Gasagase Health Benefits | ನಮ್ಮ ಅಡುಗೆ ಮನೆಯ ಡಬ್ಬದಲ್ಲಿರುವ ‘ಗಸಗಸೆ’ (Poppy Seeds) ಕೇವಲ ಪಾಯಸಕ್ಕೆ ರುಚಿ ನೀಡುವ ಪದಾರ್ಥವಷ್ಟೇ ಅಲ್ಲ. ಆಯುರ್ವೇದದಲ್ಲಿ ಇದಕ್ಕೆ ಸಂಜೀವಿನಿಯ ಸ್ಥಾನವಿದ್ದು, ನೀವು ದಿನನಿತ್ಯ ಗಸಗಸೆ ಬಳಸುವುದರಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ?
1. ಮಲಬದ್ಧತೆಗೆ ರಾಮಬಾಣ (Relieves Constipation)
ಗಸಗಸೆಯಲ್ಲಿ ನಾರಿನಂಶ (Fiber) ಹೇರಳವಾಗಿದ್ದು, ಇದು ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ ಮತ್ತು ಕರುಳಿನ ಚಲನೆಯನ್ನು ಹೆಚ್ಚಿಸುವುದಲ್ಲದೆ, ದೀರ್ಘಕಾಲದ ಮಲಬದ್ಧತೆ ಸಮಸ್ಯೆ ಇರುವವರು ಗಸಗಸೆ ಸೇವಿಸುವುದರಿಂದ ಸುಲಭವಾಗಿ ಪರಿಹಾರ ಕಾಣಬಹುದು.
2. ಗಾಢ ನಿದ್ರೆಗೆ ಸಹಕಾರಿ (Treats Insomnia)
ರಾತ್ರಿ ನಿದ್ದೆ ಸರಿಯಾಗಿ ಬರುತ್ತಿಲ್ಲವೇ? ಹಾಗಾದರೆ ಗಸಗಸೆ ನಿಮಗೆ ಬೆಸ್ಟ್ ಫ್ರೆಂಡ್. ಇದರಲ್ಲಿ ಮೆಗ್ನೀಸಿಯಮ್ ಅಂಶವಿದ್ದು, ಇದು ಒತ್ತಡವನ್ನು ಕಡಿಮೆ ಮಾಡಿ ಮನಸ್ಸನ್ನು ಶಾಂತಗೊಳಿಸಲಿದ್ದು, ಮಲಗುವ ಮುನ್ನ ಗಸಗಸೆ ಪಾಯಸ ಅಥವಾ ಹಾಲಿಗೆ ಗಸಗಸೆ ಹಾಕಿ ಕುಡಿದರೆ ಸುಖ ನಿದ್ರೆ ಬರುತ್ತದೆ.
3. ಹೊಟ್ಟೆ ನೋವಿಗೆ ಅಜ್ಜಿ ಮದ್ದು (Cures Stomach Pain)
ಅಜೀರ್ಣ ಅಥವಾ ಭೇದಿಯಿಂದ ಹೊಟ್ಟೆ ನೋವು ಬರುತ್ತಿದ್ದರೆ ಇಲ್ಲಿದೆ ಸಿಂಪಲ್ ಪರಿಹಾರವಿದ್ದು, ಸ್ವಲ್ಪ ಗಸಗಸೆಯನ್ನು ಹಂಚಿನ ಮೇಲೆ ಹುರಿದು ಪುಡಿ ಮಾಡಿ. ಇದನ್ನು ಸ್ವಲ್ಪ ಜೇನುತುಪ್ಪದೊಂದಿಗೆ ಕಲಸಿ ಸೇವಿಸಿ. ಇದು ಹೊಟ್ಟೆಯುಬ್ಬರ, ಅಜೀರ್ಣ ಮತ್ತು ಭೇದಿಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
4. ದೇಹಕ್ಕೆ ತಂಪು (Body Coolant)
ಬೇಸಿಗೆಯಲ್ಲಿ ದೇಹದ ಉಷ್ಣತೆ ಹೆಚ್ಚಾದರೆ ಬಾಯಲ್ಲಿ ಹುಣ್ಣು (Mouth Ulcers) ಬರುವುದು ಸಹಜವಾಗಿದ್ದು, ಗಸಗಸೆ ದೇಹವನ್ನು ತಂಪಾಗಿಸುವ ಗುಣ ಹೊಂದಿದೆ. ಗಸಗಸೆ ಪಾಯಸ ಅಥವಾ ಇದನ್ನು ನೆನೆಸಿ ಅರೆದು ಜ್ಯೂಸ್ ಮಾಡಿಕೊಂಡು ಕುಡಿಯುವುದರಿಂದ ದೇಹದ ಉಷ್ಣತೆ ಕಡಿಮೆಯಾಗುತ್ತದೆ.
5. ಪೋಷಕಾಂಶಗಳ ಆಗರ (Rich in Nutrients)
ಗಸಗಸೆಯಲ್ಲಿ ಕೇವಲ ರುಚಿಯಲ್ಲ, ಆರೋಗ್ಯದ ಖಜಾನೆಯೇ ಇದೆ. ಇದರಲ್ಲಿ:
- ಕ್ಯಾಲ್ಸಿಯಂ & ರಂಜಕ: ಮೂಳೆಗಳ ಆರೋಗ್ಯಕ್ಕೆ.
- ಕಬ್ಬಿಣಾಂಶ: ರಕ್ತಹೀನತೆ ತಡೆಯಲು.
- ಒಮೆಗಾ-6: ಹೃದಯದ ಆರೋಗ್ಯಕ್ಕೆ.
ಎಚ್ಚರಿಕೆ (Note): ಗಸಗಸೆ ಆರೋಗ್ಯಕ್ಕೆ ಒಳ್ಳೆಯದೇ ಆದರೂ, ಇದನ್ನು ಮಿತವಾಗಿ ಬಳಸಬೇಕು. ಅತಿಯಾದ ಸೇವನೆ ಅಥವಾ ಕೆಲವು ಔಷಧಗಳ ಜೊತೆ ಇದು ಅಡ್ಡಪರಿಣಾಮ ಬೀರಬಹುದಾಗಿದ್ದು, ಗರ್ಭಿಣಿಯರು ಮತ್ತು ಚಿಕ್ಕ ಮಕ್ಕಳಿಗೆ ನೀಡುವ ಮುನ್ನ ವೈದ್ಯರ ಸಲಹೆ ಪಡೆಯುವುದು ಉತ್ತಮ.




