೆ. ಅಂಗಡಿಗಳಲ್ಲಿ ಪೇಟೆಯಲ್ಲಿ ಮುಕ್ತ ಮಾರಾಟದಲ್ಲಿ ಸಿಗಬಹುದಾದ ಅತ್ಯಂತ ದುಬಾರಿ ಬೆಲೆಯ ವಸ್ತುಗಳಿಂದ ಇದನ್ನು ನಮ್ಮಲ್ಲಿ ದೊರೆಯಬಹುದಾದ ಗಿಡಮೂಲಿಕೆಗಳಿಂದ ಮುಖದ ಸೌಂದರ್ಯವನ್ನು ನಾನು ಕಾಪಾಡಿಕೊಳ್ಳಬಹುದು.
ಪೇಟೆಯಲ್ಲಿ ಸಿಗುವ ಪ್ರಸಾದನ ತಾತ್ಕಾಲಿಕವಾದದ್ದು, ಶಾಶ್ವತವಾಗಿ ನಿಮ್ಮ ಮುಖದ ಸೌಂದರ್ಯವನ್ನು ರಕ್ಷಿಸಿ ಕೊಳ್ಳಲು ಹಾಗೂ ಚರ್ಮದ ಶುಚಿತ್ವಕ್ಕೆ ಮೊದಲಿಗೆ ಸೋಪು ಬಳಕೆಯನ್ನು ನಿಲ್ಲಿಸಬೇಕು. ಹೊಲಸು ಹೋಗುವಂತೆ ಚರ್ಮಕ್ಕೆ ಸುಕ್ಕು ಬರದಂತೆ ಚರ್ಮವನ್ನು ರಕ್ಷಿಸಬಹುದಾದ ಪುಡಿಯನ್ನು ನೀವು ತಯಾರಿಸಿಕೊಂಡು ಬಳಸಬಹುದು.
ಕಡಲೆಕಾಳು, ಹೆಸರುಕಾಳು, ಮೆಂತ್ಯ 1:1:1/2 ಪ್ರಮಾಣದಲ್ಲಿ ಹಿಟ್ಟು ತಯಾರಿಸಿ ಇಟ್ಟುಕೊಳ್ಳಬೇಕು. ಇದನ್ನು ಸಾಮಾನ್ಯವಾಗಿ ಎಲ್ಲಾ ಕಾಲದಲ್ಲೂ ಬಳಸಬಹುದಾಗಿದೆ. ಇದರಿಂದ ಯಾವುದೇ ವ್ಯತಿರಿಕ್ತ ಪರಿಣಾಮವಾಗುವುದಿಲ್ಲ
ಮೇಲಿನ ಮೂರು ಕಾಳಿನಿಂದಾದ ಹಿಟ್ಟನ್ನು ಮೂರು ಚಮಚ ತೆಗೆದುಕೊಂಡು ಸ್ವಲ್ಪ ನೀರಿನಲ್ಲಿ ಕಲೆಸಿ ಮುಖಕ್ಕೆ ಹಚ್ಚಿಕೊಂಡು ಕ್ಷಣಹೊತ್ತು ಬಿಟ್ಟು ತೊಳೆದುಕೊಂಡರೆ ಯಾವುದೇ ಸಾಬೂನು ಗಿಂತಲೂ ಚನ್ನಾಗಿ ಸ್ವಚ್ಛಗೊಳಿಸುತ್ತದೆ, ಅಲ್ಲದೆ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ.
ಸ್ನಾನಕ್ಕೆ ಮುನ್ನ ಈ ಹಿಟ್ಟಿಗೆ ಒಂದು ಚಮಚಕ್ಕೆ ಅಷ್ಟೇ ಹಾಲು ಸೇರಿಸಿ ಕೈಕಾಲು, ಮೈಗೆ ತಿಕ್ಕಿಕೊಂಡು (ಮೃದುವಾಗಿ) ತೊಳೆಯಿರಿ.
ಈ ಮೇಲೆ ಹೇಳಿದ ಪುಡಿಗೆ ಕಸ್ತೂರಿ, ಅರಿಶಿನ, ಕಚೋರ, ಕೊಂಚ ಕರ್ಪೂರ ಕೂಡಿಸಿ ಉಪಯೋಗಿಸಬೇಕು. ಚರ್ಮದ ರಕ್ತ ಪರಿಚಲನೆ ಹೆಚ್ಚಿ ಬೆವರು ಗ್ರಂಥಿ ಉತ್ತೇಜನ ನೀಡುತ್ತದೆ. ಇದನ್ನು ವಿಶೇಷವಾಗಿ ಚಳಿಗಾಲದಲ್ಲಿ ಮಾಡುವುದು ಉತ್ತಮ.
ನಿಂಬೆ ಹಣ್ಣಿನ ಸಿಪ್ಪೆ, ಕಿತ್ತಳೆ ಹಣ್ಣಿನ ಸಿಪ್ಪೆ, ಬಳಿತ ಬೆಂಡೆಕಾಯಿ, ತುಳಸಿ, ಕಚೋರ, ಅರಿಶಿನ ಹಾಗೂ ಕಸ್ತೂರಿಯ ನ್ನು ಕೂಡಿಸಿ ಮೇಲೆ ತಿಳಿಸಿದ ಮೂರು ಹಿಟ್ಟಿನಲ್ಲಿ ಕೂಡಿಸಿ ದಿನಾಲೂ ಉಪಯೋಗ ಮಾಡುತ್ತಾ ಹೋಗುವ, ಚರ್ಮ ರೋಗಗಳು ಮಾಯವಾಗುತ್ತವೆ. ಹಾಗೇ ಮುಖದ ಕಾಂತಿ ವೃದ್ಧಿಸುತ್ತದೆ.




